Home News ITR filing: ಬಂದೇ ಬಿಡ್ತು ಹೊಸ ಇನ್ ಕಮ್ ಟ್ಯಾಕ್ಸ್ ರೂಲ್ಸ್, ಇನ್ಮುಂದೆ ಇವರೆಲ್ಲಾ ನಯಾ...

ITR filing: ಬಂದೇ ಬಿಡ್ತು ಹೊಸ ಇನ್ ಕಮ್ ಟ್ಯಾಕ್ಸ್ ರೂಲ್ಸ್, ಇನ್ಮುಂದೆ ಇವರೆಲ್ಲಾ ನಯಾ ಪೈಸಾ ಟ್ಯಾಕ್ಸ್ ಕಟ್ಟಬೇಕಿಲ್ಲ !

ITR filing

Hindu neighbor gifts plot of land

Hindu neighbour gifts land to Muslim journalist

ITR Filing: ಸಾಮಾನ್ಯವಾಗಿ ತೆರಿಗೆಗೆ ಒಳಪಡುವ ಆದಾಯ ಹೊಂದಿರುವ ಪ್ರತಿಯೊಬ್ಬರೂ ವಾರ್ಷಿಕವಾಗಿ ಆದಾಯ ತೆರಿಗೆ ರಿಟರ್ನ್ಸ್(ITR) ಸಲ್ಲಿಸಬೇಕು. ಆದರೆ, ಇದೀಗ ತೆರಿಗೆದಾರರಿಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್(Income tax department) ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಇವರೆಲ್ಲ ಟ್ಯಾಕ್ಸ್ ಕಟ್ಟ ಬೇಕಾಗಿಲ್ಲ!.

ಹೌದು ಕೇಂದ್ರ ಸರ್ಕಾರವು ತೆರಿಗೆ ಪಾವತಿ ಮಾಡುವ ಕೆಲ ಜನರಿಗೆ ತೆರಿಗೆ ರಿಟರ್ನ್ಸ್ ಸಲ್ಲಿಸುವ (ITR Filing) ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಪ್ರಯೋಜನವು ಆಯ್ದ ಜನರಿಗೆ ಮಾತ್ರ ಲಭ್ಯವಿದೆ. ಹಿರಿಯ ನಾಗರಿಕರು (75 ವರ್ಷಕ್ಕಿಂತ ಮೇಲ್ಪಟ್ಟವರಿಗೆ) ಮಾತ್ರ ಈ ಪ್ರಯೋಜನವನ್ನು ಪಡೆಯುತ್ತಾರೆ.

ಆದಾಯ ತೆರಿಗೆ (income Tax)ಕಾಯ್ದೆಯ ಸೆಕ್ಷನ್ 194 ಪಿ ಪ್ರಕಾರ, ಹಿರಿಯ ನಾಗರಿಕರು ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ. ಆದರೆ ಇದಕ್ಕೆ ಕೆಲವು ಶರತ್ತುಗಳು ಅನ್ವಯವಾಗುತ್ತದೆ. ಇದು 31 ಮಾರ್ಚ್ 2023 ರಂತೆ 75 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಅನ್ವಯಿಸುತ್ತದೆ. ಅಂದರೆ 2022-23ನೇ ಹಣಕಾಸು ವರ್ಷಕ್ಕೆ ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ.

ಇದಲ್ಲದೆ, ಅವರ ಆದಾಯವು ಕೇವಲ ಬಡ್ಡಿ, ಪಿಂಚಣಿ ಮೂಲಕ ಮಾತ್ರ ಇರಬೇಕು. ಪಿಂಚಣಿ ಆದಾಯವನ್ನು ಪಡೆಯುವ ಬ್ಯಾಂಕ್‌ನಿಂದ ನೀವು ಯಾವುದೇ ಆದಾಯವನ್ನು ಬಡ್ಡಿಯ ರೂಪದಲ್ಲಿ ಪಡೆಯುತ್ತಿದ್ದರೆ ಐಟಿಆರ್ ಅನ್ನು ಸಲ್ಲಿಸುವ ಅಗತ್ಯವಿಲ್ಲ. ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ.

ITR ಫೈಲಿಂಗ್‌ನ ಗಡುವು ಜುಲೈ 31 ಕೊನೆಯ ದಿನಾಂಕವಾಗಿದೆ. ಆ ದಿನಾಂಕದೊಳಗೆ ಸಲ್ಲಿಸದೆ ಇದ್ದರೆ 1-5 ಸಾವಿರದವರೆಗೆ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಯಾರಾದರೂ ಐಟಿಆರ್ ಫೈಲ್ ಮಾಡಬೇಕಾದರೆ ತಕ್ಷಣ ಈ ಕೆಲಸವನ್ನು ಪೂರ್ಣಗೊಳಿಸಿ.

 

ಇದನ್ನು ಓದಿ: Free current Scheme: ಗೃಹಜ್ಯೋತಿ ಅರ್ಜಿದಾರರಿಗೆ ಬಿಗ್ ಶಾಕ್ ಕೊಟ್ಟ ಇಂಧನ ಇಲಾಖೆ !! ಇಂತವರ ಅರ್ಜಿ ಕ್ಯಾನ್ಸಲ್- ಪರಿಹಾರವೇನು?