Home News ವಿಶ್ವದಲ್ಲಿ ಅತ್ಯಂತ ಪವರ್ ಫುಲ್ ಪಾಸ್ ಪೋರ್ಟ್ ಹೊಂದಿರುವ ದೇಶ ಯಾವುದೆಂದು ಗೊತ್ತೇ ನಿಮಗೆ?

ವಿಶ್ವದಲ್ಲಿ ಅತ್ಯಂತ ಪವರ್ ಫುಲ್ ಪಾಸ್ ಪೋರ್ಟ್ ಹೊಂದಿರುವ ದೇಶ ಯಾವುದೆಂದು ಗೊತ್ತೇ ನಿಮಗೆ?

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತದೆ. ಇನ್ನು ನಮ್ಮ ಗುರುತನ್ನು ರುಜು ಮಾಡಲು ಕೂಡಾ ಪಾಸ್‌ಪೋರ್ಟ್‌ ಅಗತ್ಯವಾಗಿರುತ್ತದೆ. ಅದಲ್ಲದೆ ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದು ಸೀಮಿತ ನಿಯಮಗಳನ್ನು ಮಾತ್ರ ಒಳಗೊಂಡಿರುತ್ತವೆ. ಆದರೆ ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯ ಬಗ್ಗೆ ಮತ್ತು ವಿದೇಶದಲ್ಲಿ ಒಂದೇ ಪಾಸ್ ಪೋರ್ಟ್ ನಿಂದ ಹಲವು ದೇಶಗಳಿಗೆ ಪ್ರಯಾಣ ಬೆಳೆಸಬಹುದು ಎಂಬುದು ಅನೇಕರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಆದ್ದರಿಂದ ವಿದೇಶದ ಪಾಸ್ ಪೋರ್ಟ್ ಬಗ್ಗೆ ನಾವು ಸ್ವಲ್ಪ ತಿಳಿದುಕೊಳ್ಳೋಣ.

ಪ್ರಸ್ತುತ ಯುಎಇ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ ಪೋರ್ಟ್ ಹೊಂದಿರುವ ದೇಶ ಎಂಬ ಹೆಸರಿಗೆ ಪಾತ್ರವಾಗಿದೆ. “ಆರ್ಟನ್ ಕ್ಯಾಪಿಟಲ್” ಪ್ರಕಟಿಸಿದ ಪಾಸ್‌ಪೋರ್ಟ್ ಸೂಚ್ಯಂಕದ ಪ್ರಕಾರ ಅದು ಯುರೋಪಿಯನ್ ರಾಷ್ಟ್ರಗಳ ಪ್ರಾಬಲ್ಯ ಹೊಂದಿರುವ ಟಾಪ್-ಟೆನ್ ಪಾಸ್ ಪೋರ್ಟ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಯುಎಇ ಪಾಸ್‌ಪೋರ್ಟ್‌ನೊಂದಿಗೆ ಪ್ರಯಾಣಿಕರು 180 ದೇಶಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ಮುಕ್ತವಾಗಿ ಪ್ರವೇಶಿಸಬಹುದಾಗಿದೆ.

ಯುಎಇ ಯು ಜರ್ಮನಿ ಮತ್ತು ಸ್ವೀಡನ್‌ನಂತಹ ಏಳು ಯುರೋಪಿಯನ್ ದೇಶಗಳು ಹಾಗು ಜಪಾನ್‌ ಸೇರಿದಂತೆ ಇತರ ಒಂಬತ್ತು ದೇಶಗಳು “ಆರ್ಟನ್ ಕ್ಯಾಪಿಟಲ್” ಪ್ರಕಟಿಸಿದ ಪಟ್ಟಿಯಲ್ಲಿ ವಿಶ್ವದ ಅತ್ಯುತ್ತಮ ಪಾಸ್ ಪೊರ್ಟ್ ಹೊಂದಿರುವ ದೇಶಗಳ ಸ್ಥಾನ ಪಡೆದಿವೆ.

ಅದಲ್ಲದೆ ಏಷ್ಯಾದ ದೇಶಗಳ ಪಾಸ್ ಪೋರ್ಟ್ ಗಳಿಂದ 171 ದೇಶಗಳಿಗೆ ಸುಲಭ ಪ್ರವೇಶ ಪಡೆಯಲು ಸಾಧ್ಯವಿದೆ ಮತ್ತು ಆರ್ಟನ್‌ನ ಸೂಚ್ಯಂಕದಲ್ಲಿ 24 ನೇ ಸ್ಥಾನವನ್ನು ಪಡೆದುಕೊಂಡಿವೆ. ವಿಶ್ವದ ಅತಿ ಎತ್ತರದ ಕಟ್ಟಡ, ಆಳವಾದ ಈಜುಕೊಳ ಮತ್ತು ಅತಿ ಎತ್ತರದ ಹೋಟೆಲ್‌ಗಳನ್ನು ಒಳಗೊಂಡಿರುವ ಯುಎಇ (UAE)ಯ ಹೆಚ್ಚುತ್ತಿರುವ ಪುರಸ್ಕಾರಗಳ ಪಟ್ಟಿಗೆ ವಿಶ್ವದ ಪ್ರಬಲ ಪಾಸ್‌ಪೋರ್ಟ್ ಹೊಂದಿರುವ ದೇಶವೆಂಬ ಹೆಸರು ಪಡೆದಿವುದು ವರದಿ ಮೂಲಕ ತಿಳಿಸಲಾಗಿದೆ.

ಯುರೋಪಿಯನ್ ಯೂನಿಯನ್‌ನೊಂದಿಗಿನ ವೀಸಾ ಯೋಜನೆಗಳನ್ನು ಅಮಾನತುಗೊಳಿಸಿರುವ ಕಾರಣ, ಪ್ರವೇಶ ಸ್ಕೋರ್ ಕುಸಿತವನ್ನು ಕಂಡ ಏಕೈಕ ದೇಶವೆಂದರೆ ವನವಾಟು (Vanuatu). ಅಫ್ಘಾನಿಸ್ಥಾನದ ಪಾಸ್‌ಪೋರ್ಟ್ ಕೂಡ ಅತೀ ಕಡಿಮೆ ಶ್ರೇಯಾಂಕವನ್ನು ಪಡೆದಿದ್ದು, ಕನಿಷ್ಠ ಉಪಯುಕ್ತವಾಗಿದೆ ಎಂದು ವರದಿ ತಿಳಿಸಿದೆ.

ಸದ್ಯ ತೈಲ-ಸಮೃದ್ಧ ಅಬುದಾಬಿ , ಹೊಳೆಯುವ ಆಕರ್ಷಕವಾಗಿರುವ ಕಣ್ಣಿಗೆ ಎಟುಕದ ಕಟ್ಟಡಗಳ ತವರು ಆಗಿರುವ ದುಬೈ ಇವುಗಳ ಜೊತೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ಈ ದಾಖಲೆಗಳ ಪಟ್ಟಿಗೆ ಈಗ ಯುಎಇ ಸೇರಿಕೊಂಡಿದೆ.