Home latest ಹಸುವಿನ ರೂಪದಲ್ಲಿ ಗಂಡನ ಪುನರ್‌ಜನ್ಮ ನಂಬಿಕೆ | ಹಸುವಿನ ಜೊತೆ ಮದುವೆಯಾದ ವೃದ್ದೆ !

ಹಸುವಿನ ರೂಪದಲ್ಲಿ ಗಂಡನ ಪುನರ್‌ಜನ್ಮ ನಂಬಿಕೆ | ಹಸುವಿನ ಜೊತೆ ಮದುವೆಯಾದ ವೃದ್ದೆ !

Hindu neighbor gifts plot of land

Hindu neighbour gifts land to Muslim journalist

ಭಾರತದಂತೆಯೇ ಪ್ರಪಂಚದ ಹಲವು ದೇಶಗಳಲ್ಲಿ ಮನರ್ಜನ್ಮದ ನಂಬಿಕೆ ಇದೆ. ಮನುಷ್ಯರು ಭೂಮಿಯ ಮೇಲೆ ಬೇರೆ ಯಾವುದಾದರೂ ರೂಪದಲ್ಲಿ ಮತ್ತೆ ಹುಟ್ಟುತ್ತಾರೆ ಎಂದು ನಂಬುವರೂ ಇದ್ದಾರೆ.

ಇತ್ತೀಚೆಗೆ ಕಾಂಬೋಡಿಯಾದ ವೃದ್ಧೆಯೊಬ್ಬಳ ವಿಷಯದಲ್ಲಿ ಆಗಿದ್ದು ಕೂಡ ಇದೇ ಪುನರ್ಜನ್ಮ, ಕಾಂಬೋಡಿಯಾದ ಕ್ರಾತಿ ಪ್ರಾಂತ್ಯದಲ್ಲಿ ವಾಸಿಸುವ 74 ವರ್ಷದ ಖಮ್ ಹ್ಯಾಂಗ್ ಎಂಬ ಹೆಸರಿನ ವೃದ್ಧೆಯೊಬ್ಬರು ಹಸುವಿನಲ್ಲಿ ತೀರಿ ಹೋದ ತನ್ನ ಗಂಡನ ಎಲ್ಲಾ ಗುಣಲಕ್ಷಣಗಳು ಇದೆಯೆಂದು ಹಸುವನ್ನು ಮದುವೆಯಾಗಿದ್ದಾಳೆ. ಹೀಗೆ ಮದುವೆಯಾದ ಮಹಿಳೆ ವಯೋವೃದ್ಧೆಯಾಗಿದ್ದು, ಮದುವೆಯಾಗಿದ್ದಕ್ಕೆ ಯಾವುದೇ ವೀಡಿಯೊ ಇಲ್ಲ. ಆದರೆ ಗ್ರಾಮದ ಅನೇಕ ಜನರು ಮದುವೆಯನ್ನು ನೋಡಿದ್ದೇವೆ. ಮದುವೆಯಲ್ಲಿ ಭಾಗವಹಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.

ಮರುಜನ್ಮ ಪಡೆದು ತನ್ನ ಪತಿ ಹಸುವಿನ ರೂಪದಲ್ಲಿ ಮರಳಿದ್ದಾನೆ ಎಂದು ಮಹಿಳೆಗೆ ಹೇಗೆ ಅನಿಸಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ? ಇದಕ್ಕೆ ಉತ್ತರವನ್ನು ನೋಡೋದಾದರೆ ಹಸು ಜನಿಸಿದಾಗ, ಮಹಿಳೆ ಆದರೊಂದಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಳು. ಆಗ ಹಸು ಆಕೆಯ ಕೈ ಮತ್ತು ಮುಖವನ್ನು ನೆಕ್ಕುತ್ತಿತ್ತು ಮತ್ತು ಅನೇಕ ಬಾರಿ ಮುಖಕ್ಕೆ ಮುತ್ತು ನೀಡುತ್ತಿತ್ತು.

ತನ್ನ ಪತಿ ತನ್ನನ್ನು ಹೇಗೆ ಪ್ರೀತಿಸುತ್ತಿದ್ದನೋ ಅದೇ ರೀತಿ ಹಸು ತನ್ನನ್ನು ಪ್ರೀತಿಸುತ್ತದೆ ಎಂದು ಅಂದುಕೊಂಡು ಹಸುವನ್ನು ತನ್ನ ಗಂಡನಂತೆ ಪ್ರೀತಿಸುತ್ತಾಳೆ. ಗಂಡನ ಕೋಣೆಯಲ್ಲಿ ಇಟ್ಟಿದ್ದ ದಿಂಬನ್ನು ಹಸುವಿಗೆ ಕೊಟ್ಟಿದ್ದಾಳೆ. ಅಷ್ಟೇ ಅಲ್ಲ ಆಕೆಯ ಮನೆಯಲ್ಲಿ ಹಸು ಒಟ್ಟಿಗೆ ವಾಸವಾಗಿದೆ. ಅಲ್ಲದೇ ಬಿಮ್ ತನ್ನ ಮಕ್ಕಳಿಗೂ ಇದೇ ಸೂಚನೆ ನೀಡಿದ್ದು, ಮಕ್ಕಳೂ ಕೂಡ ಈ ಹಸುವೇ ತಮ್ಮ ತಂದೆ ಎಂದು ನಂಬಿರುವುದರಿಂದ ಅವರೂ ಗೋವಿಗೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ.