Home latest Old Pension : ಹಳೆಯ ಪಿಂಚಣಿ ಕುರಿತು ಮುಖ್ಯವಾದ ಮಾಹಿತಿ

Old Pension : ಹಳೆಯ ಪಿಂಚಣಿ ಕುರಿತು ಮುಖ್ಯವಾದ ಮಾಹಿತಿ

Hindu neighbor gifts plot of land

Hindu neighbour gifts land to Muslim journalist

ಹಳೆಯ ಪಿಂಚಣಿ ಯೋಜನೆ (OPS) ಕುರಿತು ದೇಶದಾದ್ಯಂತ ಭಾರೀ ಚರ್ಚೆ ನಡೆಯುತ್ತಿವೆ. ಈ ಮಧ್ಯೆ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಪದ್ಧತಿ ಜಾರಿಯಾಗುತ್ತಿದ್ದರೆ, ಅನೇಕ ರಾಜ್ಯಗಳಲ್ಲಿ ಇದನ್ನು ಸಂಪೂರ್ಣವಾಗಿ ವಿರೋಧಿಸಲಾಗಿದೆ. ಇದೀಗ ಹೊಸ ಮತ್ತು ಹಳೆಯ ಪಿಂಚಣಿ ಯೋಜನೆ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಮಹತ್ವದ ಮಾಹಿತಿಯೊಂದನ್ನು ತಿಳಿಸಿದ್ದಾರೆ.

ಸಂದರ್ಶನದಲ್ಲಿ ರಘುರಾಮ್ ರಾಜನ್ ಹಳೆಯ ಪಿಂಚಣಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ಚಿಲ್ಲರೆ ಸಾಲಗಳ ಮೇಲೆ ಹೆಚ್ಚು ಗಮನಬೇಡ ಎಂದು ಬ್ಯಾಂಕುಗಳಿಗೆ ಹೇಳಿದ್ದಾರೆ. ಕಾರಣ ಏನೆಂದರೆ, ಹಿಂಜರಿತದ ಸಂದರ್ಭದಲ್ಲಿ ಸಂಭಾವ್ಯ ಅಪಾಯಗಳು ಉಂಟಾಗಬಹುದು ಎಂಬುದಾಗಿದೆ. ವರ್ಲ್ಡ್ ಎಕನಾಮಿಕ್ ಫೋರಂ ಹೊರತುಪಡಿಸಿ, ಹೊಸ ಪಿಂಚಣಿ ಯೋಜನೆಯನ್ನು ಅಳವಡಿಸಿಕೊಳ್ಳುವುದು ಸರಿಯಾದದ್ದೇ ಎಂದು ಅವರು ಹೇಳಿದ್ದಾರೆ.

ಯಾಕಂದ್ರೆ, ಹಳೆಯ ಪಿಂಚಣಿ ಯೋಜನೆ ದೊಡ್ಡ ಹೊಣೆಗಾರಿಕೆ ಆಗಿದೆ‌. ಆದರೆ ಈ ಹೊಣೆಗಾರಿಕೆಯನ್ನು ಗುರುತಿಸದ ಕಾರಣ ಸರ್ಕಾರಗಳು ವ್ಯಾಖ್ಯಾನಿತ ಪ್ರಯೋಜನ ಯೋಜನೆಗಳನ್ನು ಅಳವಡಿಸಿಕೊಳ್ಳುವುದು ಸುಲಭವಾಗಿದೆ. ಸದ್ಯ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಂಜಾಬ್‌, ಹಿಮಾಚಲ ಪ್ರದೇಶಗಳಲ್ಲಿ ಹಲವು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಯನ್ನು ಅಳವಡಿಸಿಕೊಂಡಿವೆ. ಈ ಯೋಜನೆಯಿಂದ ಸಮಾಜದಲ್ಲಿನ ದುರ್ಬಲ ವರ್ಗದವರಿಗೆ, ದೀನರಿಗೆ ಪ್ರಯೋಜನವಾಗಬೇಕು ಎಂದು ರಾಜನ್ ಸಂದರ್ಶನದಲ್ಲಿ ಹೇಳಿದರು.

ಅಲ್ಲದೆ, ಬ್ಯಾಂಕ್‌ಗಳು ಮೂಲಸೌಕರ್ಯ, ಸಾಲಗಳನ್ನು ನೀಡುವಾಗ ಇರುವಂತಹ ಎಲ್ಲಾ ಅಪಾಯಗಳನ್ನು ಪರಿಶೀಲನೆ ನಡೆಸಬೇಕು. ಈ ಹಿಂದೆ 2007 ಮತ್ತು 2009 ರ ನಡುವೆ, RBI ಮೂಲಸೌಕರ್ಯ ಸಾಲಗಳತ್ತ ಮುಖ ಮಾಡಿತ್ತು. ಆ ನಂತರ ಸಮಸ್ಯೆಗಳು ಹುಟ್ಟಿಕೊಂಡವು ಎಂದು ರಘುರಾಮ್ ರಾಜನ್ ಹೇಳಿದರು.