Home National BIGG NEWS : ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಕರೆನ್ಸಿಇ-ರುಪಿ’ ಜಾರಿ : ‘RBI’ ಘೋಷಣೆ

BIGG NEWS : ದೇಶದಲ್ಲಿ ಮೊದಲ ಬಾರಿಗೆ ಡಿಜಿಟಲ್ ಕರೆನ್ಸಿಇ-ರುಪಿ’ ಜಾರಿ : ‘RBI’ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಇದುವರೆಗೂ ಭಾರತದಲ್ಲಿ ಡಿಜಿಟಲ್ ಕರೆನ್ಸಿ ಜಾರಿಗೆ ತಂದಿರಲಿಲ್ಲ. ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕಿನಿಂದ ಬದಲಾವಣೆ ಒಂದನ್ನು ತಂದಿದೆ. ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಮೊದಲ ಬಾರಿಗೆ ಇ-ರುಪಿ (Digital Currency) ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ.
ಡಿಜಿಟಲ್ ರೂಪಾಯಿಯು ಭಾರತದ ಡಿಜಿಟಲ್ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಆರ್ಥಿಕತೆಯಲ್ಲಿ ಪ್ರಬಲತೆಯನ್ನು ಹೊಂದಿಸಲು ಇ -ರುಪಿ ಕೂಡ ಕಾರಣವಾಗಲಿದೆ.

ಆರ್ ಬಿಐ ಪ್ರಕಾರ ಹಣಕಾಸು ಮತ್ತು ಪಾವತಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಮತ್ತು ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ ಎಂದು ಇ-ರುಪಿ ಬಗೆಗಿನ ಮಹತ್ವ ಮಾಹಿತಿ ನೀಡಿದೆ.

ಹಣಕಾಸು ಕೊನೆಗೂಳ್ಳುವ ಈ ವರ್ಷದ ಕೊನೆಯಲ್ಲಿ ಅಂದರೆ ಮಾರ್ಚ್ 31, 2023 ಕ್ಕೆ ಭಾರತವು ತನ್ನದೇ ಆದ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಸಿಬಿಡಿಸಿ ಎಂಬುದು ನಿಯಂತ್ರಕರಿಂದ ಬೆಂಬಲಿತವಾದ ಮತ್ತು ಡಿಜಿಟಲ್ ಸ್ವರೂಪದಲ್ಲಿ ಸಂಗ್ರಹಿಸಲಾದ ಕರೆನ್ಸಿಯಾಗಿದೆ. ಇದನ್ನು ಕಾಗದದ ಕರೆನ್ಸಿಯಾಗಿ ಪರಿವರ್ತಿಸಬಹುದು ಮತ್ತು ಆರ್ಬಿಐನ ಬ್ಯಾಲೆನ್ಸ್ ಶೀಟ್ನಲ್ಲಿ ಪ್ರತಿಬಿಂಬಿಸುತ್ತದೆ. ಆ ಮೂಲಕ ಕರೆನ್ಸಿಗೆ ಕಾನೂನುಬದ್ಧ ಟೆಂಡರ್ ಸ್ಥಾನಮಾನವನ್ನು ನೀಡುತ್ತದೆ. ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ತಿಳಿಸಿದೆ.

ಅತೀ ಶೀಘ್ರದಲ್ಲಿ ಭಾರತವನ್ನು ಆರ್ಥಿಕತೆಯಲ್ಲಿ ಪ್ರಗತಿಗೊಳಿಸಲು ಇ-ರುಪಿ ಜಾರಿಗೆಗೊಂಡು ಯಶಸ್ವಿ ಆದಲ್ಲಿ ಜನತೆಗೆ ಇದೊಂದು ಸಂತೋಷದ ವಿಚಾರ ಆಗಿದೆ.