Home News Uttar pradesh: ಬೋರ್ವೆಲ್ ಜಗ್ಗಿದ್ರಿ ಬರುತ್ತೆ ಬಿಳಿ ಬಿಳಿ ನೀರು !! ಇದು ಹಾಲೋ, ನೀರೋ...

Uttar pradesh: ಬೋರ್ವೆಲ್ ಜಗ್ಗಿದ್ರಿ ಬರುತ್ತೆ ಬಿಳಿ ಬಿಳಿ ನೀರು !! ಇದು ಹಾಲೋ, ನೀರೋ ಇಲ್ಲಾ ನೀರಾನೋ ?!

Uttar pradesh

Hindu neighbor gifts plot of land

Hindu neighbour gifts land to Muslim journalist

Uttar pradesh : ಜಗತ್ತು ಹಲವಾರು ನಿಗೂಢಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಇಂದಿಗೂ ಪ್ರಕೃತಿಯಲ್ಲಿ ಅನೇಕ ವಿಸ್ಮಯಗಳನ್ನು ನಾವು ನೋಡುತ್ತೇವೆ. ಅಂತೆಯೇ ಇಲ್ಲೊಂದೆಡೆ ಬೋರ್ವೆಲ್ ಅನ್ನು ಜಗ್ಗಿದರೆ ಅದರಲ್ಲಿ ಬಿಳಿ ನೀರು ತುಂಬಿ ಹರಿಯುತ್ತಿದೆ.

ಹೌದು, ಉತ್ತರಪ್ರದೇಶ(Uttar pradesh) ದಲ್ಲೊಂದು ವಿಸ್ಮಯಕಾರಿ ಘಟನೆ ನಡೆದಿದ್ದು ಮೊರಾದಾಬಾದ್‌ನಲ್ಲಿರುವ ಬಸ್ ನಿಲ್ದಾಣದ ಬಳಿಯಿದ್ದ ಬೋರ್ವೆಲನ್ನು ಜಗ್ಗಿದ್ದರೆ ಬಿಳಿ ನೀರು ಹೊರಬರುತ್ತಿದೆ. ಇದನ್ನು ಕಂಡ ಸ್ಥಳೀಯರು ಮುಗಿಬಿದ್ದು ಅದನ್ನು ಕುಡಿದಿದ್ದಲ್ಲದೇ, ಹಾಲು ಎಂದು ಭಾವಿಸಿ, ಬಾಟಲಿ ಹಿಡಿದು ನಾ ಮುಂದು ತಾ ಮುಂದು ಎಂದು ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಇದನ್ನು ಓದಿ: Uttara kashi: ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಯಶಸ್ವಿ ರಕ್ಷಣೆ – ಸಾವನ್ನು ಗೆದ್ದೇ ಬಿಟ್ಟ ಕಾರ್ಮಿಕ ‘ಸೈನಿಕರು’ !!

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಜನಸಾಮಾನ್ಯರೆಲ್ಲರೂ ಬಾಟಲಿಗಳನ್ನು ಹಿಡಿದು ಬೋರ್ವೆಲ್ನಿಂದ ಬರುತ್ತಿರುವ ಬಿಳಿ ನೀರನ್ನು ಹಿಡಿಯಲು ನುಗ್ಗಾಡುತ್ತಿದ್ದಾರೆ. ಈ ವಿಚಾರ ಪ್ರಚಾರವಾದ ಬಳಿಕ ಅಲ್ಲಿನ ಸ್ಥಳಿಯರು ಅಧಿಕಾರಿಗಳಿಗೆ ದೂರು ನೀಡಿದ್ದು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮುರಿದ ಪ್ಲಾಟ್‌ಫಾರ್ಮ್‌ನಿಂದ ಪಂಪ್‌ನ ಕೆಳಗಿನ ಹಂತಕ್ಕೆ ಸೋರಿಕೆಯಾದ ಮಾಲಿನ್ಯಕಾರಕ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ಇದು ಕಲುಷಿತಗೊಂಡು ನೀ ನೀರು ಬಿಳಿ ಬಣ್ಣಕ್ಕೆ ತಿರುಗಿದೆ ಹಾಗಾಗಿ ದಯವಿಟ್ಟು ಯಾರು ಕೂಡ ಕುಡಿಯಬೇಡಿ ಎಂದು ಮನವಿ ಮಾಡಿದ್ದಾರೆ.

https://x.com/payal_mohindra/status/1729157859399835678?t=9ZjX-GlsRkoUVuLG4RGLzQ&s=08