Home Breaking Entertainment News Kannada Naresh-Pavitra Lokesh: ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ನಿಜ ಜೀವನ ಕಥೆ ಒಳಗೊಂಡ ಸಿನಿಮಾ...

Naresh-Pavitra Lokesh: ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ನಿಜ ಜೀವನ ಕಥೆ ಒಳಗೊಂಡ ಸಿನಿಮಾ ರೆಡಿ | ನಾಯಕ, ನಾಯಕಿ ಯಾರೆಂಬ ಕುತೂಹಲವೇ? ಇಲ್ಲಿದೆ ಉತ್ತರ!

Hindu neighbor gifts plot of land

Hindu neighbour gifts land to Muslim journalist

ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅವರ ನಿಜ ಜೀವನ ಕಥೆಯನ್ನೊಳಗೊಂಡ ಸಿನಿಮಾ ಇದೀಗ ಸಿದ್ಧವಾಗುತ್ತಿದ್ದು, ಇದರಲ್ಲಿ ಅವರಿಬ್ಬರು ಜೊತೆಗೆ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ನಟ ಮಹೇಶ್ ಬಾಬು ಅವರ ಸಹೋದರ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ ಅವರ ಸಂಬಂಧವು ಕಳೆದ ಕೆಲ ತಿಂಗಳುಗಳಿಂದ ಸಾಮಾಜಿಕ ಮಾಧ್ಯಮ ಸೇರಿದಂತೆ ಸಿನಿ ಪ್ರೇಕ್ಷಕರ ಬಾಯಲ್ಲಿ ಹರಿದಾಡುತ್ತಿದೆ. ಅವರು ತಮ್ಮ ಸಂಬಂಧವನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ಬಹಳಷ್ಟು ಇವೆಂಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಸಂಬಂಧದ ವದಂತಿಗಳಿಗೆ ಪುಷ್ಠಿ ನೀಡುತ್ತಿದ್ದಾರೆ.

ಇವರಿಬ್ಬರೂ ಈ ಹಿಂದೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹಾಗೇ ಇತ್ತೀಚೆಗೆ ಹಾಸ್ಯನಟ ಅಲಿ ಅವರ ‘ಅಂದರು ಬಾಗುಂದಲಿ ಅಂಧುಲೋ ನೇನುಂಡಲಿ’ ಚಿತ್ರದಲ್ಲೂ ನಟಿಸಿದ್ದಾರೆ. ವರದಿಗಳ ಪ್ರಕಾರ ನರೇಶ್ ಮತ್ತು ಪವಿತ್ರಾ ಲೋಕೇಶ್ ತಮ್ಮ ವೈಯಕ್ತಿಕ ಜೀವನವನ್ನು ಆಧರಿಸಿದ ಚಲನಚಿತ್ರವನ್ನು ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈ ಚಿತ್ರವು ನರೇಶ್ ಮತ್ತು ಪವಿತ್ರಾ ಲೋಕೇಶ್ ಜೀವನಾಧಾರಿತ ಸಿನಿಮಾ ಅಲ್ಲ. ಆದರೆ ಮೂಲಗಳ ಪ್ರಕಾರ, ಅವರ ವೈಯಕ್ತಿಕ ಜೀವನ ಮತ್ತು ಈ ಹಿಂದೆ ಅವರ ಜೀವನಕ್ಕೆ ಸಂಬಂಧಿಸಿದಂತೆ ನಡೆದಿರುವ ಘಟನೆಗಳನ್ನು ಆಯ್ದು ಈ ಸಿನಿಮಾ ಮಾಡುವುದು ನರೇಶ್ ಅವರ ಆಲೋಚನೆಯಾಗಿದೆ ಎನ್ನಲಾಗಿದೆ.

ಅವರ ಹಿಂದಿನ ಸಂಬಂಧಗಳು ಮತ್ತು ಪ್ರಸ್ತುತ ಅವರ ನಡುವೆ ಇರುವ ಬಂಧ ಸೇರಿದಂತೆ ಎಲ್ಲಾ ವಿಚಾರಗಳನ್ನು ಈ ಸಿನಿಮಾ ಒಳಗೊಂಡಿರುತ್ತದೆ ಎನ್ನಲಾಗಿದೆ. ಇನ್ನೂ ಈ ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಲ್ಲಾ ಸಿನಿಮಾಗಳಂತೆ ಇದರಲ್ಲೂ ಸ್ವಲ್ಪ ಡ್ರಾಮಾ, ಕಾಲ್ಪನಿಕ ಕಥೆಗಳನ್ನೂ ಸೇರಿಸಲಾಗುತ್ತದೆ. ಇನ್ನೂ ಈ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದು ತಿಳಿದುಬಂದಿಲ್ಲ.

ಇತ್ತೀಚೆಗಷ್ಟೇ ನರೇಶ್ ಅವರ ಮೂರನೇ ಪತ್ನಿ ರಮ್ಯಾ , ನರೇಶ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ವಿಡಿಯೋ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ನರೇಶ್ ಅವರು ಪೊಲೀಸ್ ರಕ್ಷಣೆಯೊಂದಿಗೆ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬರುತ್ತಿದ್ದು, ಅವರ ಪತ್ನಿ ರಮ್ಯಾ ಚಪ್ಪಲಿಯಿಂದ ನಟನ ಮೇಲೆ ಹಲ್ಲೆ ನಡೆಸಿ ಸಿಕ್ಕಾಪಟ್ಟೆ ನಿಂದಿಸುತ್ತಿರುವುದು ಕಂಡುಬಂದಿದೆ.

ಆದರೆ ನರೇಶ್ ಇದ್ಯಾವುದಕ್ಕೂ ವಿಚಲಿತನಾಗದೆ ಲಿಫ್ಟ್ ಒಳಗಿನಿಂದ ರಮ್ಯಾರನ್ನು “ಚೀಟ್ ಅಂಡ್ ಎ ಫ್ರಾಡ್” ಎಂದು ಕೂಗಿದ್ದರು. ಅಷ್ಟೇ ಅಲ್ಲದೆ, ರಮ್ಯಾ ರಾಕೇಶ್ ಶೆಟ್ಟಿ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಅವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಕೂಡ ಆರೋಪಿಸಿದರು. ಗ್ರೂಪ್ ಇನ್‌ಕನ್ ಸ್ಕೀಮ್‌ನಲ್ಲಿ ತಮ್ಮೆಲ್ಲರಿಗೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರ ಗುಂಪೊಂದು ರಮ್ಯಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಇನ್ನೊಂದೆಡೆ, ಪವಿತ್ರಾ ಅವರು ಮೈಸೂರು ಪೊಲೀಸರಲ್ಲಿ ಸೈಬರ್ ಕಿರುಕುಳದ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಇಷ್ಟೆಲ್ಲ ವಿವಾದಗಳ ನಡುವೆ ಇರುವಂತಹ ಈ ಇಬ್ಬರು ಸೆಲೆಬ್ರಿಟಿಗಳ ಕುರಿತು ಅವರೇ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಭಾರೀ ಕುತೂಹಲ ಸೃಷ್ಟಿಸಿದ್ದು, ಸಿನಿಮಾದ ಬಗ್ಗೆ ಇನ್ನಷ್ಟು ಕಾತುರ ಹೆಚ್ಚಾಗಿದೆ.