Home Education Free Coaching : KPSC, UPSC ಪರೀಕ್ಷೆಗೆ ಸರಕಾರದಿಂದ ಉಚಿತ ತರಬೇತಿ | ಹೆಚ್ಚಿನ...

Free Coaching : KPSC, UPSC ಪರೀಕ್ಷೆಗೆ ಸರಕಾರದಿಂದ ಉಚಿತ ತರಬೇತಿ | ಹೆಚ್ಚಿನ ಮಾಹಿತಿ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುವ ಯೋಜನೆ ರೂಪಿಸಲಾಗಿದ್ದು, ಕಲಿಕೆಯೆಯಲ್ಲಿ ಆಸಕ್ತಿಯುಳ್ಳ ಮತ್ತು ಸ್ಪರ್ದಾತ್ಮಕ ಪರೀಕ್ಷೆ ಬರೆಯುವ ಆಶಯ ಹೊಂದಿರುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಿದೆ.


ಕಾರ್ಮಿಕರ ಮಕ್ಕಳಿಗೆ ನೆರವಾಗುವ ದೃಷ್ಟಿಯಿಂದ ಈ ತರಬೇತಿ ಆಯೋಜಿಸಲಾಗಿದ್ದು ಇದರಲ್ಲಿ KPSC/ UPSC ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ ಮುಂದಾಳತ್ವ ವಹಿಸಿದ್ದಾರೆ. ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ  ತರಬೇತಿ ನೀಡಿ  ನೆರವಾಗುವ ನಿಟ್ಟಿನಲ್ಲಿ ಈ ತರಬೇತಿ ಆಯೋಜಿಸಲಾಗಿದೆ.


ಸರ್ಕಾರದಿಂದ KPSC, UPSC ಪರೀಕ್ಷೆಗೆ ಉಚಿತ ತರಬೇತಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಈ ತರಬೇತಿ ನೀಡಲಾಗುತ್ತದೆ. ಹಾಗಾಗಿ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಈ ತರಬೇತಿ ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾದ  ಶೈಕ್ಷಣಿಕ ದಾಖಲೆಗಳು ಹೀಗಿವೆ- SSLC, PUC ಮತ್ತು ಪದವಿ ಶೈಕ್ಷಣಿಕ ಪ್ರಮಾಣ ಪತ್ರ ದಾಖಲೆ ನೀಡಬೇಕಾಗುತ್ತದೆ. ಈ ದಾಖಲೆ ಸಲ್ಲಿಸದಿದ್ದರೆ ಅರ್ಜಿ ಸ್ವೀಕರಿಸುವುದಿಲ್ಲ.


ಈ ತರಬೇತಿಗೆ  ಅರ್ಜಿ ಸಲ್ಲಿಸಲು ಮಾನದಂಡಗಳನ್ನು ಗಮನಿಸಿದರೆ, ಅರ್ಜಿದಾರರು ಪದವೀಧರರಾಗಿಲೇಬೇಕು ಜೊತೆಗೆ  ಅರ್ಜಿ  ಸಲ್ಲಿಸುವ ಅಭ್ಯರ್ಥಿ ಕಾರ್ಮಿಕ ಕಾರ್ಡ್​ ಹೊಂದಿರಬೇಕಾಗುತ್ತದೆ.


KPSC / UPSC ತರಬೇತಿಗೆ ಅರ್ಜಿ ಸಲ್ಲಿಸಲು ನವೆಂಬರ್ 21 ಕೊನೆ ದಿನಾಂಕವಾಗಿದೆ. ಇದರ ಕುರಿತಾದ  ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ. ಕಾರ್ಮಿಕರ ಸಹಾಯವಾಣಿ 155214 ಕ್ಕೆ ಕರೆ ಮಾಡಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬಹುದು.