Home Interesting ಜೂನ್ 21ರಂದು ಪ್ರಧಾನಿ ಮೋದಿ ಮೈಸೂರಿಗೆ!!? ಸಾಂಸ್ಕೃತಿಕ ನಗರಿಯ ಭೇಟಿಯ ಹಿಂದಿದೆ ಬಲವಾದ ಕಾರಣ!?

ಜೂನ್ 21ರಂದು ಪ್ರಧಾನಿ ಮೋದಿ ಮೈಸೂರಿಗೆ!!? ಸಾಂಸ್ಕೃತಿಕ ನಗರಿಯ ಭೇಟಿಯ ಹಿಂದಿದೆ ಬಲವಾದ ಕಾರಣ!?

Hindu neighbor gifts plot of land

Hindu neighbour gifts land to Muslim journalist

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದ್ದು,ಅವರು ಬರುವ ಸಾಧ್ಯತೆ ಹೆಚ್ಚಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನ ಅರಮನೆ ಮೈದಾನದಲ್ಲಿ ಯೋಗ ಫೌಂಡೇಶನ್ ಹಾಗೂ ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಯೋಗೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇಡೀ ವಿಶ್ವಕ್ಕೇ ಅಪ್ಪಳಿಸಿದ್ದ ಮಹಾಮಾರಿ ಕೊರೋನ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಯೋಗ ದಿನಾಚರಣೆ ಆಚರಿಸಲು ಅಸಾಧ್ಯವಾಗಿತ್ತು.

ಈಗ ಎಲ್ಲವೂ ಸುಧಾಸಿದ್ದು ಈ ಹಿನ್ನೆಲೆಯಲ್ಲಿ ಈ ಬಾರಿಯ ಯೋಗ ದಿನಾಚರಣೆಗೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ್ದೇವೆ. ಪ್ರಧಾನಿಗಳ ಪ್ರವಾಸ ಪಟ್ಟಿಯಲ್ಲಿ ಲಡಾಕ್ ಹಾಗೂ ಮೈಸೂರನ್ನು ಪ್ರಕಟಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಅಂದವ ಕಾಣಲು ಇಲ್ಲಿಗೇ ಬರುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಈ ಸಂದರ್ಭದಲ್ಲಿ ಸಂಸದರು ಹೇಳಿದರು.