

ಹಣ ಎಂದರೆ ಯಾರು ತಾನೇ ಸುಮ್ಮನಿರಲಾರ? ಹೀಗೆ ಸಿಕ್ಕಿದೆ ಚಾನ್ಸ್ ಅಂದುಕೊಂಡು ಈ ಪೋಷಕರು ಮಾಡಿದ್ದೇನು ಗೊತ್ತೇ. ಹೌದು ಮಗಳೆಂದು ನೋಡದೆ ಗರ್ಭಿಣಿಯಾಗಿದ್ದ 17 ವರ್ಷದ ಯುವತಿಯನ್ನು ಪೋಷಕರೇ 50 ಸಾವಿರ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಗುಜರಾತಿನ ವಡೋದರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯ ವಿವರ :
ಯುವತಿ ವಿಕಾಸ್ ವಾಸವ್ ಎಂಬ ಯುವಕನೊಂದಿಗೆ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು.ಈ ಬಗ್ಗೆ ಆಕೆಯ ಪೋಷಕರಿಗೂ ತಿಳಿದಿತ್ತು. ಆಕೆ ಗರ್ಭಿಣಿ ಎಂದು ತಿಳಿದಾಗ ಆಕೆಯನ್ನು ಸ್ವೀಕರಿಸಲು ಪೋಷಕರು ನಿರಾಕರಿಸಿದ್ದು, ವಾಸವನಿಗೆ ಕರೆ ಮಾಡಿ 50 ಸಾವಿರ ರೂಪಾಯಿಗೆ ಡೀಲ್ ಮಾಡಿ ಮಾರಾಟ ಮಾಡಿದ್ದಾರೆ.ನಂತರದಲ್ಲಿ ಹಣದ ಬಗ್ಗೆ ಅತಿ ಆಸೆ ಬಂದು ಪೋಷಕರು ಇನ್ನಷ್ಟು ಹಣ ಬೇಕೆಂದು ಬೇಡಿಕೆ ಇರಿಸಿದ್ದಾರೆ.
ಆರಂಭದಲ್ಲಿ 50 ಸಾವಿರಕ್ಕೆ ವಾಸವಗೆ ಮಗಳನ್ನು ಮಾರಾಟ ಮಾಡಿದ್ದ ಪೋಷಕರಿಗೆ ಸಂಬಂಧಿಯೊಬ್ಬರು ಇನ್ನಷ್ಟು ಹಣ ಪೀಕಿಸುವಂತೆ ಹೇಳಿದ್ದರು. ಯುವತಿ ಅಪ್ರಾಪ್ತೆ ಆಗಿದ್ದು, 5 ಲಕ್ಷ ರೂ ಕೇಳುವಂತೆ ಸಂಬಂಧಿಕರೊಬ್ಬರು ಯುವತಿಯ ಪೋಷಕರಿಗೆ ತಿಳಿಸಿದ್ದರು. ಆದರೆ ಅದಕ್ಕಿಂತ ಹೆಚ್ಚು ನೀಡಲು ಸಾಧ್ಯವಿರದ ಕಾರಣ ವಾಸವ ನಿರಾಕರಿಸಿದ್ದ. ಹಾಗಾಗಿ ಯುವತಿಯನ್ನು ಆಕೆಯ ಪೋಷಕರ ಮನೆಗೆ ಕಳುಹಿಸಿದ್ದ.
ಈ ಬೆಳವಣಿಗೆಯ ನಂತರ ವಡೋದರ ಜಿಲ್ಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಯುವತಿ ಘಟನೆ ಬಗ್ಗೆ ದೂರು ದಾಖಲಿಸಿದ್ದಾಳೆ. ಪೊಲೀಸರು ಯುವತಿಯ ಪೋಷಕರನ್ನು ಮತ್ತು ಯುವಕನನ್ನು ಬಂಧಿಸಿದ್ದಾರೆ.ಇದೀಗ ಯುವತಿ ಅಪ್ರಾಪ್ತೆ ಎಂದು ತಿಳಿದ ನಂತರ ವಾಸವನ ವಿರುದ್ಧ ಅತ್ಯಾಚಾರ ಪ್ರಕರಣವನ್ನೂ ದಾಖಲಿಸಲಾಗಿದೆ.













