Home latest KGF ಸಿನಿಮಾ ಪ್ರೇರಿತ : ನಾಲ್ವರನ್ನು ಕೊಂದ 19 ರ ಹರೆಯದ ಯುವಕ | ಈತನ...

KGF ಸಿನಿಮಾ ಪ್ರೇರಿತ : ನಾಲ್ವರನ್ನು ಕೊಂದ 19 ರ ಹರೆಯದ ಯುವಕ | ಈತನ ಮುಂದಿನ ಟಾರ್ಗೆಟ್ ಪೋಲಿಸರಾಗಿದ್ದರಂತೆ!!!

Hindu neighbor gifts plot of land

Hindu neighbour gifts land to Muslim journalist

ಸಿನಿ ರಂಗದಲ್ಲೇ ಭಾರೀ ಅಲ್ಲೋಲ ಕಲ್ಲೋಲ ಸೃಷ್ಟಿಸಿದಂತಹ ಸಿನಿಮಾವೆಂದರೆ ಅದುವೇ ಕೆಜಿಎಫ್ ಎಂದರೆ ತಪ್ಪಾಗಲಾರದು. ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ನಿಂದ ಪ್ರೇರಿತಗೊಂಡ 19 ವರ್ಷದ ಯುವಕನೊಬ್ಬ ನಾಲ್ವರು ಸೆಕ್ಯುರಿಟಿ ಗಾರ್ಡ್‌ಗಳನ್ನು ಕೊಂದಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಅಮಾನುಷ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ.

ಆರೋಪಿ ಶಿವಪ್ರಸಾದ್‌ನನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಈತನ ಬಂಧನ ತಡವಾಗಿದ್ದರೆ ಇನ್ನೂ ಹಲವರ ಹತ್ಯೆಯಾಗುತ್ತಿತ್ತು. ಆತನ ಮುಂದಿನ ಟಾರ್ಗೆಟ್ ಪೊಲೀಸರಾಗಿದ್ದರಂತೆ.

ಈತ ಕೆಜಿಎಫ್ ಸಿನಿಮಾದ ಹೀರೊ ತರಹನೇ, ಪ್ರಸಿದ್ಧನಾಗಬೇಕೆಂಬ ಕನಸು ಕಂಡಿದ್ದು ಅದೇ ತರಹ ಖ್ಯಾತಿ ಗಳಿಸಬೇಕೆಂದಿದ್ದ ಎನ್ನಲಾಗಿದೆ. ಅನಂತರ ಇಂತಹ ದುಷ್ಕೃತ್ಯ ಎಸಗಿದ್ದಾಗಿ ಆತ ವಿಚಾರಣೆ ವೇಳೆ ಹೇಳಿದ್ದಾನೆ.

ಏನೂ ಮಾಡದ ಸೆಕ್ಯುರಿಟಿ ಗಾರ್ಡ್‌ಗಳು ಮಲಗಿದ್ದ ವೇಳೆ ಈತ ಈ ಕೃತ್ಯ ಮಾಡಿದ್ದಾನೆ. ಸಾಗರ್ ಜಿಲ್ಲೆಯಲ್ಲಿ ಮೂವರು ಭೋಪಾಲ್‌ನಲ್ಲಿ ಒಬ್ಬರನ್ನು ಈತ ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಗಾರ್ಡ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿ, ನಂತರ ತನ್ನನ್ನು ಯಾರೂ ನೋಡಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ಪರಾರಿಯಾಗಿದ್ದಾನೆ.

ಈತನ ಮಂದಿನ ಟಾರ್ಗೆಟ್ ಪೊಲೀಸರಾಗಿತ್ತು ಎಂದು ಆರೋಪಿ ಶಿವಪ್ರಸಾದ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಪ್ರಸಿದ್ಧಿಯಾಗಬೇಕು ಎಂಬ ಒಂದೇ ಕಾರಣಕ್ಕೆ ರಾತ್ರಿ ಹೊತ್ತು ನಿದ್ರೆ ಮಂಪರಿನಲ್ಲಿರುತ್ತಿದ್ದ ಸೆಕ್ಯುರಿಟಿ ಗಾರ್ಡ್‌ಗಳನ್ನ ಕಲ್ಲು, ಕಬ್ಬಿಣದ ರಾಡ್, ಸುತ್ತಿಗೆಯಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡುತ್ತಿದ್ದ. ಆದರೆ ಆತ ಯಾರೊಬ್ಬರನ್ನೂ ಲೂಟಿ ಮಾಡಿಲ್ಲ. ಈತನ ಉದ್ದೇಶ ಕೇವಲ ಕೊಲೆ ಮಾಡುವುದಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯು ಕೊಲೆ ಮಾಡಿದ ವ್ಯಕ್ತಿಯೊಬ್ಬನಿಂದ ಕದ್ದಿದ್ದ ಮೊಬೈಲ್ ಫೋನ್ ಟ್ರ್ಯಾಕ್ ಮಾಡಿ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.