Home News ಮಗಳು ಗರ್ಭಿಣಿ ಎನ್ನುವುದನ್ನೂ ಮರೆತು ಕ್ರೌರ್ಯ ಮೆರೆದ ತಂದೆ!! ಪ್ರೇಮಿಗಳ ದಿನದ ಮಾರನೇ ದಿನ ನಡೆದೇ...

ಮಗಳು ಗರ್ಭಿಣಿ ಎನ್ನುವುದನ್ನೂ ಮರೆತು ಕ್ರೌರ್ಯ ಮೆರೆದ ತಂದೆ!! ಪ್ರೇಮಿಗಳ ದಿನದ ಮಾರನೇ ದಿನ ನಡೆದೇ ಹೋಯಿತು ಭೀಕರ ಕೊಲೆ

Hindu neighbor gifts plot of land

Hindu neighbour gifts land to Muslim journalist

ಅವರಿಬ್ಬರದ್ದು ಬರೋಬ್ಬರಿ ಮೂರು ವರ್ಷದ ನಿಷ್ಕಲ್ಮಶ ಪ್ರೀತಿ, ಆ ಪ್ರೀತಿಯು ಒಂದಾಗಲು ಆ ಜೋಡಿಯು ಹೆತ್ತವರ ವಿರೋಧದ ನಡುವೆಯೂ ಸಪ್ತಪದಿ ತುಳಿದಿತ್ತು.ಆದರೀಗ ಅಲ್ಲೊಂದು ಕೊಲೆಯೇ ನಡೆದಿದ್ದು, ತನ್ನ ಜೀವಕ್ಕೆ ಜೀವದಂತಿದ್ದ ಪತಿಯ ಮರಣದಿಂದಾಗಿ ಗರ್ಭಿಣಿ ಕಣ್ಣೀರಿಡುತ್ತಿರುವ ಪರಿಯನ್ನು ಕಂಡಾಗ ಕಲ್ಲು ಮನಸ್ಸು ಕೂಡಾ ಕರಗದೇ ಇರದು.

ಹೌದು, ಇಂತಹದೊಂದು ಘಟನೆ ನಡೆದದ್ದು ವಿಜಯಪುರದಲ್ಲಿ. ಒಂದೇ ಜಾತಿಯವರಾಗಿದ್ದರೂ ಕೂಡಾ ಪ್ರೀತಿಸಿ ವಿವಾಹವಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಯುವತಿಯ ತಂದೆಯೇ ವಿಲನ್ ಆಗಿ ಕಾಡಿದ್ದು, ಯುವತಿ ಗರ್ಭಿಣಿ ಎನ್ನುವುದನ್ನೂ ಮರೆತು ಬರ್ಬರವಾಗಿ ಕೊಚ್ಚಿ ಕೊಲ್ಲಲಾಗಿದೆ.ಮೃತ ಯುವಕನನ್ನು ಮುಸ್ತಕಿನ್ ಕೂಡಗಿ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೃತ ಯುವಕ ಹಾಗೂ ಗರ್ಭಿಣಿ ಯುವತಿ ಒಂದೇ ಧರ್ಮದವರಾಗಿದ್ದು ಮೂರು ವರ್ಷಗಳಿಂದ ಪ್ರೀತಿಸಿ ಮದುವೆಯೂ ಆಗಿದ್ದರು. ಆದರೆ ಇದಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದು ಈ ಮೊದಲು ಒಂದೆರಡು ಬಾರಿ ಯುವಕನ ಕೊಲೆಗೆ ಸ್ಕೆಚ್ ಹಾಕಿದ್ದರು. ಇತ್ತ ಯುವತಿ ನಮಗೆ ಅಪಾಯ ಇದೆ ಎಂದು ಪೊಲೀಸರ ಮೊರೆ ಹೋಗಿದ್ದಳು.

ಆದರೆ ಪ್ರೇಮಿಗಳ ದಿನದ ಮರುದಿನ ಯುವಕನನ್ನು ಕೊಲೆ ನಡೆಸಿದ್ದು ಯುವತಿಯು ಗರ್ಭಿಣಿ ಎಂಬುವುದನ್ನು ಮರೆತು ಆಕೆಯ ತಂದೆಯೇ ರಾಕ್ಷಸ ರೂಪ ತಾಳಿದ್ದಾನೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.