Home Interesting ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಯೇ ಬೇರೆ, ಕೆಲಸಕ್ಕೆ ಬಂದವ ಇನ್ನೊಬ್ಬ!|ಸಂದರ್ಶಕನ ತಲೆಕೆಡಿಸಿಕೊಳ್ಳುವಂತೆ ಮಾಡಿದೆ ಈತನ ಜಾಯ್ನಿಂಗ್

ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಯೇ ಬೇರೆ, ಕೆಲಸಕ್ಕೆ ಬಂದವ ಇನ್ನೊಬ್ಬ!|ಸಂದರ್ಶಕನ ತಲೆಕೆಡಿಸಿಕೊಳ್ಳುವಂತೆ ಮಾಡಿದೆ ಈತನ ಜಾಯ್ನಿಂಗ್

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಯಾವುದೇ ಕೆಲಸಕ್ಕೆ ಸೇರಬೇಕಾದರೆ ಸಂದರ್ಶನಕ್ಕೆ ಕರೆಸಿ ಬಳಿಕ ಆ ವ್ಯಕ್ತಿ ಈ ಕೆಲಸಕ್ಕೆ ಸದೃಢನೇ? ಇಲ್ಲವೇ? ಎಂದು ಪರಿಶೀಲಿಸಿ ಉದ್ಯೋಗಕ್ಕೆ ಕರೆಯುವುದು. ಆದ್ರೆ ಇಲ್ಲೊಂದು ಕಡೆ ಆಯ್ಕೆ ಆದವನೇ ಬೇರೆ ಜಾಯಿನ್ ಆದವನೇ ಬೇರೆ!. ಈ ವಿಚಿತ್ರ ಘಟನೆಯೊಂದರಲ್ಲಿ ಸಂದರ್ಶನಕ್ಕೆ ಹಾಜರಾದ ವ್ಯಕ್ತಿಯನ್ನು ಆಯ್ಕೆ ಮಾಡಿದ ಸಂದರ್ಶನಕಾರ, ಬಳಿಕ ಕಚೇರಿಗೆ ಹಾಜರಾದವನನ್ನು ನೋಡಿ ತಬ್ಬಿಬ್ಬಾಗಿರುವ ವಿಲಕ್ಷಣ ಘಟನೆ ನಡೆದಿದೆ.

ಮಹಿಳೆಯೊಬ್ಬರು ತಮ್ಮ ಪತಿ ಕೆಲಸದಲ್ಲಿ ಎದುರಿಸಿದ ವಿಲಕ್ಷಣ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ನೇಮಕಾತಿ ಸಮಿತಿಯಲ್ಲಿದ್ದ ಮಹಿಳೆಯ ಪತಿ ಹಲವಾರು ಮಂದಿಯ ಸಂದರ್ಶನ ನಡೆಸಿದ್ದಾರೆ. ಸಂದರ್ಶನದಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದು, ಆತನಿಗೆ ಕೆಲಸಕ್ಕೆ ಹಾಜರಾಗುವಂತೆ ಆಫರ್ ನೀಡಲಾಗಿತ್ತು. ಆದರೆ, ಕೆಲಸಕ್ಕೆ ಬಂದಾತ ಮಾತ್ರ ಬೇರೆ ವ್ಯಕ್ತಿಯಾಗಿದ್ದ ಅನ್ನೋದು ಈತನ ಗೊಂದಲಕ್ಕೆ ಕಾರಣವಾಗಿದೆ.

ಮಧ್ಯಮ ಗಾತ್ರದ ಖಾಸಗಿ ಕಂಪನಿಯಲ್ಲಿ ನಾಯಕತ್ವದ ತಂಡದಲ್ಲಿ ಮಹಿಳೆಯ ಪತಿ ಕೆಲಸ ಮಾಡುತ್ತಿದ್ದಾರೆ. ಜಾನ್ ಎಂಬ ವ್ಯಕ್ತಿಯನ್ನು ಸಂದರ್ಶಿಸಿದ ಅವರಿಗೆ ಕೆಲಸಕ್ಕೆ ಬಂದವ ಮಾತ್ರ ಬೇರೆ ಜಾನ್ ಆಗಿದ್ದ. ಆತನ ಮುಖಚರ್ಯೆ, ಮಾತು ಕೇಳಿ ಬಾಸ್ ಗೊಂದಲಕ್ಕೊಳಗಾಗಿದ್ದಾರೆ.ಇನ್ನು ನೇಮಕಾತಿ ಸಮಿತಿಯು ಸರಿಯಾದ ಅಭ್ಯರ್ಥಿಗೆ ಕೆಲಸ ನೀಡಲಾಗಿದೆ ಎಂಬುದನ್ನು ದೃಢಪಡಿಸಿದೆ. ಬಳಿಕ ಸಾಕಷ್ಟು ಗೊಂದಲವುಂಟಾಗಿದ್ದು, ಸಂದರ್ಶಕ ಏನು ಮಾಡುವುದೆಂದು ತಿಳಿಯದೆ ತಲೆಕೆರೆದುಕೊಂಡಿದ್ದಾರೆ.

ಆದರೆ ಇಷ್ಟೆಲ್ಲಾ ತಲೆ ಕೆಡಿಸಿದ ಆ ಉದ್ಯೋಗಿ ತಾನು ಕೆಲಸವನ್ನು ಬಿಟ್ಟಿರುವುದಾಗಿ ಹೇಳಿ ನಾಪತ್ತೆಯಾಗಿಬಿಟ್ಟಿದ್ದಾರಂತೆ..! ಒಟ್ಟಾರೆ ಆತ ಕೆಲಸ ಬೇಕೆಂದು ಇನ್ನೊಬ್ಬನ ಪರವಾಗಿ ಬಂದನೋ ಅಥವಾ ಸಂದರ್ಶಕರದ್ದೇ ಎಡವಟ್ಟೋ… ಎಲ್ಲಾ ಹೇಗೆ ಸಾಧ್ಯವಾಯಿತು ಅನ್ನೋದು ಇನ್ನೂ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ..