Home latest LIC Dhan Varsha: ಈ ಯೋಜನೆ ನಿಮ್ಮ ಹೂಡಿಕೆಗೆ 10 ಪಟ್ಟು ಲಾಭ ಕೊಡುತ್ತೆ!

LIC Dhan Varsha: ಈ ಯೋಜನೆ ನಿಮ್ಮ ಹೂಡಿಕೆಗೆ 10 ಪಟ್ಟು ಲಾಭ ಕೊಡುತ್ತೆ!

Hindu neighbor gifts plot of land

Hindu neighbour gifts land to Muslim journalist

ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿಮಾ ಪಾಲಿಸಿಯ ಪಾತ್ರ ಮಹತ್ವವಾದದ್ದು. ಭಾರತದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮವು ಕೋಟಿಗಟ್ಟಲೆ ಪಾಲಿಸಿದಾರರನ್ನು ಹೊಂದಿದೆ. ಎಲ್‌ಐಸಿ (LIC )ಯು ತನ್ನ ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಜೀವ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಹಾಗೆಯೇ ಇತ್ತೀಚೆಗೆ ಧನ್ ವರ್ಷ (Dhan Varsha) ಯೋಜನೆ ಎಂಬ ಹೊಚ್ಚಹೊಸ ವಿಮಾ ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯಲ್ಲಿ ನೀವೆನಾದರೂ 10 ಲಕ್ಷಗಳನ್ನು ಹೂಡಿಕೆ ಮಾಡಿದರೆ ನಿಮಗೆ ಹೂಡಿಕೆಯ ಹಣಕ್ಕಿಂತ 10 ಪಟ್ಟು ಹೆಚ್ಚು ಹಣವನ್ನು ನಿಮ್ಮದಾಗಿಸಿಕೊಳ್ಳಬಹುದು!! ಹೌದು, LIC ಈ ಹೊಸ ಯೋಜನೆಯು ವಿಶಿಷ್ಟವಾಗಿದ್ದೂ ಪಾವತಿಸಿದ ಪ್ರೀಮಿಯಂಗಳ ಮೊತ್ತಕ್ಕಿಂತ 10 ಪಟ್ಟು ಹೆಚ್ಚಿನ ಮೊತ್ತವನ್ನು ನಿಮಗೆ ನೀಡುತ್ತದೆ. ಈ ಪಾಲಿಸಿಗಾಗಿ ಹೂಡಿಕೆದಾರರು ಒಂದೇ ಪ್ರೀಮಿಯಂನಲ್ಲಿ ಠೇವಣಿ ಇಟ್ಟರೆ ಸಾಕು. ಅದರ ವಿಮಾ ಮೊತ್ತವು 10 ಪಟ್ಟು ಹೆಚ್ಚಾಗಿರುತ್ತದೆ.

ಪ್ರಸ್ತುತ ಆಫ್‌ ಲೈನ್‌ ನಲ್ಲಿ ಮಾತ್ರ ಲಭ್ಯವಿರುವ LIC ಯ ಧನ್ ವರ್ಷ ಯೋಜನೆಯು ವೈಯಕ್ತಿಕ ವಿಮಾ ಯೋಜನೆಯಾಗಿದೆ. ಈ ಮಧ್ಯೆ ಪಾಲಿಸಿದಾರನು ಮೆಚ್ಯೂರಿಟಿಯ ಮೊದಲು ಮರಣ ಹೊಂದಿದರೆ, ಅವನ ಕುಟುಂಬವು ವಿಮೆಯ ಎರಡರಷ್ಟು ಮೊತ್ತವನ್ನು ಪಡೆಯುತ್ತದೆ. LIC ಯ ಧನ್ ವರ್ಷ ಯೋಜನೆಯಲ್ಲಿ 2 ಆಯ್ಕೆಗಳಿವೆ.

ಮೊದಲ ಆಯ್ಕೆ: ಧನ್ ವರ್ಷ ಯೋಜನೆಯು ಹೂಡಿಕೆ ಮಾಡಿದ ಪ್ರೀಮಿಯಂನ 1.25 ಪಟ್ಟು ಲಾಭವನ್ನು ನಿಮಗೆ ಒದಗಿಸುತ್ತದೆ. ಅಂದರೆ ನೀವು ಒಂದೇ ಪ್ರೀಮಿಯಂನಲ್ಲಿ 10 ಲಕ್ಷ ರೂಪಾಯಿ ಪಾವತಿಸಿದ್ದು, ಮೆಚ್ಯುರಿಟಿಗೂ ಮುನ್ನ ಮರಣ ಹೊಂದಿದರೆ ಆ ಕುಟುಂಬ ವಿಮಾ ಮೊತ್ತವಾಗಿ 12.5 ಲಕ್ಷ ರೂಗಳ ಖಾತರಿ ಬೋನಸ್‌ ಪಡೆಯುತ್ತದೆ.

