Home News Hightech Theft: ಇವರು ಹೈಟೆಕ್‌ ಕಳ್ಳಿಯರು, ಕಾರಿನಲ್ಲಿ ಬರುತ್ತಾರೆ, ಎತ್ತಾಕೊಂಡು ಹೊಯ್ತಾ ಇರೋದೇ…ಅಷ್ಟಕ್ಕೂ ಇವರ ಟಾರ್ಗೆಟ್‌...

Hightech Theft: ಇವರು ಹೈಟೆಕ್‌ ಕಳ್ಳಿಯರು, ಕಾರಿನಲ್ಲಿ ಬರುತ್ತಾರೆ, ಎತ್ತಾಕೊಂಡು ಹೊಯ್ತಾ ಇರೋದೇ…ಅಷ್ಟಕ್ಕೂ ಇವರ ಟಾರ್ಗೆಟ್‌ ಏನು ಗೊತ್ತಾ?

Hightech Theft

Hindu neighbor gifts plot of land

Hindu neighbour gifts land to Muslim journalist

Hightech Theft: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಕಳ್ಳರು ನಮ್ಮ ಚಾಲಾಕಿತನ ಪ್ರದರ್ಶಿಸಿ ಚಿನ್ನ, ನಗದು ರೂಪದಲ್ಲಿ ಕಳ್ಳತನ ಎಗರಿಸುವುದನ್ನು ಗಮನಿಸಿರಬಹುದು.ಆದರೆ, ಪಂಜಾಬ್ ಮೊಹಾಲಿ ಎಂಬಲ್ಲಿ ಖತರ್ನಾಕ್ ಕಳ್ಳಿಯರ ಹೈಟೆಕ್ ಕಳ್ಳತನದ(Hightech Theft) ಕಹಾನಿ ಕೇಳಿದರೇ ನೀವೂ ಕೂಡ ಶಾಕ್ ಆಗೋದು ಗ್ಯಾರಂಟಿ!!

ಸಿಸಿಟಿವಿ ವಿಡಿಯೋದಲ್ಲಿ ಇಬ್ಬರು ಯುವತಿಯರು ಐಷಾರಾಮಿ ಕಾರಿನಲ್ಲಿ ಬಂದು ಮನೆಯಲ್ಲಿ ಯಾರು ಇರದೇ ಇರುವುದನ್ನು ಖಾತ್ರಿ ಮಾಡಿಕೊಂಡು ಕಳ್ಳತನ ಮಾಡಿದ್ದಾರೆ. ಪಂಜಾಬ್ ಮೊಹಾಲಿ(High-tech theft in Mohali) ರಾತ್ರಿ ಸಮಯದಲ್ಲಿ ಮನೆಯ ಮುಂದೆ ಅತ್ಯಾಧುನಿಕ ಕಾರೊಂದು ಬಂದು ನಿಂತಿದೆ. ಮನೆಯ ಮುಂದೆಯೇ ನಿಧಾನವಾಗಿ ದಾಟಿಕೊಂಡು ಸ್ವಲ್ಪವೇ ದೂರದಲ್ಲಿ ಕಾರು ನಿಂತಿದ್ದು, ಕೆಲವೇ ಸೆಕೆಂಡ್‌ ಗಳಲ್ಲಿ ಒಂದೇ ರೀತಿಯ ಡ್ರೆಸ್‌ ಹಾಕಿಕೊಂಡಿದ್ದ ಇಬ್ಬರು ಯುವತಿಯರು ಕಾರಿನಿಂದ ಇಳಿದು ಮನೆಯ ಕಡೆಗೆ ಬಂದು ಅವರಿಬ್ಬರೂ ಮಾಡಿದ್ದೇನು ಗೊತ್ತೇ??

ಒಬ್ಬರು ಒಂದು ಕಡೆಯ ಮನೆ ಗೇಟ್‌ ಮೇಲೆ ಇರಿಸಿದ್ದ ಹೂಕುಂಡಕ್ಕೆ ಕೈ ಹಾಕಿದ್ದು, ಮತ್ತೊಬ್ಬಳು ಕೈಹಾಕುವುದು ಮತ್ತೊಂದು ಕಡೆಯ ಗೇಟ್‌ನ ಹೂಕುಂಡಕ್ಕೆ ಕೈ ಹಾಕಿ ಕದ್ದು ಪರಾರಿಯಾಗಿದ್ದಾರೆ. ಮೊಹಾಲಿಯ ಸೆಕ್ಟರ್ 78ರ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಫ್ಲವರ್ ಪಾಟ್ ಕಳ್ಳಿಯರ ಖತರ್ನಾಕ್ ದೃಶ್ಯ ಸೆರೆಯಾಗಿದೆ. ಮನೆಯ ಮುಂದೆ ಯಾರು ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ಕಳ್ಳರು ಮನೆ ಮುಂದಿರುವ ಫ್ಲವರ್ ಪಾಟ್‌ಗಳನ್ನ ಎತ್ತಾಕೊಂಡು ಓಡಿ ಹೋಗಿದ್ದು, ಕಳೆದ ಒಂದು ವಾರದಲ್ಲಿ ಇಂತಹದೇ 10ಕ್ಕೂ ಹೆಚ್ಚು ಪ್ರಕರಣಗಳು ಮೊಹಾಲಿಯಲ್ಲಿ ನಡೆದಿದೆ ಎನ್ನಲಾಗಿದೆ. ಕಳ್ಳಿಯರು ಮಾಡಿರುವ ಈ ಖತರ್ನಾಕ್ ಕಳ್ಳತನದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ.

 

https://x.com/NikhilCh_/status/1724428432753188942?s=20

 

ಇದನ್ನು ಓದಿ: Bus Accident: ಕಂದಕಕ್ಕೆ ಉರುಳಿದ ಬಸ್ – ಭಾರೀ ಅನಾಹುತ