Home Interesting ಮಹಿಳೆಯ ಮೃತದೇಹದ ಬಳಿ ಕದಲದೇ ಸುಮಾರು 20 ಗಂಟೆಗಳವರೆಗೆ ಕೂತ ಮಂಗ!!

ಮಹಿಳೆಯ ಮೃತದೇಹದ ಬಳಿ ಕದಲದೇ ಸುಮಾರು 20 ಗಂಟೆಗಳವರೆಗೆ ಕೂತ ಮಂಗ!!

Hindu neighbor gifts plot of land

Hindu neighbour gifts land to Muslim journalist

ಮಾನವೀಯತೆ ಎಂಬುದು ಕೇವಲ ಮನುಷ್ಯರಲ್ಲಿ ಇರುವುದು ಮಾತ್ರವಲ್ಲದೆ, ಪ್ರಾಣಿಗಳಲ್ಲೂ ಇದೆ ಎಂಬುದಕ್ಕೆ ಸಾಕ್ಷಿಯಂತಿದೆ ಈ ಘಟನೆ. ನಮ್ಮ ಆತ್ಮೀಯರು ಅಗಲಿದಾಗ ದುಃಖ ಪಡುವುದು ಸಾಮಾನ್ಯ. ಆದರೆ, ಇಲ್ಲೊಂದು ಕಡೆ ಮಂಗವೊಂದು ಸುಮಾರು 20 ಗಂಟೆಗಳವರೆಗೆ ಮಹಿಳೆಯೊಬ್ಬರ ಮೃತದೇಹದ ಬಳಿ ಕೂತ ವಿಸ್ಮಯಕಾರಿ ಘಟನೆ ನಡೆದಿದೆ.

ಈ ಘಟನೆ, ಕಲಬುರಗಿ ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ನಡೆದಿದ್ದು, ಮಹಿಳೆಯ ಶವದ ಮುಂದೆ ಮಂಗವೊಂದು ಸುಮಾರು 20 ಗಂಟೆಗಳ ಕಾಲ ಕದಲದೇ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ. ಕೋತಿಯನ್ನು ಓಡಿಸಲು ಅದೆಷ್ಟು ಪ್ರಯತ್ನ ಪಟ್ಟರೂ ಅಲುಗಾಡದೆ, ಕಣ್ಣೀರು ಹಾಕುತ್ತ ಕುಳಿತವರ ಮಧ್ಯೆ ತಾನೂ ಸಹ ಕುಳಿತು ಶೋಕದಲ್ಲಿ ಮುಳುಗಿದೆ.

ನಿನ್ನೆ ಮಧ್ಯಾಹ್ನ ಮಾಲಗತ್ತಿ ಗ್ರಾಮದ ಶಾಮಲಾ ಎಂಬುವರು ಕಾಯಿಲೆಯಿಂದ ಮೃತಪಟ್ಟಿದ್ದರು. ಮನೆಯಲ್ಲಿ ಶಾಮಲಾ ಅವರ ಶವವಿಟ್ಟು ಸಂಬಂಧಿಕರು ಅಳುತ್ತ ಕುಳಿತಿದ್ದರು. ಮಹಿಳೆ ಮೃತಪಟ್ಟ ಒಂದು ಗಂಟೆಗೆ ಪ್ರತ್ಯಕ್ಷವಾದ ಕೋತಿ ಸ್ಥಳಬಿಟ್ಟು ಕದಲದೇ ಜನರ ಮಧ್ಯೆ ತಾನೂ ಕೂಡ ಕುಳಿತಿತ್ತು.

ಮೃತರ ಮೇಲೆ ಅದೇನು ಪ್ರೀತಿಯೋ ಏನೂ, ಅಂತ್ಯಸಂಸ್ಕಾರದ ವಿಧಿವಿಧಾನಕ್ಕೂ ಬಿಡದೆ ಅಡ್ಡಿಪಡಿಸಿದೆ. ಶವಕ್ಕೆ ಮುಂದಿನ ಕಾರ್ಯ ನಡೆಸಲು ಬಿಡಲಿಲ್ಲದ ಕಾರಣ, ಭಯಭೀತರಾದ ಗ್ರಮಾಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕೋತಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಕರೆದೊಯ್ದಿದ್ದಾರೆ. ಇದೇ ಮೋದಲ ಬಾರಿ ಕೋತಿ ಕಾಣಿಸಿಕೊಂಡು ವಿಚಿತ್ರ ವರ್ತನೆ ತೋರಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.