Home International Nostradamus: 2024ರಲ್ಲಿ ಭಾರತ-ಚೀನಾ ಯುದ್ಧ?! ಭಯ ಹುಟ್ಟಿಸಿದ ನಾಸ್ಟ್ರಾಡಾಮಸ್‌ ಭವಿಷ್ಯ!!

Nostradamus: 2024ರಲ್ಲಿ ಭಾರತ-ಚೀನಾ ಯುದ್ಧ?! ಭಯ ಹುಟ್ಟಿಸಿದ ನಾಸ್ಟ್ರಾಡಾಮಸ್‌ ಭವಿಷ್ಯ!!

Hindu neighbor gifts plot of land

Hindu neighbour gifts land to Muslim journalist

Nostradamus : ಫ್ರಾನ್ಸ್ನ ಪ್ರಮುಖ ಕಾಲಜ್ಞಾನಿ ನಾಸ್ಟ್ರಾಡಾಮಸ್ ಅವರು 2024ರಲ್ಲಿ (New Year 2024)ಜಗತ್ತಿನಾದ್ಯಂತ ನಡೆಯಲಿರುವ ಘಟನೆಗಳ ಕುರಿತು ಭವಿಷ್ಯ ನುಡಿದಿದ್ದಾರೆ. ಫ್ರಾನ್ಸ್ ನ ಕಾಲಜ್ಞಾನಿ ಎಂದೇ ಖ್ಯಾತಿ ಪಡೆದ ನಾಸ್ಟ್ರಾಡಾಮಸ್ (Nostradamus)ಅವರು ನುಡಿದ ಭವಿಷ್ಯವಾಣಿಯು ಶೇ.70ರಷ್ಟು ನಿಜವಾಗಿವೆ ಎಂದು ಹೇಳಲಾಗುತ್ತದೆ.

 

ಭಾರತ ಸೇರಿ ಜಗತ್ತೇ ಹೊಸ ವರ್ಷವನ್ನು (New Year 2024) ಸ್ವಾಗತಿಸಲು ಕಾತುರದಿಂದ ಎದುರು ನೋಡುತ್ತಿದೆ. ಈ ನಡುವೆ, ಫ್ರಾನ್ಸ್ನ ಖ್ಯಾತ ಕಾಲಜ್ಞಾನಿ ನಾಸ್ಟ್ರಾಡಾಮಸ್ ಅವರು 2024ರಲ್ಲಿ (Nostradamus Predictions) ಸಂಭವಿಸುವ ಘಟನೆಗಳ ಕುರಿತು ನುಡಿದ ಭವಿಷ್ಯವಾಣಿ ಮುನ್ನಲೆಗೆ ಬಂದಿದ್ದು, ಹೊಸ ವರ್ಷ 2024ರಲ್ಲಿ (New Year 2024)ಏನೆಲ್ಲ ಘಟನೆಗಳು ನಡೆಯಲಿವೆ ಗೊತ್ತಾ??

 

2024ರಲ್ಲಿ ಜಗತ್ತಿನಲ್ಲಿ ಪ್ರಾಕೃತಿಕ ವಿಕೋಪಗಳು, ಹವಾಮಾನ ಬದಲಾವಣೆಯ ಪರಿಣಾಮಗಳು ಉಂಟಾಗುತ್ತವೆ ಎಂದು ನಾಸ್ಟ್ರಾಡಾಮಸ್ ಭವಿಷ್ಯವಾಣಿ ನುಡಿದಿದ್ದಾರೆ. ಇದರ ಜೊತೆಗೆ ಜಗತ್ತಿನ ಹಲವೆಡೆ ಭಾರಿ ಮಳೆಯಿಂದ ಸಾವಿರಾರು ಮಂದಿ ಜೀವ ಕಳೆದುಕೊಳ್ಳಲಿದ್ದಾರೆ. ಅದೇ ರೀತಿ, ಭೀಕರ ಬರದಿಂದ ನಾಗರಿಕರು ತತ್ತರಿಸಿಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

 

ಅಮೆರಿಕದ ಖ್ಯಾತ ಚರ್ಚ್ಗೆ ಹೊಸ ಪೋಪ್ ಬರಲಿದ್ದು, ಹೊಸ ಪೋಪ್ ಚರ್ಚ್ ಅನ್ನು ನಡೆಸಲಿದ್ದಾರೆ. ಈಗಿರುವ ಪೋಪ್ ಫ್ರಾನ್ಸಿಸ್ ಅವರು ನಿಧನರಾಗಲಿದ್ದಾರೆ ಎಂದು ನಾಸ್ಟ್ರಾಡಾಮಸ್ ಅವರು ಭವಿಷ್ಯ ನುಡಿದಿದ್ದಾರೆ. 2024ರಲ್ಲಿ ಭಾರತದ ಸಾಗರ ಪ್ರದೇಶದಲ್ಲಿ ಚೀನಾ ಯುದ್ಧನೌಕೆಗಳನ್ನು ನಿಯೋಜಿಸುವ ಹಿನ್ನೆಲೆ ನೌಕಾ ಯುದ್ಧ ನಡೆಯಲಿದೆ. ಅದೇ ರೀತಿ, ಸಂಘರ್ಷದಲ್ಲಿ ಚೀನಾ ಸೋಲನುಭವಿಸಲಿದೆ ಎನ್ನಲಾಗಿದೆ. ಅದೇ ರೀತಿ, ಕಿಂಗ್ ಚಾರ್ಲ್ಸ್ ಬದಲಾಗಿ ಪ್ರಿನ್ಸ್ ಹ್ಯಾರಿ ಅವರು ಬ್ರಿಟನ್ ಅರಸನಾಗಲಿರುವ ಕುರಿತು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ.