Home News Pavan Kalyan: ಅಲ್ಲು ಅರ್ಜುನ್ ಬಂಧನದ ಬಗ್ಗೆ ತೆಲಂಗಾಣ ಪೊಲೀಸರ ತಪ್ಪಿಲ್ಲ ಎಂದ ಪವನ್ ಕಲ್ಯಾಣ್

Pavan Kalyan: ಅಲ್ಲು ಅರ್ಜುನ್ ಬಂಧನದ ಬಗ್ಗೆ ತೆಲಂಗಾಣ ಪೊಲೀಸರ ತಪ್ಪಿಲ್ಲ ಎಂದ ಪವನ್ ಕಲ್ಯಾಣ್

Hindu neighbor gifts plot of land

Hindu neighbour gifts land to Muslim journalist

Pavan Kalyan: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ವಿರುದ್ಧ ಕ್ರಮಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಕಾನೂನು ಎಲ್ಲರಿಗೂ ಒಂದೇ ಮತ್ತು ಪೊಲೀಸರು ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು “ಮಹಾನ್ ನಾಯಕ” ಎಂದು ಹೊಗಳಿದ್ದಾರೆ. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬವನ್ನು ಮೊದಲು ಭೇಟಿಯಾಗಬೇಕಿತ್ತು ಎಂದು ಅಲ್ಲು ಅರ್ಜುನ್‌ಗೆ ಸಲಹೆ ನೀಡಿದರು. ಸೋಮವಾರ (ಡಿಸೆಂಬರ್ 30, 2024) ಮಂಗಳಗಿರಿಯಲ್ಲಿ ಪತ್ರಕರ್ತರೊಂದಿಗೆ ಉಪಮುಖ್ಯಮಂತ್ರಿ, ಚಲನಚಿತ್ರ ನಟ ಕಲ್ಯಾಣ್ ಅವರು ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದ ಘಟನೆಯ ಕುರಿತು ಹೇಳಿದರು.

ಇಂತಹ ಘಟನೆಗಳನ್ನು ತಡೆಯಲು ನಟ ಏನು ಮಾಡಬಹುದಿತ್ತು ಎಂದು ಪವನ್ ಕಲ್ಯಾಣ್ ಅವರನ್ನು ಕೇಳಿದಾಗ, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಸಂತ್ರಸ್ತೆಯ ಕುಟುಂಬವನ್ನು ಮೊದಲೇ ಭೇಟಿ ಮಾಡಿದ್ದರೆ ಚೆನ್ನಾಗಿತ್ತು. ಟೆನ್ಷನ್ ಕಡಿಮೆ ಆಗ್ತಿತ್ತು ಎಂದು ಹೇಳಿದರು. ತೆಲಂಗಾಣ ಮುಖ್ಯಮಂತ್ರಿ ರೆಡ್ಡಿಯನ್ನು ಹೊಗಳಿದ ಆಂಧ್ರ ಉಪ ಸಿಎಂ, ಅವರು ಸಾಮಾನ್ಯ ಹಿನ್ನೆಲೆಯಿಂದ ಹೊರಹೊಮ್ಮಿದ ನಾಯಕ ಎಂದು ಹೇಳಿದ್ದಾರೆ. ರೇವಂತ್ ರೆಡ್ಡಿ ಮಹಾನ್ ನಾಯಕ, ವೈಎಸ್‌ಆರ್‌ಸಿಯಂತೆ ಕೆಲಸ ಮಾಡಿಲ್ಲ. ಆದರೆ, ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಮುಂದೆ ಅಥವಾ ತೆರೆಮರೆಯಲ್ಲಿ ಏನಾಯಿತು ಎಂಬುದು ನನಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಹೇಳಿದರು.

ಅಲ್ಲು ಅರ್ಜುನ್ ಪುಷ್ಪ 2 ಪ್ರದರ್ಶನಕ್ಕಾಗಿ ಸಂಧ್ಯಾ ಥಿಯೇಟರ್‌ಗೆ ಬಂದಿದ್ದರು. ಚಿತ್ರನಟ ಬಂದಿದ್ದರಿಂದ ಅಲ್ಲಿ ಗೊಂದಲ ಉಂಟಾಗಿತ್ತು. ಘಟನೆಯಲ್ಲಿ 35 ವರ್ಷದ ಮಹಿಳೆ ರೇವತಿ ಸಾವನ್ನಪ್ಪಿದ್ದು, ಆಕೆಯ ಮಗ ಗಾಯಗೊಂಡಿದ್ದಾನೆ. ಇದಾದ ಬೆನ್ನಲ್ಲೇ ಹೈದರಾಬಾದ್ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.