Home latest ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ!

ಮಗಳನ್ನು ನೇಣಿಗೆ ಹಾಕಿ ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ದಂತ ವೈದ್ಯೆಯಾದ ತಾಯಿಯೊಬ್ಬಳು ಮಗುವಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ.

ವಿರಾಜಪೇಟೆ ಮೂಲದ ಡಾ. ಶೈಮಾ ಮುತ್ತಪ್ಪ(39) ಮತ್ತು ಇವರ ಮಗಳು ಆರಾಧನಾ(10) ಮೃತ ದುರ್ದೈವಿಗಳು.

ಸೈಮಾ ನಾರಾಯಣ್ ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆ. ತನ್ನ 10 ವರ್ಷದ ಮಗಳು ಆರಾಧನಾಗೆ ಮನೆಯಲ್ಲೇ ನೇಣು ಹಾಕಿ ಹತ್ಯೆ ಮಾಡಿದ ಬಳಿಕ ಸೈಮಾ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಸ್ತುತ ಪೊಲೀಸರು ಸೈಮಾ ಪತಿ ನಾರಾಯಣ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಶನಿವಾರ ಈ ಘಟನೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೈಮಾರ ಪತಿ ನಾರಾಯಣ್ ಕೂಡ ಡೆಂಟಲ್​ ಡಾಕ್ಟರ್. ಇವರಿಬ್ಬರೂ ಓದುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ವಿರಾಜಪೇಟೆ ಮೂಲದ ಪತ್ನಿ ಸೈಮಾ ಮುತ್ತಪ್ಪ, ಕೋಲಾರ ಮೂಲದ ಪತಿ ನಾರಾಯಣ್ ಕಳೆದ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿ ಡೆಂಟಲ್ ಡಾಕ್ಟರ್ ಆಗಿದ್ದರು. ನಾರಾಯಣ್ ಮತ್ತು ಸೈಮಾ ಇಬ್ಬರು ಒಟ್ಟಿಗೆ ಆಸ್ಪತ್ರೆಯನ್ನು ನಡೆಸುತ್ತಿದ್ದರು. ಎರಡು ದಿನಗಳ ಹಿಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಸೈಮಾ ಮತ್ತು ಮಗಳು ಮನೆಯಲ್ಲಿನ ಪ್ರತ್ಯೇಕ ಕೋಣೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎರಡು ದಿನಗಳ ಬಳಿಕ ನಾರಾಯಣ್ ಮನೆಗೆ ಬಂದು ನೋಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ನೋಡಿ ತಾಯಿಯೇ ಮಗಳನ್ನು ನೇಣಿಗೆ ಹಾಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇಬ್ಬರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ತನಿಖೆಯಾಗಬೇಕಿದೆ.

ಘಟನೆ ವೇಳೆ ಶೈಮಾರ ಸಹೋದರ ಆಸ್ಟ್ರೇಲಿಯಾದಲ್ಲಿದ್ದರು. ಇಂದು ಸಹೋದರ ಬಂದು ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಾವಿನ ಬಗ್ಗೆ ಸೈಮಾರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಹೋದರನ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.