Home Entertainment ಮದುವೆ ಅಲಂಕಾರದಲ್ಲಿ, ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಾಸ್ಕೋಪ್ ಧರಿಸಿ ಪರೀಕ್ಷೆಗೆ ಬಂದ ಪರೀಕ್ಷಾ –...

ಮದುವೆ ಅಲಂಕಾರದಲ್ಲಿ, ಸೀರೆಯ ಮೇಲೆ ಲ್ಯಾಬ್ ಕೋಟ್, ಸ್ಟೆತಾಸ್ಕೋಪ್ ಧರಿಸಿ ಪರೀಕ್ಷೆಗೆ ಬಂದ ಪರೀಕ್ಷಾ – ವಧು !

Hindu neighbor gifts plot of land

Hindu neighbour gifts land to Muslim journalist

ವಧು ಒಬ್ಬಳು ತನ್ನ ಮದುವೆಯ ಅಲಂಕೃತ ದಿರಿಸಿನಲ್ಲಿ ಪ್ರ್ಯಾಕ್ಟಿಕಲ್‌ ಎಕ್ಸಾಂಗೆ (Practical Exam) ಹಾಜರಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಈ ಪರೀಕ್ಷಾ- ವಧು ಲಕ್ಷ್ಮಿ ಅನಿಲ್, ಕೇರಳದ ಬೆಥನಿ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಮದುವೆ ಸೀರೆಯಲ್ಲೇ ಲ್ಯಾಬ್ ಕೋಟ್ ಹಾಗೂ ಸ್ಟೆತಸ್ಕೋಪ್ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಈ ಸಂಬಂಧಿ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡುತ್ತಿದೆ.

ಹಳದಿ ಸೀರೆಯಲ್ಲಿ, ಮದುಮಗಳ ವಿಶಿಷ್ಟ ಅಲಂಕಾರದಲ್ಲಿ, ಬಿಳಿಯ ಮುಖದಲ್ಲಿ ಸಂಭ್ರಮದ ಜತೆ ತುಸು ನಾಚಿಕೆಯನ್ನು ಧರಿಸಿಕೊಂಡು ಆಕೆ ಪರೀಕ್ಷಾ ಹಾಲ್ ಗೆ ಅಡಿ ಇಟ್ಟಿದ್ದಾಳೆ. ಮದುವೆಯ ಆಭರಣ ಹಾಗೂ ಮೇಕಪ್ ಹಾಕಿ ಪರೀಕ್ಷಾ ಹಾಲ್‍ಗೆ ಪ್ರವೇಶಿಸಿದ್ದಾಳೆ. ಆಕೆ ಅಲ್ಲಿ ಸ್ನೇಹಿತರತ್ತ ಕೈಬೀಸಿ ವಿಶ್ ಮಾಡಿ ನಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.

ಈ ವೀಡಿಯೋಗೆ ಆಕೆಯು ‘ ಪರೀಕ್ಷೆ ಹಾಗೂ ಮದುವೆ ಒಂದೇ ದಿನದಲ್ಲಿ ‘ ಎಂಬ ಶೀರ್ಷಿಕೆಯನ್ನು ಹಾಕಲಾಗಿದೆ. ಮದುವೆ. ಕೂಡ ಒಂದು ದೊಡ್ಡ ಪರೀಕ್ಷೆಯೇ ಎಂದು ಅನುಭವಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಹೇಳಿದ ಆಕೆ, ಮದುವೆ ಹಾಗೂ ಪರೀಕ್ಷೆ ಒಂದೇ ದಿನದಲ್ಲಿ ಬರುತ್ತದೆ ಎಂದು ಸ್ವಲ್ಪವೆ ದಿನಗಳ ಹಿಂದೆ ತಿಳಿಯಿತು. ಅಷ್ಟರಲ್ಲಿ ಮದುವೆ ದಿನಾಂಕ ನಿರ್ಧಾರ ಆಗಿತ್ತು. ಪರೀಕ್ಷೆಯನ್ನು ಬಿಡುವ ಹಾಗಿರಲ್ಲ. ಇದರಿಂದಾಗಿ ನಾನು ಪರೀಕ್ಷೆಯನ್ನು ಬರೆಯಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಈ ವೀಡಿಯೋಕ್ಕೆ ಅನೇಕರು ಕಾಮೆಂಟ್ ಮಾಡಿ, ಪರೀಕ್ಷೆ ಬರೆದಿದ್ದಕ್ಕೆ ಶ್ಲಾಘಿಸಿದ್ದಾರೆ. ಕಿಲಾಡಿಯೊಬ್ಬ, ಮದುವೆಯ ದಿನವೇ ಪ್ರಾಕ್ಟಿಕಲ್ ಪರೀಕ್ಷೆ ಎಂದು ಕಿಚಾಯಿಸಿದ್ದಾನೆ.