Home Interesting BIG NEWS । ಈ ಕಟ್ಟರ್ ಮುಸ್ಲಿಂ ರಾಷ್ಟ್ರದಲ್ಲಿ ಶುರುವಾಗಿದೆ NO ಹಿಜಾಬ್ ಹೋರಾಟ ;...

BIG NEWS । ಈ ಕಟ್ಟರ್ ಮುಸ್ಲಿಂ ರಾಷ್ಟ್ರದಲ್ಲಿ ಶುರುವಾಗಿದೆ NO ಹಿಜಾಬ್ ಹೋರಾಟ ; ಹಿಜಾಬ್ ಗಾಳಿಯಲ್ಲಿ ತೇಲಿ ಬಿಟ್ಟು ಸಕತ್ ಡ್ಯಾನ್ಸ್ ಮಾಡಿದ ಮುಸ್ಲಿಂ ಲಲನೆಯರು

Hindu neighbor gifts plot of land

Hindu neighbour gifts land to Muslim journalist

ಹಿಜಾಬ್ ನಮ್ಮ ಹಕ್ಕು, ಹಿಜಾಬ್ ಇಲ್ಲದೆ ನಾವು ಬೀದಿಗೆ ಇಳಿಯುವುದಿಲ್ಲ ಎಂದು ಭಾರತದಲ್ಲಿ ಪ್ರತಿಭಟನೆಗಳು ನಡೆದಿವೆ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಲೆಕ್ಕಿಸದೆ ಹಿಜಾಬ್ ಬೇಕೇ ಬೇಕು ಎಂದು ಪಟ್ಟು ಹಿಡಿದು ವಾಪಸ್ ಮನೆಗೆ ತೆರಳಿ ಪ್ರತಿಭಟನೆ ಮಾಡಿರುವ ಘಟನೆ ಇಡೀ ಕರ್ನಾಟಕದಲ್ಲೇ ಸದ್ದು ಮಾಡಿತ್ತು.

ಭಾರತದಲ್ಲಿ ಕೇವಲ ತರಗತಿಗಳಿಗೆ, ಸರ್ಕಾರಿ ಕಚೇರಿಗಳಿಗೆ ಮುಸ್ಲಿಂ ಯುವತಿಯರು ಹಿಜಾಬ್ ಧರಿಸಬೇಡಿ ಎಂದಿದ್ದಕ್ಕೆ ಕೆಂಡಮಂಡಲವಾಗಿದ್ದಾರೆ. ಆದ್ರೆ, ಮುಸ್ಲಿಂರಾಷ್ಟ್ರ ಇರಾನ್‌ನಲ್ಲಿ ಇದಕ್ಕೆ ತದ್ವಿರುದ್ಧವಾಗಿ ನಡೆದಿದೆ. ಹೌದು. ಹಿಜಾಬ್ ಬೇಕೇಬೇಕು ಎಂದು ಕರ್ನಾಟಕದಲ್ಲಿ ಹೋರಾಟ ನಡೆಸುತ್ತಿದ್ದರೆ, ಅತ್ತಕಡೆ ಹಿಜಾಬ್ ಅನ್ನೇ ಕಿತ್ತೆಸೆದು, ಪ್ರತಿಭಟನೆಗೆ ಇಳಿದಿದ್ದಾರೆ. ಹಿಜಾಬ್ ಅನ್ನು ಗಾಳಿಯಲ್ಲಿ ಹಾರಾಡಿಸಿ, ತೇಲಿ ಬಿಟ್ಟು ಫ್ರೀಡಂ ಫೀಲಿಂಗ್ ನಲ್ಲಿದ್ದಾರೆ ಅಲ್ಲಿನ ಮುಸ್ಲಿಂ ಲಲನೆಯರು.

