Home latest ಕೆಳಗಿನಿಂದ ಮೇಲಿನ ತನಕ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದೆ? – ಸಚಿವ ಅಂಗಾರ ಪ್ರಶ್ನೆ

ಕೆಳಗಿನಿಂದ ಮೇಲಿನ ತನಕ ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದೆ? – ಸಚಿವ ಅಂಗಾರ ಪ್ರಶ್ನೆ

Hindu neighbor gifts plot of land

Hindu neighbour gifts land to Muslim journalist

ಕಡಬ : ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದಾಗ ಅಭೂತಪೂರ್ವ ಅಭಿವೃದ್ಧಿಕಾರ್ಯಗಳಾಗಿವೆ ಹಾಗೂ ಆಗುತ್ತಿದೆ. ಆದರೆ ಕೆಳಗಿನಿಂದ ಮೇಲಿನ ತನಕ ಕಾಂಗ್ರೇಸ್ ಅಕಾರದಲ್ಲಿದ್ದಾಗ ಏನು ಮಾಡಿದೆ ಎಂದು ಬಂದರು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಪ್ರಶ್ನಿಸಿದರು.
ಅವರು ಶನಿವಾರ ರಾಜ್ಯ ಸರಕಾರದ ಹತ್ತು ಲಕ್ಷ ರೂ ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ ಕೊಲ ಗ್ರಾಮದ ಏಣಿತಡ್ಕ ಕಾಲೋನಿ ರಸ್ತೆಯನ್ನು ಏಣಿತಡ್ಕ ದೇವಿನಗರ ಶಿವಾಜಿ ಸರ್ಕಲ್‌ನಲ್ಲಿ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಕಾರಕ್ಕೆ ಬಂದ ಬಳಿಕ ಕೊರೊನಾ ಸಂಕಷ್ಟದ ಮಧ್ಯೆಯೂ ಅತ್ಯುತ್ತಮ ಆಡಳಿತದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇದನ್ನು ಸಹಿಸದ ವಿರೋಗಳು ಕೇವಲ ಅಪಪ್ರಚಾರ ಮಾಡುತ್ತಿದ್ದಾರೆ. ಕೆಳಗಿನಿಂದ ಮೇಲಿನ ತನಕ ಅಕಾರವಿದ್ದರೂ ಬಿಜೆಪಿಯವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾ ಜನರನ್ನು ದಾರಿತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ಗ್ರಾಮೀಣ ಭಾಗದ ಮೂಲಭೂತ ವ್ಯವಸ್ಥೆಗಳಾದ ರಸ್ತೆ ಕುಡಿಯುವ ನೀರು, ಸೇತುವೆ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಇದನ್ನು ಕಾರ್ಯಕರ್ತರು ಜನರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು, ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ಜನ ಅನುಭವಿಸಂತಾಗಬೇಕು ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ಕಡಬ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಂತಿ ಆರ್ ಗೌಡ, ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಬಿಜೆಪಿ ಎಸ್‌ಟಿ ಮೋರ್ಚಾದ ಮುಖಂಡ ಪೂವಪ್ಪ ನಾಯ್ಕ್ , ಆಲಂಕಾರು ಸಿ.ಎ ಬ್ಯಾಂಕ್ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ನಿರ್ದೆಶಕಿ ನಳಿನಿ ಕಾಯರಟ್ಟ, ಕೊಲ ಬಿಜೆಪಿ ಮಾಹಶಕ್ತಿಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಕಾರ್ಯದರ್ಶಿ ಸುರೇಶ್ ದೇಂತಾರು, ಮುಖಂಡರಾದ ಲಕ್ಷ್ಮೀನಾರಾಯಣ ರಾವ್ ಆತೂರು, ಬಾಲಕೃಷ್ಣ ಗೌಡ ಬೇಂಗದಪಡ್ಪು, ಶೀನಪ್ಪ ಗೌಡ ವಳಕಡಮ, ಪ್ರಶಾಂತ್ ಆರ್.ಕೆ, ಸದಾಶಿವ ಶೆಟ್ಟಿ ಮಾರಂಗ, ರಾಮ ನಾಯ್ಕ ಕೊರಂತಾಜೆ, ಕೇಶವ ಗಾಂಪೇಟೆ, ನೇತ್ರಾಕ್ಷ ನಾಯ್ಕ, ಶಿವಣ್ಣ ಗೌಡ ಕಕ್ವೆ, ಉದಯ ನಾಯ್ಕ, ಉಮೇಶ್ ಸಂಕೇಶ, ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ , ಉಪಾಧ್ಯಕ್ಷೆ ಕಮಲಾಕ್ಷಿ ಪಾಜಲಿಕೆ,ಸದಸ್ಯರಾದ ಚಂದ್ರಶೇಖರ ಗೌಡ, ಚಿದಾನಂದ ಪಾನ್ಯಾಲ್, ಶಶಿಕಲಾ, ಭಾರತಿ ಮತ್ತಿತರರು ಉಪಸ್ಥಿತರಿದ್ದರು.
ಆಲಂಕಾರು ಸಿ.ಎ ಬ್ಯಾಂಕ್ ನಿರ್ದೆಶಕ ರಾಮಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.