Home Interesting ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧ ಆರೋಪ ಯುವಕನ ಕೊಲೆಯಲ್ಲಿ ಅಂತ್ಯ!! ಚಿಕ್ಕಮ್ಮನ ಮಗ ಹಾಗೂ ಆತನ ಗೆಳೆಯರ...

ಚಿಕ್ಕಮ್ಮನೊಂದಿಗೆ ಅನೈತಿಕ ಸಂಬಂಧ ಆರೋಪ ಯುವಕನ ಕೊಲೆಯಲ್ಲಿ ಅಂತ್ಯ!! ಚಿಕ್ಕಮ್ಮನ ಮಗ ಹಾಗೂ ಆತನ ಗೆಳೆಯರ ಬಂಧನ

Hindu neighbor gifts plot of land

Hindu neighbour gifts land to Muslim journalist

ಕಲಬುರಗಿ:ರೈಲ್ವೆ ಹಳಿಯಲ್ಲಿ ಯುವಕನೋರ್ವನ ಶವ ಪತ್ತೆಯಾದ ಪ್ರಕರಣವು ಆತ್ಮಹತ್ಯೆಯಲ್ಲ, ಭೀಕರ ಕೊಲೆಯೆಂದು ಬಯಲಾಗಿದೆ.ಫೋಟೋಗ್ರಾಫರ್ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವನ ಸಾವಿನ ಸುತ್ತ ಹಲವು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡು, ಆತ್ಮಹತ್ಯೆ ಎಂದು ಬಿಂಬಿಸಲಾದ ಪ್ರಕರಣ ತಿರುವುಪಡೆದಿದ್ದು ಸದ್ಯ ಐವರು ಆರೋಪಿಗಳನ್ನು ಕೊಲೆ ಪ್ರಕರಣದಡಿಯಲ್ಲಿ ಬಂಧಿಸಲಾಗಿದೆ.

ಘಟನೆ ವಿವರ:ಕಳೆದ ತಿಂಗಳು ಅಂದರೆ ಜನವರಿ 25ರಂದು ಯುವಕನ ಶವವೊಂದು ರುಂಡ-ಮುಂಡ ಬೆರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಇದೊಂದು ಆತ್ಮಹತ್ಯೆ ಯೆಂದು ಎಲ್ಲರೂ ನಂಬಿದ್ದರು. ಆದರೆ ಪೊಲೀಸರು ಸಣ್ಣ ಅನುಮಾನ ವ್ಯಕ್ತಪಡಿಸಿ ತನಿಖೆ ಮುಂದುವರಿಸಿ ಆತ್ಮಹತ್ಯೆ ಪ್ರಕರಣವನ್ನು ಕೊಲೆ ಪ್ರಕರಣವೆಂದು ಬಹಿರಂಗಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಷ್ಟಕ್ಕೂ ಅಲ್ಲಿ ನಡೆದ ಕೊಲೆಗೆ ಕಾರಣವೇನು!?
ಮೃತ ಯುವಕ ಶಿವ ಕುಮಾರ್ ಗೆ ಆತನ ಚಿಕ್ಕಮ್ಮನೊಂದಿಗೆ ದೈಹಿಕ ಸಂಪರ್ಕ ಇತ್ತು ಎನ್ನಲಾಗಿದ್ದು, ಈ ವಿಚಾರ ಚಿಕ್ಕಮ್ಮನ ಮಗ ಮಹಾಂತೇಶ ನ ಗಮನಕ್ಕೆ ಬಂದಿತ್ತು.ಇದೇ ವಿಚಾರವಾಗಿ ಕೋಪಗೊಂಡಿದ್ದ ಮಹಾಂತೇಶ್ ಶಿವಕುಮಾರ್ ನ ಆಟ ನಿಲ್ಲಿಸಲು ಪ್ಲಾನ್ ಮಾಡಿದ್ದು, ಅದರಂತೆ ತನ್ನ ಗೆಳೆಯರೊಂದಿಗೆ ಸೇರಿ ಹತ್ಯೆಗೆ ಪ್ಲಾನ್ ರೂಪಿಸಿದ್ದ.

ಜನವರಿ 25ರಂದು ಗ್ರಾಮದಿಂದ ಶಿವಕುಮಾರ್ ನನ್ನು ಸುಳ್ಳು ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದು, ಜೊತೆಗೆ ಬಸವರಾಜ್ ಸಲಗಾರ, ಸಿದ್ಧಾರೂಢ ಕೊರಬಾರ್, ಫಕೀರಪ್ಪ ಸಲಗಾರ್, ಅಶೋಕ್ ಜಮಾಧಾರ್ ಸೇರಿಕೊಂಡಿದ್ದರು.ಈ ನಾಲ್ಕು ಮಂದಿ ಗೆಳೆಯರೊಂದಿಗೆ ಸೇರಿ ಶಿವಕುಮಾರ್ ನ ಹತ್ಯೆ ನಡೆಸಿ, ಕೊಲೆ ಎಂದು ಅನುಮಾನ ಬರದಂತೆ ರೈಲ್ವೆ ಹಳಿಯ ಮೇಲೆ ಎಸೆದು ಪರಾರಿಯಾಗಿದ್ದರು.

ಮೃತದೇಹ ಪತ್ತೆಯಾದ ದಿನದಿಂದ ಇದ್ದ ಅನುಮಾನಗಳೆಲ್ಲಾ ಆತ್ಮಹತ್ಯೆ ಪ್ರಕರಣವು ಕೊಲೆಯೆಂದು ಬಹಿರಂಗವಾಗಿ, ಆರೋಪಿಗಳ ಬಂಧನದ ಬಳಿಕ ನಿಜವಾಗಿದೆ.