Home latest ತಲೆಮರೆಸಿಕೊಂಡಿದ್ದ ಪಿಎಫ್‌ಐ ನಾಯಕ ರವೂಫ್ ಬಂಧನ

ತಲೆಮರೆಸಿಕೊಂಡಿದ್ದ ಪಿಎಫ್‌ಐ ನಾಯಕ ರವೂಫ್ ಬಂಧನ

Hindu neighbor gifts plot of land

Hindu neighbour gifts land to Muslim journalist

ಪಿಎಫ್‌ಐ ಸಂಘಟನೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದ ಕೇರಳದ ಮಾಜಿ ಕಾರ್ಯದರ್ಶಿ ರವೂಫ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದ್ದಾರೆ.

ರಾಷ್ಟ್ರೀಯ ತನಿಖಾ ದಳ ಕೇರಳದಲ್ಲಿ ದಾಳಿ ನಡೆಸಿದ ದಿನದಿಂದ ರವೂಫ್ ತಲೆಮರೆಸಿಕೊಂಡಿದ್ದಲ್ಲದೆ, ದೇಶದ ಹಲವಾರು ರಾಜ್ಯಗಳಲ್ಲಿ ಬಂಧಿತ ರವೂಫ್ ಆಶ್ರಯಪಡೆದಿದ್ದ ಎನ್ನಲಾಗಿದೆ.

ಸ್ಪಷ್ಟ ಮಾಹಿತಿ ಕಲೆ ಹಾಕಿದ ಪೊಲೀಸರು ಗುರುವಾರ ರಾತ್ರಿ ಪಾಲಕ್ಕಾಡ್‌ನಲ್ಲಿರುವ ಆತನ ಮನೆಯಲ್ಲೇ ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಜಾರಿ ನಿರ್ದೇಶನಾಲಯ (ED), ಮತ್ತು ರಾಜ್ಯ ಪೊಲೀಸರು, ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 21 ರಂದು ದಾಳಿ ನಡೆಸಿದ್ದಾರೆ.

ಮೊದಲ ದಿನದಂದು 106 ಪಿಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ. ಎರಡನೆಯ ಬಾರಿ ಸುಮಾರು 247 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ.

“ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ ಪಿಎಫ್ಐ ನ ಅಂತರಾಷ್ಟ್ರೀಯ ಸಂಪರ್ಕಗಳ ನಿದರ್ಶನಗಳಿವೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪಿಎಫ್‌ಐ ದಮನ ಮತ್ತು ಸಂಘಟನೆಯ ಹಲವಾರು ನಾಯಕರ ಬಂಧನವಾದ ಒಂದು ತಿಂಗಳು ಬಳಿಕ ತಲೆಮರೆಸಿಕೊಂಡಿದ್ದ ಕೇರಳದ ಮಾಜಿ ಕಾರ್ಯದರ್ಶಿ ರವೂಫ್ ನನ್ನು ಗುರುವಾರ ರಾತ್ರಿ ಆತನ ಮನೆಯಿಂದಲೇ ಬಂಧಿಸಲಾಗಿದ್ದು, ಆದರೆ ಯಾವ ಪ್ರಕರಣದಲ್ಲಿ ರವೂಫ್ ಬಂಧನವಾಗಿದೆ ಎಂಬ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ.