Home Interesting ಬಾವಿಗೆ ಮೊಬೈಲ್ ಬಿತ್ತೆಂದು ಹುಡುಕಲು ಇಳಿದ ಯುವಕ|ಫೋನ್ ಆಸೆಗೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡ!!

ಬಾವಿಗೆ ಮೊಬೈಲ್ ಬಿತ್ತೆಂದು ಹುಡುಕಲು ಇಳಿದ ಯುವಕ|ಫೋನ್ ಆಸೆಗೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡ!!

Hindu neighbor gifts plot of land

Hindu neighbour gifts land to Muslim journalist

ಚಿಕ್ಕಬಳ್ಳಾಪುರ:ಬಾವಿಗೆ ಮೊಬೈಲ್ ಬಿತ್ತೆಂದು ಇಳಿದ ಯುವಕ ಉಸಿರು ಗಟ್ಟಿ ಸಾವನ್ನಪ್ಪಿರೋ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗುಡಿಹಳ್ಳಿ ಗ್ರಾಮದ ಯುವಕ ಅನೀಲ್ ಕುಮಾರ್ (30)ಮೃತ ಯುವಕ.

ಆಕಸ್ಮಿಕವಾಗಿ ಕೈತಪ್ಪಿ ಬಾವಿಗೆ ಬಿದ್ದಂತ ಮೊಬೈಲ್ ತೆಗೆದುಕೊಳ್ಳಲು 3 ಅಡಿ ಅಗಲ, 60 ಅಡಿ ಆಳದ ಕಿರು ಬಾವಿಗೆ ಹಗ್ಗ ಕಟ್ಟಿಕೊಂಡು ಇಳಿದಿದ್ದಾನೆ.ಆದ್ರೇ ಬಾವಿಯಲ್ಲಿ ವಿಷಾನಿಲ ಕೂಡಿದ್ದರಿಂದಾಗಿ, ಅನಿಲ್ ಕುಮಾರ್ ಸಾವು ಬದುಕಿನ ನಡುವೆ ಒದ್ದಾಡಿದ್ದಾನೆ.ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಸ್ಥಳೀಯರು ಮಾಹಿತಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದಂತ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್ ಡಿ ಆರ್ ಎಫ್ ಸಿಬ್ಬಂದಿಗಳು ಆಕ್ಸಿಜನ್ ಬಿಟ್ಟು ಬದುಕಿಸೋ ಪ್ರಯತ್ನ ನಡೆಸಿದ್ರೂ, ಅದು ಸಾಧ್ಯವಾಗಲಿಲ್ಲ.ಈತ ಮೊಬೈಲ್ ಆಸೆಗೆ ಬಿದ್ದು ತನ್ನ ಜೀವವನ್ನೇ ಬಲಿ ಕೊಟ್ಟಂತಹ ಪರಿಸ್ಥಿತಿ ಎದುರಾಗಿದ್ದು,ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.