Home latest Kantara Success : ಕಾಂತಾರ ಚಿತ್ರ ತಂಡದಿಂದ ದಕ್ಷಿಣ ಕನ್ನಡದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ!!!

Kantara Success : ಕಾಂತಾರ ಚಿತ್ರ ತಂಡದಿಂದ ದಕ್ಷಿಣ ಕನ್ನಡದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ!!!

Hindu neighbor gifts plot of land

Hindu neighbour gifts land to Muslim journalist

ಜಗತ್ತಿನ ಚಿತ್ರೋದ್ಯಮದಲ್ಲೇ ಸಂಚಲನ ಸೃಷ್ಟಿಸಿದ, ಭೂತಕೋಲ ದೈವಾರಧನೆಯ ಕಥಾಹಂದಾರವಾದ ‘ಕಾಂತಾರ’ ಚಿತ್ರದ ನಟ,ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ದಂಪತಿಗಳಿಬ್ಬರೂ ಇಂದು(ನ.2 ರಂದು) ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ಬಳಿಕ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದು ಸಿನಿಮಾದ ಯಶಸ್ಸಿನ ಕುರಿತು ಮಾತುಕತೆ ನಡೆಸಿದ್ದಾರೆ.

ಕ್ಷೇತ್ರದ ಪರವಾಗಿ ಪೂಜ್ಯ ಖಾವಂದರು ರಿಷಬ್ ದಂಪತಿಯನ್ನು ಅಭಿನಂದಿಸಿ ಗೌರವಿಸಿದರು. ಈ ವೇಳೆ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಟ ಪ್ರಮೋದ್ ಶೆಟ್ಟಿ, ರಿಷಬ್ ಪತ್ನಿ, ಕಾಂತಾರ ಚಲನ ಚಿತ್ರದ ಕಾಷ್ಟೂಮ್ಯ ಡಿಸೈನರ್ ಪ್ರಗತಿ ಶೆಟ್ಟಿ ಸಹಿತ ಇತರರು ಜತೆಗಿದ್ದರು.
ಹೆಗ್ಗಡೆ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ದೇವಸ್ಥಾನದ ಕಚೇರಿ ವ್ಯವಸ್ಥಾಪಕ ಪಾರ್ಶ್ವವನಾಥ ಜೈನ್, ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ದೇವಳದ ವತಿಯಿಂದ‌ ಸ್ವಾಗತಿಸಿದರು.

ಬಳಿಕ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಭೇಟಿ ನೀಡಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಗೌರವಿಸಿ ಶುಭಹಾರೈಸಿದರು.

ಬಳಿಕ ಮಣ್ಣಿನ ಹರಕೆಗೆ ಪ್ರಸಿದ್ಧಿಯಾದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾದರು.