Home News ಒಂದು ಕಮೆಂಟ್‌ ಅಷ್ಟೇ, ಈ ಸೂಪರ್‌ ಸ್ಮಾರ್ಟ್‌ ಫೋನ್‌ ನಿಮ್ಮದಾಗಿಸಿಕೊಳ್ಳಿ | ಮಿಸ್‌ ಮಾಡಿದರೆ ಆಮೇಲೆ...

ಒಂದು ಕಮೆಂಟ್‌ ಅಷ್ಟೇ, ಈ ಸೂಪರ್‌ ಸ್ಮಾರ್ಟ್‌ ಫೋನ್‌ ನಿಮ್ಮದಾಗಿಸಿಕೊಳ್ಳಿ | ಮಿಸ್‌ ಮಾಡಿದರೆ ಆಮೇಲೆ ಚಿಂತೆ ಮಾಡ್ತೀರ!

Hindu neighbor gifts plot of land

Hindu neighbour gifts land to Muslim journalist

ಸ್ಮಾರ್ಟ್’ಫೋನ್ ಎಂಬ ಮಾಯಾವಿ ಈಗಂತೂ ಎಲ್ಲರ ಕೈಯಲ್ಲೂ ನಲಿದಾಡುತ್ತಿದೆ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್’ಫೋನ್ ಬಳಸುತ್ತಾರೆ. ಮೊಬೈಲ್​ ಇಲ್ಲದೇ ಜೀವನವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರೇ ಆಗಲಿ ಮೊಬೈಲ್​ ಖರೀದಿ ಮಾಡಬೇಕಾದರೆ ಮೊದಲು ಆಫರ್ಸ್​ಗಳಿವೆಯೇ ಎಂದು ಹುಡುಕುತ್ತಾರೆ. ಆದರೆ ಇದೀಗ ಸ್ಮಾರ್ಟ್​ಫೋನ್​ ಕಂಪನಿಯೊಂದು ಉಚಿತ ಸ್ಮಾರ್ಟ್​ಫೋನ್ ನೀಡಲಿದ್ದೂ, ಇದಕ್ಕಾಗಿ ನೀವು ಮಾಡಬೇಕಾದದ್ದೂ ಕೇವಲ ಒಂದೇ ಒಂದು ಕಮೆಂಟ್ ಮಾತ್ರ!!…

ಹೌದು, ನಥಿಂಗ್​ ಸ್ಮಾರ್ಟ್​ಫೋನ್​ ಕಂಪನಿಯ ಸಂಸ್ಥಾಪಕರಾದ ಕಾರ್ಲ್ ಪೀ ಅವರು ಟ್ವಿಟರ್ ನಲ್ಲಿ ಬಳಕೆದಾರರಿಗೆ ಸ್ಪರ್ಧೆಯೊಂದನ್ನು ಆಯೋಜಿಸಿದ್ದಾರೆ. ಅದೇನೆಂದರೆ ಅವರ ಟ್ವೀಟ್​ಗೆ ಗ್ರಾಹಕರು ಕಮೆಂಟ್​ ಮಾಡ್ಬೇಕು. ಇದರ ನಿಯಮ ಏನೆಂದರೆ ಕಮೆಂಟ್‌ಗೆ ಝೀರೋ ಲೈಕ್‌ ಪಡೆದ ಬಳಕೆದಾರರು ಕೂಡ ಫ್ರೀಯಾಗಿ ನಥಿಂಗ್ ಫೋನ್ 1 ಗೆಲ್ಲಬಹುದಾಗಿದೆ. ಹಾಗೆಯೇ ಕಮೆಂಟ್‌ಗೆ ಅತೀ ಹೆಚ್ಚು ಲೈಕ್‌ಗಳನ್ನು ಪಡೆವರೂ ಕೂಡ ನಥಿಂಗ್ ಫೋನ್ 1 ಪಡೆಯುತ್ತಾರೆ. ವಿಜೇತರನ್ನು ಕೇವಲ 24 ಗಂಟೆಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಅದ್ಭುತ ಆಫರ್’ನ ಸ್ಮಾರ್ಟ್’ಫೋನಿನ ವೈಶಿಷ್ಟ್ಯಗಳನ್ನು ನೋಡುವುದಾದರೆ, 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದೂ, ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಇನ್ನು ಈ ಡಿಸ್‌ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದ್ದು, 1,200 ನಿಟ್ಸ್‌ನಲ್ಲಿ ಬ್ರೈಟ್‌ನೆಸ್‌ ಅನ್ನು ಈ ಡಿಸ್​ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ HDR10+ ಬೆಂಬಲ, 402 ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಅನ್ನು ಕೂಡಾ ಆ್ಯಡ್​ ಮಾಡಲಾಗಿದೆ.

ನಥಿಂಗ್ ಕಂಪನಿಯಿಂದ ಬಿಡುಗಡೆಯಾದ ನಥಿಂಗ್ ಫೋನ್ 1 ಸ್ಮಾರ್ಟ್‌ಫೋನ್‌, 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ನೊಂದಿಗೆ ಲಭ್ಯವಿದ್ದೂ 33W ವೈರ್ಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್‌ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್‌ ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲವನ್ನು ನೀಡಲಿದೆ.

ಕ್ಯಾಮರ ಫೀಚರ್ ನೋಡುವುದಾದರೆ, ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್‌ JN1 ಸೆನ್ಸಾರ್‌ ಅನ್ನು ಅಳವಡಿಸಲಾಗಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಈ ರೀತಿಯ ಫೀಚರ್ಸ್​​ಗಳನ್ನು ಆ್ಯಡ್​ ಮಾಡಿದ್ದಾರೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಸೆಲ್ಫಿ ಕ್ಯಾಮೆರಾವನ್ನು ನೀಡಿದ್ದಾರೆ.

ನಥಿಂಗ್ ಫೋನ್ 1 ಸ್ಮಾರ್ಟ್​​ಫೋನ್, ಮೂರು ರೀತಿಯ ಸ್ಟೋರೇಜ್​ ಆಯ್ಕೆಗಳನ್ನು ಹೊಂದಿದೆ. ಇದು 8ಜಿಬಿ RAM, 128ಜಿಬಿ ಸ್ಟೋರೇಜ್​, 8ಜಿಬಿ RAM ಮತ್ತು 256ಜಿಬಿ ಇಂಟರ್ನಲ್​ ಸ್ಟೋರೇಜ್​, 12ಜಿಬಿ RAM ಮತ್ತು 256ಜಿಬಿ ಇಂಟರ್ನಲ್​ ಸ್ಟೋರೇಜ್​ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್​ಫೋನ್​ಗಳು ಆಂಡ್ರಾಯ್ಡ್​ 12 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನೇಕೆ ತಡ, ನಿಮ್ಮ ಅದೃಷ್ಟವನ್ನೊಮ್ಮೆ ಪರೀಕ್ಷಿಸುವ ಸುವರ್ಣವಕಾಶವನ್ನು ಮಿಸ್ ಮಾಡ್ಬೇಡಿ ಈಗಲೇ ಒಂದು ಕಮೆಂಟ್ ಹಾಕಿ ಬಿಡಿ.