Home News ಕೇವಲ ವ್ಯೀವ್ಸ್ ಗಾಗಿ ಈ ರೀತಿ ಬಡವರ ಗೆಟಪ್ ಹಾಕೋದಾ? ಬೆಡಗಿಯ ಚೆಲ್ಲಾಟಕ್ಕೆ ನೆಟ್ಟಿಗರು ಫುಲ್...

ಕೇವಲ ವ್ಯೀವ್ಸ್ ಗಾಗಿ ಈ ರೀತಿ ಬಡವರ ಗೆಟಪ್ ಹಾಕೋದಾ? ಬೆಡಗಿಯ ಚೆಲ್ಲಾಟಕ್ಕೆ ನೆಟ್ಟಿಗರು ಫುಲ್ ಗರಂ!!!

Hindu neighbor gifts plot of land

Hindu neighbour gifts land to Muslim journalist

ಇನ್‌ಸ್ಟಾಗ್ರಾಂ ವೀಕ್ಷಕರೇ ಇಲ್ಲಿ ಚೂರು ಗಮನಿಸಿ. ಲೈಕ್ ಬೇಕು ಅಂದ್ರೆ ಜನ ಏನು ಬೇಕಾದರು ಮಾಡ್ತಾರೆ, ಯಾವ ವೇಷ ಬೇಕಾದ್ರು ಹಾಕ್ತಾರೆ ಅನ್ನೋದು ಇಲ್ಲಿ ನೋಡಬಹುದು.
ಹೌದು ಇನ್‌ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸುವುದಾದರೆ ಒಂದು ಮುದ್ದಾದ ಯುವತಿ ಕೆಂಪು ಸೀರೆ ಉಟ್ಟುಕೊಂಡು, ಕೆಂಪು ಗುಲಾಬಿಗಳನ್ನು ಮಾರಾಟ ಮಾಡುವ ವೈರಲ್ ಫೋಟೋ, ವಿಡಿಯೋಗಳನ್ನು ಗಮನಿಸಿರಬಹುದು.

ಆದರೆ ಇದೀಗ ಅದೇ ಯುವತಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ರೀತಿ ಹೂವು ಮಾರಿದ್ದು ಹಣ ಸಂಪಾದನೆಗಲ್ಲ, ಬದಲಾಗಿ ಲೈಕ್-ಕಾಮೆಂಟ್ ಸಂಪಾದನೆಗಾಗಿ, ಸೋಷಿಯಲ್ ಮೀಡಿಯಾ ಇನ್‌ಫೂಯೆನ್ಸರ್ ಒಬ್ಬರು ಮೈ ತುಂಬ ಕಪ್ಪು ಬಣ್ಣದಲ್ಲಿ ಮೇಕಪ್ ಮಾಡಿಸಿಕೊಂಡು, ಕಡು ಬಡವಿಯಂತೆ ಬಟ್ಟೆ ತೊಟ್ಟು, ಹೂ ಮಾರುತ್ತಾರೆ. ಅದನ್ನು ವಿಡಿಯೋ ಮಾಡಲೆಂದೇ ಒಂದು ತಂಡ ಯಾರಿಗೂ ತಿಳಿಯದಂತೆ ಸುತ್ತುತ್ತದೆ. ಈ ರೀತಿ ಮೇಕಪ್ ಮಾಡಿಸಿಕೊಂಡ ವಿಡಿಯೋವನ್ನೂ ಆ ಇನ್‌ಫೂಯೆನ್ಸರ್ ಹಂಚಿಕೊಂಡಿದ್ದಾರೆ.

ಜನರು ಈ ವಿಡಿಯೋ ನೋಡಿ ಕಪ್ಪು ಬಣ್ಣ ಹಚ್ಚಿಕೊಂಡ ಕೂಡಲೇ ಬಡವರಾಗಳು ಸಾಧ್ಯ ಇಲ್ಲ. ಮತ್ತು ನಿಮ್ಮ ಆಲೋಚನೆಗಳು ಕೆಟ್ಟದಾಗಿವೆ ಎಂದು ಜನರು ಆಕ್ರೋಶದಿಂದ ಕಾಮೆಂಟ್ ಮಾಡುತ್ತಿದ್ದಾರೆ.