ಎರಡನೆಯ ಆಯ್ಕೆ: ಹೂಡಿಕೆದಾರರು 10 ಪಟ್ಟು ಅಪಾಯದಿಂದ ರಕ್ಷಣೆಯನ್ನು ಈ ಆಯ್ಕೆಯಲ್ಲಿ ಪಡೆಯುತ್ತಾರೆ. ವಿಮಾ ರಕ್ಷಣೆಯನ್ನು ಖರೀದಿಸಿದ ನಂತರ ವ್ಯಕ್ತಿ ಮರಣಹೊಂದಿದರೆ ಈ ಸಂದರ್ಭದಲ್ಲಿ 10 ಪಟ್ಟು ಮರುಪಾವತಿಯನ್ನು ನೀಡಲಾಗುತ್ತದೆ. ನೀವೇನಾದರೂ ಇದರಲ್ಲಿ 10 ಲಕ್ಷ ಹೂಡಿಕೆ ಮಾಡಿದರೆ 1 ಕೋಟಿ ರೂ ಬೋನಸ್ ಪಡೆಯುತ್ತೀರಿ. ನಿಮ್ಮ ಅಗತ್ಯತೆಗಳನ್ನು ಅರಿತು ನೀವು ಯಾವುದನ್ನಾದರೂ ಆಯ್ಕೆ ಮಾಡಬಹುದು.

ಈ ಧನ್‌ ವರ್ಷ ವಿಮೆಯನ್ನು ಆಫ್‌ಲೈನ್‌ನಲ್ಲಿ ಮಾತ್ರ ಖರೀದಿಸಬಹುದಾಗಿದ್ದೂ, 10 ಅಥವಾ 15 ವರ್ಷಗಳ ಅವಧಿಯ ಪಾಲಿಸಿ ಲಭ್ಯವಿದೆ. ನೀವು 15 ವರ್ಷಗಳ ಅವಧಿಯ ಪಾಲಿಸಿ ಖರೀದಿಸಬೇಕಾದರೆ ಕನಿಷ್ಠ 3 ವರ್ಷ ವಯಸ್ಸಾಗಿರಬೇಕು. ಹಾಗೆಯೇ 10 ವರ್ಷದ ವಿಮೆ ಪಡೆಯಲು ಕನಿಷ್ಠ 8 ವರ್ಷ ವಯಸ್ಸಾಗಿರಬೇಕು.

ವಿಮೆಯನ್ನು ಖರೀದಿಸಲು ಮೊದಲ ಆಯ್ಕೆಯ ಗರಿಷ್ಠ ವಯಸ್ಸು 60 ವರ್ಷ. ಆದರೆ 10 ಪಟ್ಟು ಆದಾಯವನ್ನು ಹೊಂದಿರುವ ಪಾಲಿಸಿಗೆ ಗರಿಷ್ಠ ವಯಸ್ಸು 40 ವರ್ಷಗಳು. 10 ಪಟ್ಟು ಮರು ಆದಾಯದೊಂದಿಗೆ 15-ವರ್ಷದ ಕವರೇಜ್ ಅನ್ನು 35 ನೇ ವಯಸ್ಸಿನಲ್ಲಿ ಮಾತ್ರ ಖರೀದಿಸಬಹುದು. ಈ ಪಾಲಿಸಿಯ ಅಡಿಯಲ್ಲಿ ನೀವು ಸಾಲ ಮತ್ತು ವಿಮೆ ಎರಡನ್ನೂ ಹಿಂದಿರುಗಿಸುವ ಆಯ್ಕೆಯನ್ನು ಹೊಂದಿರುತ್ತೀರಿ. ಪಾಲಿಸಿಯ ನಾಮಿನಿಯು ಹಣವನ್ನು ಕಂತುಗಳಲ್ಲಿ ಸ್ವೀಕರಿಸುವ ಆಯ್ಕೆಯನ್ನೂ ಹೊಂದಿರುತ್ತಾರೆ.

LIC ಯ ಅನೇಕ ಯೋಜನೆಗಳಂತೆ ಧನ್‌ ವರ್ಷ ಯೋಜನೆ ಕೂಡ ನಿಮಗೆ ಅನುಕೂಲಕಾರಿಯಾಗಲಿದ್ದೂ, ನಿಮ್ಮ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿಮೆಯನ್ನು ತೆಗೆದುಕೊಳ್ಳಿ.