Home latest ರಾಜ್ಯದ ಇನ್ನೊಬ್ಬ ಸ್ವಾಮೀಜಿ ವಿರುದ್ಧ ಅಕ್ರಮ ಸಂಬಂಧದ ಆರೋಪ | ನನ್ನ ಪತ್ನಿಯನ್ನು ಬಳಸಿಕೊಂಡಿದ್ದಾರೆ ಎಂದು...

ರಾಜ್ಯದ ಇನ್ನೊಬ್ಬ ಸ್ವಾಮೀಜಿ ವಿರುದ್ಧ ಅಕ್ರಮ ಸಂಬಂಧದ ಆರೋಪ | ನನ್ನ ಪತ್ನಿಯನ್ನು ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ ಪತಿ

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗಷ್ಟೇ ಧಾರವಾಡದ ಮುರುಗ ಶ್ರೀಗಳ ವಿರುದ್ಧ ಬಾಲಕಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬೆನ್ನಲ್ಲೇ, ಈಗ ಇನ್ನೊಂದು ಸ್ವಾಮಿಗಳ ಮೇಲೆ ಅಕ್ರಮ ಸಂಬಂಧದ ಆರೋಪ ಬಂದಿದೆ. ದಾವಣಗೆರೆ ಜಿಲ್ಲೆಯ ಅವರಗೊಳ್ಳ ರೇಣುಕಾಶ್ರಮದ ಓಂಕಾರ ಶಿವಾಚಾರ್ಯ ಸ್ವಾಮಿಗಳ ವಿರುದ್ಧ ಅಕ್ರಮ ಸಂಬಂಧ ಆರೋಪ ಕೇಳಿಬಂದಿದೆ. ಈ ಮೂಲಕ ರಾಜ್ಯದ ಮತ್ತೊಬ್ಬ ಮಠಾಧೀಶರು ವಿವಾದದ ಸುಳಿಗೆ ಸಿಲುಕಿದ್ದಾರೆ ಎಂದೇ ಹೇಳಬಹುದು.

ಚಂದ್ರಶೇಖರ್‌ ಎಂಬುವವರೇ ಈ ಅಕ್ರಮ ಸಂಬಂಧದ ಆರೋಪ ಮಾಡಿದ್ದಾರೆ. ಇವರ ಆರೋಪದ ಪ್ರಕಾರ, ತಮ್ಮ ಪತ್ನಿಯನ್ನು ಓಂಕಾರ ಶಿವಾಚಾರ್ಯರ ಶ್ರೀಗಳು ಬಳಸಿಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಮೂರು ವರ್ಷಗಳ ಕಾಲ ಪ್ರೀತಿ ಮಾಡಿ, ನಂತರ ಮದುವೆ ಮಾಡಿಕೊಂಡಿದ್ದೇವೆ. 4 ವರ್ಷಗಳ ಕಾಲ ತುಂಬಾ ಚೆನ್ನಾಗಿಯೇ ಇದ್ದೆವು. ಆದರೆ ನಮಗೆ ಮಕ್ಕಳು ಆಗಿಲ್ಲ. ಹಾಗಾಗಿ ನನ್ನ ಪತ್ನಿ ಆಗಾಗ ದಾವಣಗೆರೆಯಲ್ಲಿರುವ ಇವರ ಮಠಕ್ಕೆ ಹೋಗಲು ಶುರುಮಾಡಿದ್ದಳು.

ಮಕ್ಕಳಾಗಿಲ್ಲ ಎಂಬ ವಿಚಾರಕ್ಕೆ ಆಗಾಗ ಜಗಳ ಆಗುತ್ತಿದ್ದ ಹಿನ್ನೆಲೆಯಲ್ಲಿ ನಾನು ಆಕೆ ಮಠಕ್ಕೆ ಹೋಗುವುದನ್ನು ವಿರೋಧ ಮಾಡಲಿಲ್ಲ. ನಂತರದ ದಿನಗಳಲ್ಲಿ ಆಕೆ ಮಠಕ್ಕೆ 15 ದಿನಕ್ಕೆ ಒಮ್ಮೆ ಹೋಗಲು ಶುರು ಮಾಡಿದ್ದಳು. ಆದರೂ ನಾನು ಸುಮ್ಮನಿದ್ದೆ. ಒಂದು ದಿನ ನನ್ನ ಹೆಂಡತಿ ಹಾಗೂ ಅವರ ಅಮ್ಮ ಬಂದು, ಶಿವಮೊಗ್ಗದಲ್ಲಿ ಇರೋದು ಬೇಡ. ದಾವಣಗೆರೆಯಲ್ಲೇ ಸೆಟಲ್ ಆಗಿಬಿಡಿ. ನಾವು ನಿಮಗೆ ಮನೆ ಮಾಡಿ ಕೊಡ್ತೇವೆ ಎಂದು ಹೇಳಿ,ನಂಬಿಸಿದ್ದಾರೆ.

