Home Interesting ‘ನನ್ನ ಸಾವು ನಿನ್ನ ಮದುವೆಯ ಉಡುಗೊರೆ’ ಎಂದು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ...

‘ನನ್ನ ಸಾವು ನಿನ್ನ ಮದುವೆಯ ಉಡುಗೊರೆ’ ಎಂದು ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಪ್ರಿಯಕರ

Hindu neighbor gifts plot of land

Hindu neighbour gifts land to Muslim journalist

ತಾನು ಪ್ರೀತಿಸಿದ ಹುಡುಗಿ ಬೇರೆ ಮದುವೆಯಾದಳು ಎಂದು ನೊಂದುಕೊಂಡು, ಪ್ರಿಯಕರ ಆತನ ಸಾವನ್ನು ಅವಳಿಗೆ ಉಡುಗೊರೆಯಾಗಿ ಅರ್ಪಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಯಕ ಘಟನೆ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯುವಕ ತನ್ನ ಸಾವನ್ನು ತನ್ನ ಗೆಳತಿಗೆ ತನ್ನ ಕಡೆಯಿಂದ ನೀಡಿದ ಮದುವೆಯ ಉಡುಗೊರೆ ಎಂದು ಕೋಣೆಯಲ್ಲಿ ಬರೆದಿದ್ದಾನೆ. ಅಷ್ಟೇ ಅಲ್ಲದೆ ಯುವಕ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ವಾಟ್ಸಾಪ್ ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಯುವಕ ಕಲ್ಲಿದ್ದಲಿನಿಂದ ಗೋಡೆಯ ಮೇಲೆ ‘ನನ್ನ ಸಾವು ನಿನ್ನ ಮದುವೆಯ ಉಡುಗೊರೆ, ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಕೊರಳಿಗೆ ಕುಣಿಕೆ ಹಾಕಿಕೊಂಡು ವಿಡಿಯೋ ಮಾಡಿ, ಅದನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ ಆಕೆಯನ್ನು ಆಳವಾಗಿ ಪ್ರೀತಿಸುತ್ತಿದ್ದು, ಇದೀಗ ಆ ಹುಡುಗಿ ಮದುವೆಯಾಗುತ್ತಿದ್ದಾಳೆ ಎಂಬ ನೋವೇ ಆತನ ಈ ನಿರ್ಧಾರಕ್ಕೆ ಕಾರಣವಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಬಲೋದ್ ಡಿಎಸ್ಪಿ ಪ್ರತೀಕ್ ಚತುರ್ವೇದಿ ತಿಳಿಸಿದ್ದಾರೆ. ಇದರೊಂದಿಗೆ ವಿಡಿಯೋ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.