Home latest ಉಡುಪಿಯಲ್ಲಿ ನಡೆಯಲಿದ್ದ ಪ್ರಿಯತಮೆಯ ಕೊಲೆಗೆ ಅರ್ಧದಲ್ಲೇ ಕೈಕೊಟ್ಟ ಪ್ಲಾನ್!!ತುಂತುರು ಮಳೆಯ ನಡುವೆ ಕಗ್ಗತ್ತಲ ಕಾನನದಲ್ಲಿ ಆರಿದ...

ಉಡುಪಿಯಲ್ಲಿ ನಡೆಯಲಿದ್ದ ಪ್ರಿಯತಮೆಯ ಕೊಲೆಗೆ ಅರ್ಧದಲ್ಲೇ ಕೈಕೊಟ್ಟ ಪ್ಲಾನ್!!ತುಂತುರು ಮಳೆಯ ನಡುವೆ ಕಗ್ಗತ್ತಲ ಕಾನನದಲ್ಲಿ ಆರಿದ ಜ್ಯೋತಿ!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಸಿನಿಮಾದಲ್ಲಿ ಬಂದ ಕಥೆಯೊಂದನ್ನೇ ಹೋಲುವ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಸದ್ಯ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡದಲ್ಲಿ ತೆರೆ ಕಂಡಿದ್ದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದ ಕಥೆಯನ್ನೇ ಹೋಲುವ ಈ ಪ್ರಕರಣದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಟೂರ್ ಕರೆದುಕೊಂಡು ಬಂದು ಬಳಿಕ ಕೊಲೆನಡೆಸಿ ಶವವನ್ನು ದಟ್ಟಾರಣ್ಯದಲ್ಲಿ ಎಸೆದು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳಲು ಮುಂದಾಗಿದ್ದ.

ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಪತಿಯ ಮೇಲೆಯೇ ಅನುಮಾನ ಮೂಡಿದ್ದು, ಪೊಲೀಸರ ತನಿಖೆಯ ಒಂದು ನೋಟ ಪತಿಯತ್ತ ಬೀರಿದ ಬಳಿಕ ಪ್ರಕರಣದ ಇಂಚಿ0ಚು ಸತ್ಯ ಹೊರಬಿದ್ದು ಆರೋಪಿಯ ಬಂಧನವಾಗಿದೆ.

ಏನಿದು ಪ್ರಕರಣ!?
ಬೆಂಗಳೂರು ಮೂಲದ ಪೃಥ್ವಿರಾಜ್(30) ಎಂಬಾತ ಕಳೆದ ಒಂದು ವರ್ಷದ ಹಿಂದೆ ಬಿಕಾಂ ಪದವೀಧರೆ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಯ ಹೆಸರು ಜ್ಯೋತಿಕುಮಾರಿ. ಮದುವೆಯ ಹೊಸತರಲ್ಲಿ ಖುಷಿಯಲ್ಲಿದ್ದ ಸಂಸಾರದಲ್ಲಿ ಸಣ್ಣದಾಗಿ ಅನುಮಾನದ ಹುತ್ತ ಬೆಳೆಯಲು ಪ್ರಾರಂಭವಾಗುತ್ತದೆ.

ಇದರ ಮುಂದಿನ ಭಾಗವಾಗಿ ಯುವತಿಯು ಜಗಳ ತೆಗೆದಿದ್ದು, ಈಕೆಯ ವರ್ತನೆ ಪತಿ ಪೃಥ್ವಿರಾಜ್ ನ ಅನುಮಾನಕ್ಕೆ ಪುಷ್ಠಿ ನೀಡಿದೆ ಎನ್ನಲಾಗಿದ್ದು, ಆಕೆ ಬೇರೊಬ್ಬನೊಂದಿಗೆ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಒಂದಿಬ್ಬರು ಗೆಳೆಯರೊಂದಿಗೂ ಹೇಳಿಕೊಂಡಿದ್ದ. ಬಳಿಕ ಆಕೆಯನ್ನು ಮುಗಿಸುವ ಪ್ಲಾನ್ ನಡೆದಿದ್ದು, ಈ ಹಿನ್ನೆಲೆಯಲ್ಲಿ ಆಕೆಯ ಮನವೊಲಿಸಿ ಊರು ಸುತ್ತಲು ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.

ಹೀಗೆ ಬಂದ ಜೋಡಿಯು ಉಡುಪಿಯತ್ತ ತೆರಳಿದ್ದು, ಅಲ್ಲಿನ ಮಲ್ಪೆ ಬೀಚ್ ನಲ್ಲೇ ಆಕೆಗೆ ಸ್ಕೆಚ್ ತಯಾರಾಗಿತ್ತು. ಆದರೆ ಅಲ್ಲಿ ಕೆಲವೊಂದು ಅಡಚಣೆ ಉಂಟಾಗಿದ್ದು, ಪ್ಲಾನ್ ಫ್ಲಾಪ್ ಆದಕೂಡಲೇ ಆಕೆಯನ್ನು ಕರೆದುಕೊಂಡು ಶಿರಾಡಿ ಘಾಟ್ ನತ್ತ ಹೊರಟಿದ್ದ. ಹೀಗೆ ಹೋಗುತ್ತಿರುವ ಸಂದರ್ಭ ರಾಜಘಟ್ಟದ ಬಳಿಯಲ್ಲಿ ಕಾರು ನಿಲ್ಲಿಸಿ ಆಕೆಯನ್ನು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ನಡೆಸಿದ್ದು, ಬಳಿಕ ಶವವನ್ನು ದಟ್ಟಾರಣ್ಯದಲ್ಲಿ ಎಸೆದು ಮನೆ ದಾರಿ ಹಿಡಿದಿದ್ದ.

ಹೀಗೆ ಬೆಂಗಳೂರು ತಲುಪಿದ ಆತ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ಮಡಿವಾಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ಕೈತೊಳೆದುಕೊಂಡಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ನಾಪತ್ತೆಯಲ್ಲದ ಕೊಲೆ ಪ್ರಕರಣವನ್ನು ಬೇಧಿಸಿದ್ದು, ಪತ್ನಿಯನ್ನೇ ಕೊಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಪ್ರಯತ್ನ ನಡೆಸಿದ ಆರೋಪಿ ಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರೇಮಿಗಳ, ನವ ಜೋಡಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು,ಸದ್ಯ ಪೊಲೀಸರ FIR ನಲ್ಲಿ ದಾಖಲಾಗಬೇಕಿದ್ದ ಕೊಲೆ ಪ್ರಕರಣವೊಂದಕ್ಕೆ ಮಲ್ಪೆ ಬೀಚ್ ಅವಕಾಶ ನಿರಾಕರಿಸಿದ್ದು, ಇದರ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲೇ ಸ್ಕೆಚ್ ವರ್ಕ್ ಔಟ್ ಆಗಿದೆ.