Home Education TET ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೋನ್ ಅಶ್ಲೀಲ ಫೋಟೋ |

TET ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೋನ್ ಅಶ್ಲೀಲ ಫೋಟೋ |

Hindu neighbor gifts plot of land

Hindu neighbour gifts land to Muslim journalist

ಶಿವಮೊಗ್ಗದ‌ ನ್ಯಾಷನಲ್ ರುದ್ರಪ್ಪ ಪಿ ಯು ಕಾಲೇಜಿನಲ್ಲಿ ಪರೀಕ್ಷಾರ್ಥಿ ಪರೀಕ್ಷೆ ಬರೆಯಲು ಬಂದಾಗ ವಿದ್ಯಾರ್ಥಿನಿಗೆ ಶಾಕ್ ಆಗಿದ್ದು, ಹಾಲ್ ಟಿಕೆಟ್​ನಲ್ಲಿ ತನ್ನ ಫೋಟೊ ಇರುವ ಬದಲಿಗೆ ನಟಿಯ ಫೋಟೊ ನೋಡಿ ದಂಗಾದ ಘಟನೆ ನಡೆದಿದೆ.

ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ತಪ್ಪಾಗುವುದು ಸಹಜ. ಆದರೆ, ಅದಕ್ಕೆ ಸಂಬಂಧಪಟ್ಟವರ ಬೇಜವಾಬ್ದಾರಿ ಧೋರಣೆಯ ನಡೆಯು ಕೂಡ ಕಾರಣವಾಗುತ್ತದೆ ಎಂದರೆ ತಪ್ಪಾಗದು.

ಶಿವಮೊಗ್ಗದಲ್ಲಿ ನವೆಂಬರ್ 6 ರಂದು ನಡೆದ ಟಿಇಟಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯ ಹಾಲ್ ಟಿಕೆಟ್​ನಲ್ಲಿ ಸನ್ನಿ ಲಿಯೋನ್ ಪೋಟೊ ಅಪ್ ಲೋಡ್ ಮಾಡಿದ ಕುರಿತು ಇಂದು ಶಿಕ್ಷಣ ಇಲಾಖೆಯು ಪೊಲೀಸರಿಗೆ ದೂರು ನೀಡಿದ ಘಟನೆ ಜರುಗಿದೆ.‌

ಶಿವಮೊಗ್ಗದ‌ ನ್ಯಾಷನಲ್ ರುದ್ರಪ್ಪ ಪಿ ಯು ಕಾಲೇಜಿನಲ್ಲಿ ಪರೀಕ್ಷಾರ್ಥಿ ಪರೀಕ್ಷೆ ಬರೆಯಲು ಬಂದ ಚಿಕ್ಕಮಗಳೂರು ಜಿಲ್ಲೆ ವಿದ್ಯಾರ್ಥಿನಿಯ ಹಾಲ್ ಟಿಕೆಟ್​ನಲ್ಲಿ ವಿದ್ಯಾರ್ಥಿನಿಯ ಫೋಟೊ ಬದಲಿಗೆ, ನಟಿ ಸನ್ನಿ ಲಿಯೋನ್ ಪೋಟೊ ಅಪ್ಲೋಡ್ ಆಗಿದೆ.ಈ ಕುರಿತು ಪರೀಕ್ಷಾ ಮೇಲ್ವಿಚಾರಕರು ಸಂಬಂಧ ಪಟ್ಟವರ ಗಮನಕ್ಕೆ ತಂದಿದ್ದಾರೆ. ವಿದ್ಯಾರ್ಥಿನಿಯ ಹಾಲ್ ಟಿಕೆಟ್​ನಲ್ಲಿ ಪೋಟೊ ಬದಲಾಗಿದ್ದರಿಂದ ವಿದ್ಯಾರ್ಥಿನಿಯು ಪೋಟೊ ಬದಲಾವಣೆ ಮಾಡಿಕೊಂಡು ಬಂದಿದ್ದಾರೆ. ಆದರೆ, ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ಹಾಲ್ ಟಿಕೆಟ್ ನಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ.

ಈ ಪ್ರಕರಣದ ಪೋಟೊ ಬದಲಾವಣೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆಯು ಎಸ್ಪಿ ಮಿಥುನ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ. ಶಿವಮೊಗ್ಗ ಜಿಲ್ಲಾ ಡಿಡಿಪಿಐ ಪರಮೇಶ್ವರಪ್ಪ, ಬಿಇಒ ಲೋಕೇಶ್, ಕಾಲೇಜಿನವರು ಕೂಡ ದೂರು ನೀಡಿದ್ದು, ಎಲ್ಲಿ ಲೋಪ ಉಂಟಾಗಿದೆ ಎಂದು ತನಿಖೆ ಮಾಡಲು ಮುಂದಾಗಿದ್ದಾರೆ.

ಎಸ್​ಪಿ ಮಿಥುನ್ ಕುಮಾರ್ ಈ ಕುರಿತು ದೂರನ್ನು ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿ ತನಿಖೆ ನಡೆಸುತ್ತಿದ್ದು, ಅಭ್ಯರ್ಥಿ ಬಳಿ‌ ಮಾಹಿತಿ ಪಡೆದುಕೊಳ್ಳಲಾಗಿದೆ.‌ ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ .

ಅಭ್ಯರ್ಥಿಯ ಪರೀಕ್ಷಾ ಅರ್ಜಿಯನ್ನು ಬೇರೆಯವರು ಅಪ್ಲೋಡ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಹಾಗಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಖಾಕಿ ಪಡೆ ಮುಂದಾಗಿದೆ.