Home latest ಕಡಬ : ಅಪ್ರಾಪ್ತೆಯ ಮಾನಭಂಗ ಯತ್ನ,ಹಲ್ಲೆ ಪ್ರಕರಣ | 10 ದಿನ ಕಳೆದರೂ ಆರೋಪಿಯ ಬಂಧನವಾಗಿಲ್ಲ

ಕಡಬ : ಅಪ್ರಾಪ್ತೆಯ ಮಾನಭಂಗ ಯತ್ನ,ಹಲ್ಲೆ ಪ್ರಕರಣ | 10 ದಿನ ಕಳೆದರೂ ಆರೋಪಿಯ ಬಂಧನವಾಗಿಲ್ಲ

Hindu neighbor gifts plot of land

Hindu neighbour gifts land to Muslim journalist

ಕಡಬ : ಕಡಬದ ಕೋಡಿಂಬಾಳ ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಬಾಲಾತ್ಕಾರಕ್ಕೆ ಯತ್ನ ಹಾಗೂ ತೀವ್ರ ತರಹ ಹಲ್ಲೆ ನಡೆಸಿದ ಆರೋಪಿ ಜಾನ್ ಎಂಬಾತನನ್ನು ಬಂಧಿಸಲು ಹಾಗೂ ಆತನ ಮತ್ತು ಹಲ್ಲೆ ನಡೆಸಿದ ಆತನ ಪತ್ನಿ ಹಾಗೂ ಶಿಕ್ಷಕಿಯೂ ಆಗಿರುವ ಮಹಿಳೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಹಾಗೂ ಮಕ್ಕಳ ಇಲಾಖೆ ಅಸಡ್ಡೆ ಮಾಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಈ ಹಿಂದಿನಿಂದಲೂ ಸಂತ್ರಸ್ಥ ಬಾಲಕಿಗೆ ಹಾಗೂ ವೃದ್ಧ ಅಜ್ಜಿಗೆ ಆರೋಪಿ ಜಾನ್ ಎಂಬಾತ ಹಲ್ಲೆ, ಕಿರುಕುಳ ನೀಡುತ್ತಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಸ್. ಪಿ ಅವರಿಗೂ ಬಾಲಕಿ ದೂರನ್ನು ನೀಡಿದ್ದಳು. ಆ ಸಮಯದಲ್ಲಿ ಸರಿಯಾದ ರೀತಿಯಲ್ಲಿ ತನಿಖೆ ನಡೆಯದ ಕಾರಣ ಇದೇ ತಿಂಗಳ 5ನೇ ತಾರೀಕಿನಂದು ಆರೋಪಿ ಜಾನ್ ತೀವ್ರ ತರವಾಗಿ ಹಲ್ಲೆ ನಡೆಸಿ ಬಲಾತ್ಕಾರಕ್ಕೆ ಯತ್ನ ಮಾಡಿದ್ದ. ಶಿಕ್ಷಕಿಯಾಗಿರುವ ಆರೋಪಿಯ ಪತ್ನಿ ಈತನಿಗೆ ಸಹಕಾರ ನೀಡಿ ಬಾಲಕಿಗೆ ಹಲ್ಲೆ ನಡೆಸಿ ಬಾಲಕಿ ತೀವ್ರ ತರವಾಗಿ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು. ಈ ಸಮಯದಲ್ಲಿ ಆರೋಪಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೇರಿದಂತೆ ವಿವಿಧ ಅಪರಾಧ ಸೆಕ್ಷನ್ ಗಳ ಪ್ರಕಾರ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ ತನಿಖೆಗೆ ಹಿನ್ನಡೆಯಾಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರನ್ನು ನೀಡಿ ಅದರ ಪ್ರತಿಯನ್ನು ವಿವಿಧ ದಾಖಲೆಗಳ ಮೂಲಕ ಸಾಕ್ಷಿ ಸಹಿತ ಪುತ್ತೂರು ಪೊಲೀಸ್ DYSP ಅವರಿಗೂ ನೀಡಲಾಗಿತ್ತು. ಇದೀಗ ಪ್ರಕರಣ ನಡೆದು ಹತ್ತು ದಿನಗಳು ಕಳೆದರೂ ಆರೋಪಿಯ ಬಂಧನವಾಗಲಿ, ಕಾನೂನು ಕ್ರಮ ಕೈಗೊಳ್ಳುವುದಾಗಲಿ ನಡೆಯುತ್ತಿಲ್ಲ, ಇದರಿಂದಾಗಿ ಸಂತ್ರಸ್ತ ಬಾಲಕಿ ಹಾಗೂ ಅಜ್ಜಿಯು ಭಯದಿಂದಲೇ ಜೀವನ ಸಾಗಿಸುವಂತಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರಲಾರಂಭಿಸಿದೆ.