Home latest ಭೀಕರ ಬಸ್ ಅಪಘಾತ | 15 ಮಂದಿ ಸ್ಥಳದಲ್ಲೇ ದಾರುಣ ಸಾವು; 40 ಜನರಿಗೆ ಗಂಭೀರ...

ಭೀಕರ ಬಸ್ ಅಪಘಾತ | 15 ಮಂದಿ ಸ್ಥಳದಲ್ಲೇ ದಾರುಣ ಸಾವು; 40 ಜನರಿಗೆ ಗಂಭೀರ ಗಾಯ!!!

Hindu neighbor gifts plot of land

Hindu neighbour gifts land to Muslim journalist

ಶುಕ್ರವಾರ ತಡರಾತ್ರಿ ಮಧ್ಯಪ್ರದೇಶದ ರೇವಾದಲ್ಲಿ ಟ್ರೇಲರ್‌ ಹಾಗೂ ಬಸ್‌ನ ನಡುವ ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 15 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 35 ಮಂದಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ ರೇವಾ ಬಳಿ ರಾಷ್ಟ್ರೀಯ ಹೆದ್ದಾರಿ-30 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸೊಹಗಿ ಬೆಟ್ಟದಿಂದ ಇಳಿಯುತ್ತಿದ್ದ ಸಂದರ್ಭ ಮುಂದೆ ಹೋಗುತ್ತಿದ್ದ ಟ್ರೇಲರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅವಘಡದಲ್ಲಿ 15 ಪ್ರಯಾಣಿಕರು ಸಾವನ್ನಪ್ಪಿದ್ದು, 35 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.

ಸೊಹಗಿ ಬೆಟ್ಟದ ಬಳಿ ಬಸ್‌ ಬರುವ ವೇಳೆ, ಬಸ್‌ನ ಮುಂದಿದ್ದ ಟ್ರಕ್‌, ಅನಾಮಿಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಟ್ರೇಲರ್‌ ಟ್ರಕ್‌ಗೆ ಬಸ್‌ ವೇಗವಾಗಿ ಬಂದು ಡಿಕ್ಕಿಯಾಗಿದೆ. ಬಸ್‌ ಅನ್ನು ನಿಯಂತ್ರಿಸಲು ಚಾಲಕ ಬ್ರೇಕ್‌ ಹಾಕಿದ್ದರೂ ಯಾವುದೇ ಪ್ರಯೋಜನವಾಗದೇ ಭೀಕರವಾಗಿ ಅಪಘಾತವಾಗಿದೆ.

ಬಸ್ ಹೈದರಾಬಾದ್‌ನಿಂದ ರೇವಾ ಮೂಲಕ ಗೋರಖ್‌ಪುರಕ್ಕೆ ಹೋಗುತ್ತಿದ್ದ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಬೆಟ್ಟದ ಕಣಿವೆಯಲ್ಲಿ ಅಪಘಾತ ಸಂಭವಿಸಿದೆ. ಈ ಸಂದರ್ಭ ದಲ್ಲಿ ಬಸ್ಸಿನ ಕ್ಯಾಬಿನ್‌ನಲ್ಲಿ 3-4 ಜನರು ಕೂಡ ಸಿಲುಕಿಕೊಂಡಿದ್ದಾರೆ.

ಗಾಯಗೊಂಡವರಲ್ಲಿ ಹೆಚ್ಚಿನವರು ದೀಪಾವಳಿ ಆಚರಿಸಲು ಮನೆಗೆ ತೆರಳುತ್ತಿದ್ದ ಕಾರ್ಮಿಕರು ಎಂದು ತಿಳಿದು ಬಂದಿದ್ದು, ತಡರಾತ್ರಿ 1 ಗಂಟೆ ವೇಳೆಗೆ 55 ಮಂದಿ ತಯೋಂಥರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಹಗಿ ಪೊಲೀಸರು ಸ್ಥಳಕ್ಕಾಗಮಿಸಿ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ತಯೋಂಥರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ .

ಟ್ರಾಲಿ ಟ್ರಕ್ ತನ್ನ ಮುಂದಿನ ಲಾರಿಗೆ ಡಿಕ್ಕಿ ಹೊಡೆದಿದ್ದು , ಇದರಿಂದಾಗಿ ಅದರ ಮುಂಭಾಗಕ್ಕೂ ಹಾನಿಯಾಗಿದೆ. ಚಾಲಕ ಬ್ರೇಕ್ ಹಾಕಿದಾಗ ಅದರ ಹಿಂದಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ.

ಮೃತರಲ್ಲಿ ಹೆಚ್ಚಿನವರು ಯುಪಿ ನಿವಾಸಿಗಳಾಗಿದ್ದು ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತವನ್ನು ದೃಢಪಡಿಸಿದ ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ (Navneet Bhasin), ರೇವಾದ (Rewa) ಸೊಹಗಿ ಬೆಟ್ಟದ (Suhagi Hill) ಬಳಿ ಬಸ್ ಮತ್ತು ಟ್ರೇಲರ್‌ ಟ್ರಕ್ ನಡುವೆ ಡಿಕ್ಕಿಯಾಗಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಈ ಅಪಘಾತದಲ್ಲಿ 40 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ 40 ಮಂದಿಯಲ್ಲಿ 20 ಮಂದಿಯನ್ನು ಪ್ರಯಾಗರಾಜ್ (ಉತ್ತರ ಪ್ರದೇಶ) ಆಸ್ಪತ್ರೆಗೆ (Uttar Pradesh) ದಾಖಲಿಸಲಾಗಿದೆ.

ಕೆಲವರ ಮೃತದೇಹಗಳು ಬಸ್‌ನ ಕ್ಯಾಬಿನ್‌ನಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದವು. ಅವುಗಳನ್ನು ತೆಗೆಯಲು ಸ್ಥಳೀಯ ಜನರು ಹರಸಾಹಸ ಪಟ್ಟಿದ್ದಾರೆ.

ರೇವಾ ಬಸ್-ಟ್ರಾಲಿ ಟ್ರಕ್ ಡಿಕ್ಕಿಯಲ್ಲಿ ಮೃತಪಟ್ಟವರ ನಿಧನಕ್ಕೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ (Madhya Pradesh Home Minister Narottam Mishra) ಸಂತಾಪ ಸೂಚಿಸಿದ್ದಾರೆ.