Home News Madhya Pradesh: ಪತ್ನಿಯ 2 ಟೊಮ್ಯಾಟೋ ಬಳಸಿದ ಪತಿ, ಕೋಪಗೊಂಡು ಮನೆ ಬಿಟ್ಟು ತವರು ಸೇರಿದ...

Madhya Pradesh: ಪತ್ನಿಯ 2 ಟೊಮ್ಯಾಟೋ ಬಳಸಿದ ಪತಿ, ಕೋಪಗೊಂಡು ಮನೆ ಬಿಟ್ಟು ತವರು ಸೇರಿದ ಟೊಮ್ಯಾಟೋ ಪ್ರಿಯ ಹೆಂಡತಿ !

Hindu neighbor gifts plot of land

Hindu neighbour gifts land to Muslim journalist

Madhya Pradesh: ದೇಶಾದ್ಯಂತ ಜನರು ಟೊಮ್ಯಾಟೋ ಬೆಲೆ ಏರಿದ್ದನ್ನು ನೋಡಿ, ಟೊಮ್ಯಾಟೋ ತರುವುದನ್ನೇ ನಿಲ್ಲಿಸಿದ್ದಾರೆ. 1 ಕೆಜಿ ಟೊಮೇಟೊ ತರಬೇಕು ಅಂದ್ರು ಜನರು 10 ಸಲ ಯೋಚಿಸಬೇಕು. ಅಷ್ಟೊಂದು ಟಾಪ್ ಪ್ರಿಯಾರಿಟಿ ಪಡೆದುಕೊಂಡಿರುವ ಟೊಮ್ಯಾಟೋದಿಂದಾಗಿ (tomato) ಇಲ್ಲೊಂದು ಕಡೆ ಸಂಬಂಧವೊಂದು ಬಿರುಕು ಮೂಡಿದೆ. ಹೆಂಡತಿಯನ್ನು ಕೇಳದೆ ಗಂಡನು ಟೊಮೇಟೊ ಬಳಸಿದಕ್ಕಾಗಿ ಕೋಪಗೊಂಡ ಪತ್ನಿಯು ಮನೆ ಬಿಟ್ಟು ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು ಈ ಘಟನೆಯು ಮಧ್ಯಪ್ರದೇಶದ ಶಹದೋಲ್‌ನಲ್ಲಿ (Shahdol) ನಡೆದಿದ್ದು, ಹೆಂಡತಿಯ ಪರ್ಮಿಷನ್ ಇಲ್ಲದೆ ಗಂಡನು ಅಡುಗೆಯಲ್ಲಿ ಟೊಮ್ಯಾಟೋ ಬಳಸಿದ್ದಕ್ಕಾಗಿ, ಕೋಪಗೊಂಡ ಪತ್ನಿಯು ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಇಂತಹ ವಿಚಿತ್ರ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ(Madhya Pradesh) ದಾಖಲಾಗಿದೆ.

ಸಂಜೀವ್ ಬರ್ಮನ್ ಟಿಫಿನ್ ಸರ್ವಿಸ್(Tiffin service) ನಡೆಸುತ್ತಿದ್ದರು. ಇವರು ಅಡುಗೆ (Cook) ಮಾಡುವ ಸಂದರ್ಭದಲ್ಲಿ ಹೆಂಡತಿಯ ಅಪ್ಪಣೆಯಿಲ್ಲದೆ 2 ಟೊಮೆಟೊವನ್ನು (Tomato) ಅಡುಗೆಯಲ್ಲಿ ಬಳಸಿದ್ದಾರೆ. ಇದರಿಂದ ಕೋಪಗೊಂಡ ಹೆಂಡತಿ ಗಂಡನೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಹೆಂಡತಿ ತನ್ನ ಮಗಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ.

ಬಳಿಕ ಸಂಜೀವ್ ತನ್ನ ಹೆಂಡತಿ ಮತ್ತು ಮಗಳನ್ನು ಊರಿನ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆ ಸಂಜೀವ್ ಹತ್ತಿರದ ಪೊಲೀಸ್ ಠಾಣೆಯಲ್ಲಿ (police station) ನಾಪತ್ತೆಯಾಗಿರುವುದರ ಬಗ್ಗೆ ದೂರು ನೀಡಿದ್ದಾರೆ.

ಪತ್ನಿ ಜೊತೆ ಮಾತನಾಡದೆ 3 ದಿನಗಳಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಬಗ್ಗೆಯೂ ತಿಳಿದಿಲ್ಲ ಎಂದು ಸಂಜೀವ್ ಬೇಸರ ವ್ಯಕ್ತಪಡಿಸಿದ್ದಾರೆ.ಅಲ್ಲದೇ ಆಕೆಯನ್ನು ಹುಡುಕಿಕೊಡುವಂತೆ ಪೊಲೀಸರ(police) ಬಳಿ ಮನವಿ ಮಾಡಿದ್ದಾರೆ. ಪೊಲೀಸರು ಇವರ ಹೆಂಡತಿಯನ್ನು ಸಂಪರ್ಕಿಸಿ ಆದಷ್ಟು ಬೇಗ ಮನೆಗೆ ಬರುವಂತೆ ಮಾಡುತ್ತೇವೆ ಎಂದು ಸಂಜೀವ್ ಅವರಿಗೆ ಭರವಸೆ ನೀಡಿದ್ದಾರೆ.

 

ಇದನ್ನು ಓದಿ: Intresting news: ಈ ಕುಟುಂಬದ ಎಲ್ಲ 9 ಜನರ ಹುಟ್ಟಿದ ದಿನಾಂಕ ಒಂದೇ, ಗಿನ್ನಿಸ್ ಸೇರಿದ ಫ್ಯಾಮಿಲಿಗೆ ಇದೆ ಇನ್ನೂ ಹಲವು ಬರ್ತ್ ಸ್ಪೆಶಾಲಿಟಿ !