Home News Cristiano Ronaldo: ಸೌದಿಯಲ್ಲಿ ರೊನಾಲ್ಡೊ ಬದುಕು ಹೇಳೋ ಮ್ಯೂಸಿಯಮ್ ಅನಾವರಣ- ರೊನಾಲ್ಡೊ ಹೇರ್ ಸ್ಟೈಲ್ ನೋಡಿ...

Cristiano Ronaldo: ಸೌದಿಯಲ್ಲಿ ರೊನಾಲ್ಡೊ ಬದುಕು ಹೇಳೋ ಮ್ಯೂಸಿಯಮ್ ಅನಾವರಣ- ರೊನಾಲ್ಡೊ ಹೇರ್ ಸ್ಟೈಲ್ ನೋಡಿ ಫ್ಯಾನ್ಸ್ ಏನಂದ್ರು ಗೊತ್ತಾ?!

Cristiano Ronaldo
image sorce: Marca. Com

Hindu neighbor gifts plot of land

Hindu neighbour gifts land to Muslim journalist

Cristiano Ronaldo: ಫುಟ್ಬಾಲ್‌ ಕ್ಷೇತ್ರದ ಜನಪ್ರಿಯ ಆಟಗಾರ ರೊನಾಲ್ಡೊ, ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಅವರದೇ ವೈಯಕ್ತಿಕ ವಸ್ತುಸಂಗ್ರಹಾಲಯವನ್ನು ಅನಾವರಣಗೊಳಿಸಿದ್ದು, ಅಲ್ಲಿ ರೊನಾಲ್ಡೊ (Cristiano Ronaldo) ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಗಳಿಸಿದ ವೈಯಕ್ತಿಕ ಪ್ರಶಸ್ತಿಗಳನ್ನು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ. ಜೊತೆಗೆ ಪೋರ್ಚುಗಲ್ ರಾಷ್ಟ್ರೀಯ ತಂಡ ಮತ್ತು ಈ ಹಿಂದಿನ ಕ್ಲಬ್‌ಗಳ ಪರ ಆಡುವಾಗ ಗಳಿಸಿದ ಪ್ರಮುಖ ಪ್ರಶಸ್ತಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಒಟ್ಟಿನಲ್ಲಿ ವಸ್ತುಸಂಗ್ರಹಾಲಯವು ರೊನಾಲ್ಡೊ ಅವರ ವೃತ್ತಿಜೀವನದ ಆರಂಭದಿಂದ ಹಿಡಿದು ಫುಟ್‌ಬಾಲ್ ಕ್ಷೇತ್ರದ ದಿಗ್ಗಜ ಆಟಗಾರನಾಗುವವರೆಗೆ ಕಂಡುಕೊಂಡ ವಿಕಾಸದ ಸಮಗ್ರ ಚಿತ್ರಣವನ್ನು ಜನರಿಗೆ ನೀಡುತ್ತದೆ.

ಅದಲ್ಲದೆ ಮುಖ್ಯವಾಗಿ ಮ್ಯೂಸಿಯಂ ಲೋಕಾರ್ಪಣೆ ವೇಳೆ ರೊನಾಲ್ಡೊ ಅವರು ತನ್ನ ಪ್ರತಿಮೆಯ ಪಕ್ಕದಲ್ಲಿ ನಿಂತುಕೊಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಆದರೆ ಮತ್ತೊಂದೆಡೆ ವಿವಾದವನ್ನು ಹುಟ್ಟುಹಾಕಿದೆ. ರೊನಾಲ್ಡೊ ಪ್ರತಿಮೆಯಲ್ಲಿ‌ ಕೆಲವು ತಪ್ಪು ಇದೆ ಎಂಬ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.

“ಇದು ನನ್ನ ಕಥೆ. ಮಡೈರಾದಿಂದ (ಪೋರ್ಚುಗಲ್‌ನ ಒಂದು ಪ್ರದೇಶ) ಸೌದಿ ಅರೇಬಿಯಾದಲ್ಲಿ ನನ್ನ ಮ್ಯೂಸಿಯಂ ಈಗ ರಿಯಾದ್‌ನಲ್ಲಿ ತೆರೆಯಲಾಗಿದೆ” ಎಂದು ಮ್ಯೂಸಿಯಂನ ಅಧಿಕೃತ ಖಾತೆ ಇನ್ಸ್‌ಟಾಗ್ರಾಮ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮ ವಿಮರ್ಶಕರು ರೊನಾಲ್ಡೊ ಅವರ ಕೇಶವಿನ್ಯಾಸದಲ್ಲಿನ ಬದಲಾವಣೆ ಸೇರಿದಂತೆ ಅವರ ಪ್ರತಿಮೆಯಲ್ಲಿ ಆಗಿರುವ ತಪ್ಪುಗಳನ್ನು ಎತ್ತಿತೋರಿಸಿದ್ದಾರೆ.

https://x.com/CristianoWorld_/status/1728582375855018156?s=20