

Mandya: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ಕೊಂಡ ಹಾಯುವ ಸಂದರ್ಭದಲ್ಲಿ ಅರ್ಚಕರೊಬ್ಬರು ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಕೊಂಡ ಹಾಯುವಾಗ ಎಡವಿ ಬಿದ್ದ ಅರ್ಚಕ ಗುಡ್ಡಪ್ಪ ಶಿವರಾಮ ಗಾಯಗೊಂಡಿದ್ದು, ಬೆಳ್ಳೂರು ಸಮೀಪದ ಬಿಜಿಎಸ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಈ ಜಾತ್ರಾ ಮಹೋತ್ಸವ ಉದ್ಘಾಟನೆಗೆ ಆಗಮಿಸಲಿದ್ದು, ಬರುವ ಮುನ್ನೇ ಈ ಅವಘಡ ನಡೆದಿದೆ.
ಮಂಡ್ಯ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬೀರದೇವರುಗಳ ದೊಡ್ಡ ಹಬ್ಬದಲ್ಲಿ ಭಾಗಿಯಾಗಲಿದ್ದಾರೆ. 39ವರ್ಷಗಳ ನಂತರ 14 ಕೂಟದ ದೇವರುಗಳ ಹಬ್ಬ ನಡೆಯುತ್ತದೆ. ಬೆಳಗ್ಗೆ 11 ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹದ್ದಿಹಳ್ಳಿಗೆ ಬರಲಿದ್ದಾರೆ.