ಅವರು ಹೇಳಿದಕ್ಕೆಲ್ಲ ನಾನು ಒಪ್ಪಿದೆ. ನಂತರ ಈ ಸ್ವಾಮೀಜಿಯ ಒತ್ತಾಯದ ಮೇರೆಗೆ ನನ್ನ ಹೆಂಡತಿ ಮಠದಲ್ಲಿ ಸೇವೆ ಮಾಡಲು ಒಪ್ಪಿಕೊಳ್ತಾಳೆ. ನಂತರ ಅವರು ಇನ್ನೊಂದು ಮಠವಾದ ಕಲ್ಲುಬಂಡೆ ಮಠದಲ್ಲಿ ನಮ್ಮನ್ನ ಪೂಜೆ ಮಾಡಲು ನೇಮಿಸುತ್ತಾರೆ. ನಾನು ಕೂಡ ಪೂಜೆ ಮಾಡಲು ಮಂತ್ರವನ್ನ ಕಲಿತುಕೊಂಡೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನನ್ನಾಕೆ ಸ್ವಾಮೀಜಿ ಜೊತೆ ಚೆನ್ನಾಗಿಯೇ ಇದ್ದಳು.

ಒಂದು ದಿನ ಮಠದಲ್ಲಿ ರೇಣುಕಾ ಜಯಂತಿ ನಡೆಯುತ್ತಿದ್ದ ಸಂದರ್ಭದಲ್ಲಿ, ನಾನು ಸ್ವಾಮೀಜಿಯ ಅಸಲಿ ಬಣ್ಣವನ್ನು ನಾನು ಕಣ್ಣಾರೆ ನೋಡಿದೆ. ಆ ದಿನ ರಾತ್ರಿ ಸ್ವಾಮೀಜಿ ರೂಮಿಗೆ ಹೋಗಿದ್ದ ನನ್ನ ಹೆಂಡತಿ ಎಷ್ಟೋ ಹೊತ್ತಿನ ಬಳಿಕ ಬಂದಿದ್ದಾಳೆ. ಅದನ್ನು ಪ್ರಶ್ನಿಸಿದಾಗ ಆಕೆ ಬೆವರಲು ಆರಂಭಿಸಿದ್ದಳು. ಇದರಿಂದ ನನಗೆ ಡೌಟ್ ಬಂದಿತ್ತು. ವಿಚಾರಿಸಿದಾಗ ಸ್ವಾಮೀಜಿಗೆ ಕಾಲು ನೋವಿದ್ದರಿಂದ ಒತ್ತುತ್ತಿದ್ದೆ ಎಂದಿದ್ದಾಳೆ. ಕೊನೆಗೆ ಒಂದಿನ ಈ ವಿಚಾರ ಎಲ್ಲರಿಗೂ ಗೊತ್ತಾದಾಗ ನನ್ನ ಹೆಂಡತಿಯನ್ನು ಮಠದಿಂದ ಬಿಡಿಸಲು ಪ್ರಯತ್ನಿಸಿದೆ. ಆದರೆ ಈ ವಿಚಾರ ಎಲ್ಲರಿಗೂ ಗೊತ್ತಾದರೆ ನಾನು ಸಾಯುತ್ತೇನೆ ಎಂದು ಹೆದರಿಸಿದ್ದಕ್ಕೆ ನಾನು ಇಷ್ಟು ಸಮಯ ಸುಮ್ಮನಿದ್ದೆ. ಆದರೆ ಕಳೆದ ಒಂದೂವರೆ ವರ್ಷಗಳಿಂದ ನನ್ನ ಪತ್ನಿಯನ್ನು ಸ್ವಾಮೀಜಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಸ್ವಾಮೀಜಿ ಜೊತೆಗಿನ ಚಂದ್ರಶೇಖರ್ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದೂವರೆ ವರ್ಷ ನನ್ನ ಹೆಂಡತಿಯನ್ನು ಯೂಸ್​ ಮಾಡ್ಕೊಂಡ್ರಿ. ಅಜ್ಜರೇ, ಈಗ ನನಗೆ ಅವಳನ್ನು ಮರೆಯೋಕೆ ಆಗ್ತಿಲ್ಲ. ನಾನು ಎಲ್ಲಾ ವಿಡಿಯೋನೂ ಮಾಡ್ಕೊಂಡಿದ್ದೀನಿ. ಕೆಟ್ಟದ್ದು ಆಗ್ಬಾರ್ದು ಅಂದ್ರೆ ಹೆಂಡತಿಯನ್ನು ನನ್ನ ಹತ್ತಿರ ಕಳಿಸಿ ಎಂದು ಮನವಿ ಮಾಡಿಕೊಂಡಿರುವ ಆಡಿಯೋ ಇದೀಗ ವೈರಲ್ ಆಗಿದೆ.