Home latest ಆಂಟಿಯೊಂದಿಗೆ ಲವ್ ಸೆಕ್ಸ್ ದೋಖಾ | ನಂತರ ನಡೆದದ್ದು ಭಾರೀ ದೊಡ್ಡ ಅನಾಹುತ

ಆಂಟಿಯೊಂದಿಗೆ ಲವ್ ಸೆಕ್ಸ್ ದೋಖಾ | ನಂತರ ನಡೆದದ್ದು ಭಾರೀ ದೊಡ್ಡ ಅನಾಹುತ

Hindu neighbor gifts plot of land

Hindu neighbour gifts land to Muslim journalist

ಆ ಯುವಕನಿಗೆ ಆಕೆಯ ಪರಿಚಯವಾಗಿದ್ದು ಫೇಸ್ಬುಕ್ ಮೂಲಕ. ಆಕೆ ಚಿರಯೌವನದ ಯುವತಿ ಹೌದು. ಆದರೆ ಇನ್ನೊಬ್ಬನ ಹೆಂಡತಿ. ಆದರೂ ಮನಸ್ಸು ಕೇಳಿಲ್ಲ. ಎಲ್ಲನೂ ಚೆನ್ನಾಗಿಯೇ ಇದೆ ಎಂದು, ನಂತರ ಪರಿಚಯ ಪ್ರೀತಿ ಅಕ್ರಮ ಸಂಬಂಧದವರೆಗೆ ಹೋಯಿತು. ಮತ್ತೇ ಅದೇ ಅಕ್ರಮ ಸಂಬಂಧ ಮಾಡಿದರೆ ಕೊನೆಗೆ ಏನಾಗುತ್ತೆ ಅದೇ ಆಗಿದೆ. ಯಸ್ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಯುವಕ ಆಕೆಯನ್ನು ಕೊಲೆ ಮಾಡಿದ ಘಟನೆ ನಡೆದಿದ್ದು, ಚಿಂಚೋಳಿ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಅಸ್ಸಾಂ ಮೂಲದ ಜನ್ಮನಾ ಮೃತ ಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳೊಂದಿಗೆ ಸುಖವಾಗಿ ಸಂಸಾರ ಸಾಗಿಸುತ್ತಿದ್ದ ಜನ್ಮನಾಳಿಗೆ ಫೇಸ್ಬುಕ್ ಮೂಲಕ ಬಿಹಾರದ ಮೊಹಮ್ಮದ್ ಜುಲ್ಫಿಕರ್ ಎಂಬ ಯುವಕ ಪರಿಚಯವಾಗಿದ್ದಾನೆ.

ಇಬ್ಬರೂ ಪ್ರೀತಿಸಿದ್ದು, ಜೊತೆಯಾಗಿ ಜೀವನ ನಡೆಸಲು ನಿರ್ಧಾರ ಮಾಡಿದ್ದಾರೆ. ಆತನನ್ನು ನಂಬಿ ಆಕೆ ಮಕ್ಕಳನ್ನು ಬಿಟ್ಟು, ಸಂಸಾರ ಬಿಟ್ಟು ಒಂದೂವರೆ ವರ್ಷದ ಹಿಂದೆ ಚಿಂಚೋಳಿಗೆ ಬಂದು ನೆಲೆಸಿ ಆತನ ಜೊತೆ ಒಂದು ತಿಂಗಳು ಸಂಸಾರ ನಡೆಸಿದ್ದಾಳೆ. ಯಾವಾಗ ಆಕೆ ಮದುವೆಯಾಗು ಎಂದು ಒತ್ತಾಯಿಸಿದಳು ನೋಡಿ ಆವಾಗ ಆತ ಮದುವೆ ಆಗಲು ನಿರಾಕರಿಸಿದ್ದಾನೆ. ಒತ್ತಾಯ ಹೆಚ್ಚಾದಾಗ, ಕೊನೆಗೆ ಕಳೆದ ವರ್ಷ ಏಪ್ರಿಲ್ 5 ರಂದು ಪೋಲಕಪಳ್ಳಿ ಸಮೀಪ ಆಕೆಯನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದಾನೆ.

ಮೃತದೇಹ ದೊರೆತ ನಂತರ ಜಿಂಚೋಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಸುತ್ತಮುತ್ತಲಿನ ಯಾವುದೇ ಠಾಣೆಗಳಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರಲಿಲ್ಲ. ಜನ್ಮನಾಳ ಮೊಬೈಲ್ ನಂಬರ್ ಕಾಲ್ ಡೀಟೇಲ್ಸ್ ಸಂಗ್ರಹಿಸಿದ ಪೊಲೀಸರು ಆಕೆ, ಸಿಮ್ ಖರೀದಿಸುವಾಗ ನೀಡಿದ ಫೋಟೋ ಸಂಗ್ರಹಿಸಿದ್ದಾರೆ. ಬಳಿಕ ಮೃತ ದೇಹದೊಂದಿಗೆ ಹೋಲಿಕೆ ಮಾಡಿದಾಗ ಮೃತಪಟ್ಟಿರುವುದು ಜನ್ಮನಾ ಎಂದು ಪೊಲೀಸರಿಗೆ ಗೊತ್ತಾಗಿದೆ. ಯಾವ ನಂಬರ್ ಗಳಿಂದ ಆಕೆಗೆ ಕರೆ ಬಂದಿದೆ ಎಂದು ಪರಿಶೀಲಿಸಿದಾಗ ಮೊಹಮ್ಮದ್ ಜುಲ್ಫಿಕರ್ ಮೊಬೈಲ್ ನಿಂದ ಕಾಲ್ ಬಂದಿರುವುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.