Home News Viral Video : ಹಾಡಹಗಲೇ 100 ಮಂದಿ ಮನೆಗೆ ನುಗ್ಗಿ ಯುವತಿಯ ಕಿಡ್ನ್ಯಾಪ್ | ಸಿನಿಮಾ...

Viral Video : ಹಾಡಹಗಲೇ 100 ಮಂದಿ ಮನೆಗೆ ನುಗ್ಗಿ ಯುವತಿಯ ಕಿಡ್ನ್ಯಾಪ್ | ಸಿನಿಮಾ ಸ್ಟೈಲಿಗೂ ಕಮ್ಮಿ ಇಲ್ಲ! ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಪ್ರೀತಿ ಅನ್ನೋದು ಇತ್ತೀಚಿಗೆ ಪ್ರೇಮಿಗಳ ತಾಳ್ಮೆ ಕೆಡಿಸುತ್ತಿದೆ. ಒಬ್ಬರಿಗೊಬ್ಬರು ಹುಡುಗ ಹುಡುಗಿಯರು ಒಡನಾಟ ಅಥವಾ ಸ್ನೇಹ ಬೆಳೆಸಿಕೊಳ್ಳುವುದೇನು ತಪ್ಪಲ್ಲ ಆದರೆ ನಿಮ್ಮ ಸ್ನೇಹ ಸಂಬಂಧದ ಒಡನಾಟಗಳು ಎಲ್ಲಿ ಹೋಗಿ ಯಾವ ಸ್ಥಿತಿಗೆ ತಲುಪಬಹುದು ಎಂಬ ಮುಂದಾಲೋಚನೆ ಮಾಡುವುದು ಉತ್ತಮ. ಸದ್ಯ ಇಲ್ಲೊಬ್ಬನು ಪ್ರೀತಿಸಿದಾಕೆಯನ್ನು ಬೇರೊಂದು ಹುಡುಗನ ಜೊತೆ ನಿಶಿತಾರ್ಥ ನಡೆಸುವುದನ್ನು ತಪ್ಪಿಸಲು ಏನು ದುಸ್ಸಾಹಸ ಮಾಡಿದ್ದಾನೆ ನೋಡಿ.

ತಾನು ಪ್ರೀತಿಸಿದ ಯುವತಿ ಬೇರೊಬ್ಬನ ಜತೆ ಮದುವೆಯಾಗುತ್ತಿದ್ದಾಳೆ ಎಂದರಿತ ಪ್ರೇಮಿ ನವೀನ್‍ರೆಡ್ಡಿ (29) ಎಂಬಾತ ನಿಶ್ಚಿತಾರ್ಥದ ದಿನವೇ ದೊಣ್ಣೆ ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದು ನೂರು ಜನರನ್ನು ಕರೆದುಕೊಂಡು ಬಂದ ದುಷ್ಕರ್ಮಿಗಳ ಗುಂಪು ಯುವತಿಯ ಸಂಬಂಧಿಕರನ್ನು ಥಳಿಸಿ ಮನೆಯನ್ನು ಧ್ವಂಸ ಮಾಡಿ ಪರಾರಿಯಾಗಿದ್ದಾನೆ.

ಡಿಸೇಂಬರ್ 10ರಂದು ನಿಶ್ಚಿತಾರ್ಥ ನಡೆಯಬೇಕಿದ್ದ ಯುವತಿಯನ್ನು ಆಕೆಯ ಮನೆಯಿಂದ ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ ಘಟನೆ ತೆಲಂಗಾಣದ ಆದಿಬಟ್ಲದಲ್ಲಿ ನಡೆದಿದೆ. ಸುಮಾರು ನೂರು ಯುವಕರು ತಮ್ಮ ಮನೆಗೆ ನುಗ್ಗಿ ಮಗಳನ್ನು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಯುವತಿಯಪೋಷಕರು ಆರೋಪಿಸಿದ್ದಾರೆ.

ಅದಲ್ಲದೆ ನಮ್ಮ ಮಗಳಿಗೆ ಈ ಹಿಂದೆ ಯುವಕನೊಬ್ಬ ಪ್ರಪೋಸ್ ಮಾಡಿದ್ದನು. ಆದರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸರಿಯಾಗಿ ಸ್ಪಂದಿಸಿರಲಿಲ್ಲ. ಇದೀಗ ಈ ಕೃತ್ಯದ ಹಿಂದೆ ಆತನ ಕೈವಾಡವಿದೆ ಎಂದು ಅಪಹರಣಕ್ಕೊಳಗಾದ ಯುವತಿಯ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕೇವಲ ಆರು ತಾಸಿನಲ್ಲೇ ಆರೋಪಿಯನ್ನು ಬಂಧಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಹೈದರಾಬಾದ್‍ನ ಮನ್ನೆಗುಡ್ಡ ಪ್ರದೇಶದ ನಿವಾಸಿಯಾದ ಯುವತಿ 2021ರಲ್ಲಿ ನವೀನ್‍ರೆಡ್ಡಿ ಎಂಬಾತನ ಜತೆ ಪ್ರೀತಿ ಬೆಳೆಸಿಕೊಂಡಿದ್ದಳು ಎಂಬ ಮಾಹಿತಿ ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ.

