Home News Intresting News: ಈ ಬ್ಯಾಂಕುಗಳು ದೇಶದ ಸುರಕ್ಷಿತ ಬ್ಯಾಂಕ್ ಗಳು!

Intresting News: ಈ ಬ್ಯಾಂಕುಗಳು ದೇಶದ ಸುರಕ್ಷಿತ ಬ್ಯಾಂಕ್ ಗಳು!

Intresting news

Hindu neighbor gifts plot of land

Hindu neighbour gifts land to Muslim journalist

ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಅತ್ಯಂತ ಸುರಕ್ಷಿತ ಬ್ಯಾಂಕ್‌ಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಈ ವರದಿಯು ನಿಮಗೆ ಸರಿಯಾದ ಬ್ಯಾಂಕ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.

ನೀವು ಬ್ಯಾಂಕ್‌ನಲ್ಲಿ ಹಣವನ್ನು ಠೇವಣಿ ಮಾಡಬೇಕೇ?

ಯಾವ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು ಎಂಬ ಗೊಂದಲವಿದೆಯೇ?

ದೇಶದ ಅತ್ಯಂತ ಸುರಕ್ಷಿತ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ.

ಇದನ್ನೂ ಓದಿ: Traffic police: ಬೆಳ್ಳಂಬೆಳಗ್ಗೆಯೇ ವಾಹನ ಮಾಲಿಕರಿಗೆ ಬಿಗ್ ಶಾಕ್ ನೀಡಿದ ಪೋಲೀಸ್ ಇಲಾಖೆ !!

Safest Banks of India : ನೀವು ಬ್ಯಾಂಕ್ ಅಲ್ಲಿ ಒಂದು ಖಾತೆಯನ್ನು ತೆರೆಯಬೇಕೆ, ನಿಮಗೆ ಯಾವ ಬ್ಯಾಂಕ್ ನಲ್ಲಿ ಖಾತೆ ತೆರೆಯಬೇಕು ಎಂಬ ಗೊಂದಲವಿದೆಯೇ?? ಈ ಸುದ್ದಿಯು ನಿಮಗೆ ಉಪಯುಕ್ತವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಅತ್ಯಂತ ಸುರಕ್ಷಿತ ಬ್ಯಾಂಕ್‌ಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಈ ವರದಿಯು ನಿಮಗೆ ಸರಿಯಾದ ಬ್ಯಾಂಕ್ ಅನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ.

ಭಾರತೀಯ ಬ್ಯಾಂಕುಗಳು :

ಭಾರತದಲ್ಲಿ ಬ್ಯಾಂಕಿಗ್ ವ್ಯವಸ್ಥೆ ದೊಡ್ಡದಾಗಿದೆ. ಇದು ವಿವಿಧ ರೀತಿಯ ಬ್ಯಾಂಕುಗಳು ಮತ್ತು ಸರ್ಕಾರಿ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಗ್ರಾಮೀಣ ಬ್ಯಾಂಕುಗಳು ಮತ್ತು ಪಾವತಿ ಬ್ಯಾಂಕುಗಳ ತರಹದ ಹಣಕಾಸು ಸಂಸ್ಥೆಗಳನ್ನು ಒಳಗೊಂಡಿದೆ. ಈ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಕರ್ತವ್ಯವಾಗಿದೆ.

ನಿಯಮಗಳನ್ನು ಉಲ್ಲಂಘಿಸುವ ಬ್ಯಾಂಕುಗಳು :

ನಿಯಮಗಳನ್ನು ಉಲ್ಲಂಘಿಸುವ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬ್ಯಾಂಕುಗಳನ್ನು RBI ಮೇಲ್ವಿಚಾರಣೆ ಮಾಡಿದೆ. ಇವುಗಳ ಮೇಲೆ ಭಾರಿ ದಂಡವನ್ನು ವಿಧಿಸಲಾಗುತ್ತಿದೆ.

ರಿಸರ್ವ್ ಬ್ಯಾಂಕ್ ಮೆಚ್ಚುಗೆ ಪಡೆದ ಬ್ಯಾಂಕುಗಳು: 

RBI ದೇಶದ 3 ಬ್ಯಾಂಕುಗಳು ಗ್ರಾಹಕರ ಹಣಕ್ಕೆ ಸುರಕ್ಷತೆ ನೀಡುತ್ತವೆ ಎಂದು ಹೇಳಿದೆ. RBI ಪ್ರಕಾರ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಿದೆ. ಖಾಸಗಿ ವಲಯದ ಎರಡು ಬ್ಯಾಂಕ್‌ಗಳಾದ ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಮೂರು ಅತ್ಯಂತ ಸುರಕ್ಷಿತ ಬ್ಯಾಂಕ್‌ಗಳಾಗಿವೆ. ಇವು ಗ್ರಾಹಕರ ನಂಬಿಕೆಗೆ ಅರ್ಹವಾದ ಬ್ಯಾಂಕ್ ಗಳಾಗಿದ್ದು, ಇವುಗಳಲ್ಲಿ ಗ್ರಾಹಕರ ಹಣ ಸುರಕ್ಷಿತವಾಗಿರಲಿದೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ಆರ್‌ಬಿಐ ಸದಾ ಈ ಪಟ್ಟಿಯಲ್ಲಿ ಬರುವ ಬ್ಯಾಂಕುಗಳನ್ನು ಗಮನಿಸುತ್ತ ಇರುತ್ತದೆ. ಇದು ಯಾವುದೇ ದೊಡ್ಡ ಸಾಲ ಮತ್ತು ವಹಿವಾಟಿನ ಮೇಲೆ ಗಮನಹರಿಸುತ್ತದೆ . ಇದು ಬ್ಯಾಂಕಿನ ಒಟ್ಟಾರೆ ವ್ಯವಹಾರದ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರಲಿದೆಯೇ ಎಂಬುದನ್ನು ಪರಿಶೀಲಿಸಿ ನೋಡುತ್ತದೆ.