ಇರಾನ್ ಸರ್ಕಾರ ಹಿಜಾಬ್ ಕಡ್ಡಾಯಗೊಳಿಸಿದ್ದು, ಈ ಆದೇಶವನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದೆ. ಮೆಟ್ರೋ, ಸರ್ಕಾರಿ ಕಚೇರಿ, ಬ್ಯಾಂಕ್‌ಗಳ ಪ್ರವೇಶ ಮಾಡುವುದಿದ್ದರೆ ಹಿಜಾಬ್ ಕಡ್ಡಾಯ ಎಂದು ಈಶಾನ್ಯ ಇರಾನ್‌ನ ಮಶದ್ ನಗರದ ಡೆಪ್ಯೂಟಿ ಪ್ರಾಸಿಕ್ಯೂಟರ್ ಆದೇಶ ಹೊರಡಿಸಿದ್ದರು. ಈ ಆದೇಶದ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆ ಶುರುವಾಗಿದ್ದು, ಈ ಆದೇಶ ಮುಸ್ಲಿಂ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ. ಡೆಪ್ಯೂಟಿ ಪ್ರಾಸಿಕ್ಯೂಟರ್ ಆದೇಶದ ವಿರುದ್ಧ ಮೇಯರ್ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಒತ್ತಡಕ್ಕೆ ಮಣಿದು ಅನಿವಾರ್ಯವಾಗಿ ಕೊನೆಗೆ ಅನುಮತಿ ನೀಡಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರಚಿಸಲಾದ ಇರಾನಿನ ಕಾನೂನಿನ ಪ್ರಕಾರ ಒಂಬತ್ತು ವರ್ಷ ಮೀರಿದ ಎಲ್ಲ ಹುಡುಗಿಯರು/ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ. 2017-2019ರ ನಡುವಿನ ಅವಧಿಯಲ್ಲಿ ಇರಾನಿ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಇದೇ ರೀತಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಬಳಿಕ 2019ರಲ್ಲಿ ಸಾರ್ವಜನಿಕವಾಗಿ ಹಿಜಾಬ್ ತೆಗೆದು ವೀಡಿಯೋ ಮಾಡಿದರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಕೂಡ ಚಾಲ್ತಿಗೆ ತರಲಾಗಿದೆ. ಆದರೆ ಇದೀಗ ಇರಾನ್ ಮಹಿಳೆಯರು ಇದಾವುದಕ್ಕೂ ಕ್ಯಾರೇ ಅನ್ನದೇ, ಹಿಜಾಬ್ ಎಸೆದು ಪ್ರತಿಭಟನೆ ನಡೆಸಿದ್ದಾರೆ.

ಇರಾನ್ ಸರ್ಕಾರ ನಿನ್ನೆ “ಹಿಜಾಬ್ ಮತ್ತು ಪರಿಶುದ್ಧತೆ ದಿನ”ವನ್ನಾಗಿ ಆಚರಿಸಲು ಕರೆ ನೀಡಿತ್ತು. ಎಲ್ಲ ಮಹಿಳೆಯರು ನಿಗದಿತ ಸ್ಥಳಗಳಲ್ಲಿ ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ಇಲ್ಲಿಯ ಮಹಿಳೆಯರನ್ನು ಕೆರಳಿಸಿದೆ. ಈ ಆದೇಶಕ್ಕೆ ಪ್ರತ್ಯುತ್ತರವಾಗಿ ಹಿಜಾಬ್ ಧರಿಸಿ ಬೀದಿಗೆ ಬಂದ ಮಹಿಳೆಯರು ನಡುರಸ್ತೆಯಲ್ಲಿಯೇ ಅದನ್ನು ಕಿತ್ತು ಎಸೆದಿದ್ದಾರೆ.

ಅಲ್ಲದೆ, ಹಿಜಾಬ್ ತೆಗೆದು ನೃತ್ಯ ಮಾಡಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. 10 ವರ್ಷ ಜೈಲು ಶಿಕ್ಷೆಯ ಕಾನೂನಿನ ಕುರಿತೂ ಚಿಂತಿಸದೇ ಈ ರೀತಿ ಮಾಡಿದ್ದಾರೆ. #No2hijab ಹ್ಯಾಷ್‌ಟ್ಯಾಗ್ ಬಳಸಿ ಇರಾನಿ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಹಿಜಾಬ್ ವಿರುದ್ಧ ಬೃಹತ್‌ ಅಭಿಯಾನವನ್ನೂ ಆರಂಭಿಸಿದ್ದಾರೆ. ಒಟ್ಟಾರೆ ಇರಾನ್ ಮುಸ್ಲಿಂ ಮಹಿಳೆಯರ ಹೋರಾಟ ಭಾರತದ ಮಂದಿಗೆ ವಿಶೇಷ ಅನಿಸುವುದರಲ್ಲಿ ತಪ್ಪೇನಿಲ್ಲ.

https://twitter.com/AlinejadMasih/status/1546654986544840706?s=20&t=_o_4k7tBVR0h-SgJen44Xw