ಮಾಹಿತಿ ಪ್ರಕಾರ ಸದ್ಯ ಬ್ಯಾಡ್ಮಿಂಟನ್ ತರಬೇತಿ ಕೇಂದ್ರದಲ್ಲಿ ಇಬ್ಬರ ಪರಿಚಯವಾಗಿತ್ತು. ನಂತರ ಅನ್ಯೋನ್ಯವಾಗಿದ್ದ ಇವರು ಹಲವೆಡೆ ಪ್ರವಾಸಕ್ಕೂ ಹೋಗಿ ಬಂದಿದ್ದರು ಎನ್ನಲಾಗಿದೆ. ಈ ವಿಷಯ ಎರಡೂ ಕುಟುಂಬಗಳ ಮನಸ್ತಾಪಕ್ಕೆ ಕಾರಣವಾಗಿತ್ತು. ಕುಟುಂಬಸ್ಥರ ವಿರೋಧದಿಂದ ಯುವತಿ ಪ್ರೇಮಿಯಿಂದ ದೂರವಾಗಿದ್ದಳು. ಆದರೆ, ಆತ ಮೊಬೈಲ್‍ಗೆ ಕರೆ ಮಾಡಿ ವಾಟ್ಸಾಪ್ ಸಂದೇಶ ಕಳುಹಿಸಿ ಮದುವೆಗೆ ಒತ್ತಾಯ ಮಾಡುತ್ತಿದ್ದುದಲ್ಲದೆ ಬೆದರಿಕೆ ಕೂಡ ಹಾಕುತ್ತಿದ್ದನಂತೆ.

ಯುವಕನು ಯುವತಿಯ ಮನೆಯವರು ನಿಶ್ಚಿತಾರ್ಥ ಕಾರ್ಯಕ್ರಮ ಹಮ್ಮಿಕೊಂಡಿದ್ದ ವಿಷಯ ತಿಳಿದು ತನ್ನ ಸಹಚರರೊಂದಿಗೆ ಬಂದು ಹಲ್ಲೆ ನಡೆಸಿ ಬೆದರಿಸಿ ಯುವತಿಯನ್ನು ಅಪಹರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈಗಾಗಲೇ ನವೀನ್‍ರೆಡ್ಡಿ ಜತೆ ಎಂಟು ಜನರನ್ನು ಪೊಲೀಸರು ಬಂಧಿಸಿ ಯುವತಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ನೀಡಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ರಾಚಕೊಂಡ ಕಮಿಷನರೇಟ್‍ನ ಹೆಚ್ಚುವರಿ ಆಯುಕ್ತರು ಇದು ಗಂಭೀರ ಅಪರಾಧವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯ ಸಿನಿಮಿಯ ರೀತಿಯಲ್ಲಿ ಪುಂಡ ಯುವಕರು ಯುವತಿಯನ್ನು ಅಪಹರಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ಈ ಘಟನೆಯ ವೀಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಮನೆಯ ಸುತ್ತಮುತ್ತ ಅನೇಕ ಯುವಕರು ಜಮಾಯಿಸಿ, ಯುವತಿಯ ತಂದೆಯನ್ನು ಎಳೆದೊಯ್ದು ಹಲ್ಲೆ ನಡೆಸಿದ್ದಾರೆ. ಕೆಲವು ಫೋಟೋಗಳಲ್ಲಿ ಮನೆಯೊಳಗಿರುವ ವಸ್ತುಗಳನ್ನು ದುಷ್ಕರ್ಮಿಗಳು ಛಿದ್ರಗೊಳಿಸಿರುವುದನ್ನು ಮತ್ತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿರುವುದನ್ನು ಕಾಣಬಹುದಾಗಿದೆ. ಮತ್ತೊಂದೆಡೆ ಮಗಳಿಗಾಗಿ ಹೆತ್ತವರು ಕಣ್ಣೀರು ಹಾಕುತ್ತಿರುವುದನ್ನು ನೋಡಬಹುದಾಗಿದೆ.