Home News ಫ್ಲಿಪ್​ಕಾರ್ಟ್ ನೀಡುತ್ತಿದೆ ಭರ್ಜರಿ ಆಫರ್ | 45 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಐಫೋನ್​ 14...

ಫ್ಲಿಪ್​ಕಾರ್ಟ್ ನೀಡುತ್ತಿದೆ ಭರ್ಜರಿ ಆಫರ್ | 45 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಐಫೋನ್​ 14 ಸ್ಮಾರ್ಟ್​​ಫೋನ್ !!

Hindu neighbor gifts plot of land

Hindu neighbour gifts land to Muslim journalist

ಐಫೋನ್ ಅಂದ್ರೆ ಸಾಕು ಜನ ಮುಗಿಬೀಳುತ್ತಾರೆ. ಆದ್ರೆ ಇದರ ಬೆಲೆ ಕೈಗೆಟುಕದಷ್ಟು ಎತ್ತರದಲ್ಲಿದೆ. ಜನ ಸಾಮಾನ್ಯರಂತೂ ಇದನ್ನು ಕೊಳ್ಳುವ ಕನಸು ಕಾಣಬೇಕೇ ಹೊರತು ಖರೀದಿಸಲು ಸಾಧ್ಯವಾಗೋದಿಲ್ಲ, ಅಷ್ಟು ಬೆಲೆ ಇದೆ. ಆದರೆ ಇದೀಗ ಈ ಐಫೋನ್ ಮೇಲೆ ಭರ್ಜರಿ ಆಫರ್ ನೀಡಿದ್ದು, ಇದರಿಂದ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಈ ಫೋನ್ ಲಭ್ಯವಾಗಲಿದೆ.

ಸದ್ಯ ಮಾರುಕಟ್ಟೆಗೆ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಕೆಲವೊಂದು ಭಾರೀ ಆಫರ್ ನಿಂದ ಜನರನ್ನು ಸೆಳೆಯುತ್ತದೆ. ಇದೀಗ ಜನಪ್ರಿಯ ಇಕಾಮರ್ಸ್​ ವೆಬ್​ಸೈಟ್ ಆಗಿರುವ ಫ್ಲಿಪ್​ಕಾರ್ಟ್​, ಐಫೋನ್ 14 ಸ್ಮಾರ್ಟ್​​ಫೋನ್ (IPhone 14 Smartphone)​ ಮೇಲೆ ಭರ್ಜರಿ ಆಫರ್ ನೀಡುತ್ತಿದೆ.

ಫ್ಲಿಪ್​ಕಾರ್ಟ್​, ಐಫೋನ್ 14 ಸ್ಮಾರ್ಟ್​ಫೋನ್​ ಮೇಲೆ ಭಾರೀ ಆಫರ್ ನೀಡುತ್ತಿದ್ದು, ರೂ. 7,401 ದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಮೂಲಕ ಐಫೋನ್​ 14ನ ಬೇಸಿಕ್ ಮಾಡೆಲ್ ಗ್ರಾಹಕರಿಗೆ ಕೇವಲ 72,499 ರೂ.ಗೆ ಖರೀದಿಗೆ ಲಭ್ಯವಾಗಲಿದೆ. ಈ ಫೋನ್ ಮೇಲೆ ಬ್ಯಾಂಕ್ ಆಫರ್ಸ್ ಕೂಡ ಲಭ್ಯವಿದ್ದು, ನೀವು ಹೆಚ್​ಡಿಎಫ್​​ಸಿ ಬ್ಯಾಂಕ್​ ಕಾರ್ಡ್​​ ಮೂಲಕ ಖರೀದಿಸುವುದಾದರೆ, 4000 ರೂ. ವರೆಗೆ ರಿಯಾಯಿತಿ ಇದ್ದು, 11,401 ರೂಪಾಯಿ ಆಫರ್ ನಿಂದ ಐಫೋನ್ 14 ಸ್ಮಾರ್ಟ್​​ಫೋನ್ ಅನ್ನು ಕೇವಲ 68,499 ರೂಪಾಯಿಗೆ ಖರೀದಿಸಬಹುದಾಗಿದೆ.

ಇದಿಷ್ಟೇ ಅಲ್ಲದೆ, ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು, ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಮಾಡಿದರೆ, ಗರಿಷ್ಠ 23,000 ರೂ.ವರೆಗೆ ರಿಯಾಯಿತಿ ಸಿಗಲಿದೆ. ಆಗ ಐಫೋನ್​ 14 ರೂ. 45,000 ಗಿಂತಲೂ ಅಗ್ಗದ ಬೆಲೆಗೆ ಲಭ್ಯವಾಗುತ್ತದೆ. ಇನ್ನು ಇದರ ಫೀಚರ್ಸ್ ಹೇಗಿದೆ ಎಂದು ನೋಡೋಣ.

ಫೀಚರ್ಸ್ ಹೇಗಿದೆ ?

ಈ ಸ್ಮಾರ್ಟ್​​ಫೋನ್​ ಮುಂಭಾಗದಲ್ಲಿ ಸೆರಾಮಿಕ್ ಶೀಲ್ಡ್ ಹಾಗೂ ಫ್ಲಾಟ್-ಎಡ್ಜ್ ಏರೋಸ್ಪೇಸ್-ಗ್ರೇಡ್ ಅಲ್ಯೂಮಿನಿಯಂ ಫ್ರೇಮ್​ನ ವಿನ್ಯಾಸ ಪಡೆದಿದೆ. ಐಫೋನ್​ 14, 6.1-ಇಂಚಿನ ಡಿಸ್​ಪ್ಲೇಯನ್ನು ಹೊಂದಿದ್ದು, ಈ ಡಿಸ್ಪ್ಲೇ 1200 ನಿಟ್ಸ್​ ಬ್ರೈಟ್‌ನೆಸ್, ಹ್ಯಾಪ್ಟಿಕ್ ಟಚ್, P3 ವೈಡ್ ಕಲರ್, ಟ್ರೂ ಟೋನ್, 20,00,000:1 ಕಾಂಟ್ರಾಸ್ಟ್, ಓಲಿಯೋಫೋಬಿಕ್ ಕೋಟಿಂಗ್ ಫೀಚರ್ಸ್​ ಹೊಂದಿರುವ ಉತ್ತಮ ಸ್ಮಾರ್ಟ್ ಫೋನ್ ಆಗಿದೆ.

ಇನ್ನು ಕ್ಯಾಮೆರಾ ಫೀಚರ್ಸ್​ ಹೇಗಿದೆ ಅಂದ್ರೆ, ಇದರಲ್ಲಿ 12ಎಮ್​​ಪಿ ಮುಖ್ಯ ಕ್ಯಾಮೆರಾ ಹಾಗೂ 12ಎಮ್​​ಪಿ ಅಲ್ಟ್ರಾ ವೈಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಐಫೋನ್ 14 ಸ್ಮಾರ್ಟ್​ಫೋನ್ A15 ಬಯೋನಿಕ್ SoC ಪ್ರೊಸೆಸರ್ ಅನ್ನು ಹೊಂದಿದ್ದು,​ ಆಪರೇಟಿಂಗ್ ಸಿಸ್ಟಮ್ ಐಓಎಸ್​ 16 ನಲ್ಲಿ ಕಾರ್ಯನಿರ್ವಹಿಸಲಿದೆ. ಐಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ. ಉತ್ತಮ ಫೀಚರ್ ನೊಂದಿಗೆ, ಕಡಿಮೆ ಬೆಲೆಗೆ ಲಭ್ಯವಾಗಲಿದೆ.