Home News Praveen Shetty: ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ ಆದ್ರೆ ಟಿಕೆಟ್ ಖರೀದಿಸಿ ಫಿಲ್ಮ್ ನೋಡುತ್ತೇವೆ –...

Praveen Shetty: ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ ಆದ್ರೆ ಟಿಕೆಟ್ ಖರೀದಿಸಿ ಫಿಲ್ಮ್ ನೋಡುತ್ತೇವೆ – ಕರವೇ ಪ್ರವೀಣ್ ಶೆಟ್ಟಿ ಅಚ್ಚರಿಗೆ ಹೇಳಿಕೆ

Hindu neighbor gifts plot of land

Hindu neighbour gifts land to Muslim journalist

Praveen Shetty : ಕನ್ನಡದ ಹುಟ್ಟಿನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿದ್ದವು. ಆದರೆ ಈಗ ಸುಪ್ರೀಂ ಕೋರ್ಟ್ ಕರ್ನಾಟಕದಲ್ಲಿ ಈ ಚಿತ್ರ ರಿಲೀಸ್ ಗೆ ಗ್ರೀನ್ ಸಿಗ್ನಲ್ ನೀಡಿದೆ. ಆದರೂ ಕೂಡ ಕರ್ನಾಟಕದಲ್ಲಿ ಈ ಚಿತ್ರದ ಪ್ರದರ್ಶನ ಆಗುತ್ತಿಲ್ಲ. ಯಾರು ಕೂಡ ಚಿತ್ರವನ್ನು ಪ್ರದರ್ಶಿಸುವ ಧೈರ್ಯ ಮಾಡುತ್ತಿಲ್ಲ. ಈ ಬೆನ್ನಲ್ಲೇ ಕರವೇ ಪ್ರವೀಣ್ ಶೆಟ್ಟಿ ಅಚ್ಚರಿ ಹೇಳಿಕೆ ನೀಡಿದ್ದು ಕರ್ನಾಟಕದಲ್ಲಿ ಥಗ್ ಲೈಫ್ ರಿಲೀಸ್ ಆದರೆ ನಾವು ಟಿಕೆಟ್ ಖರೀದಿಸಿ ಫಿಲಂ ನೋಡುತ್ತೇವೆ ಎಂದು ಹೇಳಿದ್ದಾರೆ.

ಹೌದು. ಚಿತ್ರ ‘ಥಗ್ ಲೈಫ್’ ಪ್ರದರ್ಶನವನ್ನು ವಿರೋಧಿಸುವ ಗುಂಪುಗಳಿಂದ ಬರುವ ಬೆದರಿಕೆಗಳಿಂದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಗೆ ಒಪ್ಪಿಗೆ ನೀಡಿದೆ. ಚಿತ್ರ ರಿಲೀಸ್‌ ಆದೇಶದ ಬಗ್ಗೆ ಕನ್ನಡಪರ ಸಂಘಟನೆ ಮುಖಂಡ ಪ್ರವೀಣ್ ಶೆಟ್ಟಿ (Praveen Shetty) ವಿಡಿಯೋ ಮಾಡಿದ್ದು, ಚಿತ್ರ ರಿಲೀಸ್‌ ಆದರೆ ಏನಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ.

“ಇವತ್ತು ಕನ್ನಡ ಚಿತ್ರರಂಗ ಹಾಗೂ ಕನ್ನಡ ಹೋರಾಟಗಾರರ ಅಳಿವು – ಉಳಿವಿನ ಪ್ರಶ್ನೆ ಉದ್ಭವವಾಗಿದೆ ಎಂದರೆ ತಪ್ಪಾಗದು. ʼಥಗ್‌ ಲೈಫ್‌ʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಅನುಮತಿ ನೀಡಿದೆ. ಆದರೆ ಆ ಸಿನಿಮಾವನ್ನು ನೋಡಬೇಕೋ – ಬೇಡ್ವೋ ಎನ್ನುವ ನಿರ್ಧಾರವನ್ನು ನಾವಿನ್ನೂ ಮಾಡಿಲ್ಲ. ಅದಕ್ಕೂ ಮುಂಚೆಯೇ ರಾತ್ರೋರಾತ್ರಿ ಪೊಲೀಸರು ನಮ್ಮ ಮನೆಯ ಬಳಿ ಬಂದಿದ್ದಾರೆ. ಇದೆಲ್ಲ ಬೆಳವಣಿಗೆ ನೋಡಿದ್ರೆ, ಮುಂದೆ ಹೋರಾಟ ಮಾಡೋದು ತುಂಬಾ ಕಷ್ಟವಿದೆ ಅನ್ನಿಸುತ್ತದೆ. ಪೊಲೀಸರು ನಮ್ಮ ಮನೆ ಬಳಿ ಬಂದು ಏನು ಮಾಡ್ತೀರಿ, ಎಲ್ಲಿಗೆ ಹೋಗ್ತೀರಿ ಅಂತ ಕೇಳುವುದು. ಕಾನೂನಿನಲ್ಲಿ ಸ್ವಾತಂತ್ರ್ಯ ಇಲ್ವಾ ಅಂಥ ಪ್ರಶ್ನೆಯನ್ನು ನಾವು ಕೇಳುವಂತೆ ಆಗಿದೆ” ಎಂದಿದ್ದಾರೆ.

ʼಥಗ್‌ ಲೈಫ್‌ʼ ಸಿನಿಮಾವನ್ನು ಎಲ್ಲರೂ ಬಹಿಷ್ಕಾರ ಮಾಡಿದ್ದಾರೆ. ಒಂದು ಪಕ್ಷ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ಆದರೆ ಟಿಕೆಟ್‌ ಪಡೆದು ನಾವು ಸಿನಿಮಾವನ್ನು ನೋಡುತ್ತೇವೆ ಎನ್ನುವ ಸ್ಪಷ್ಟ ಸಂದೇಶವನ್ನು ನೀಡುತ್ತೇವೆ. ಕನ್ನಡ ಚಿತ್ರರಂಗ ಸೊರಗಿದೆ. ನಮ್ಮ ಚಿತ್ರಗಳನ್ನು ಎತ್ತಂಗಡಿ ಮಾಡಿ ಪರಭಾಷಾ ಸಿನಿಮಾಗಳಿಗೆ ರತ್ನಕಂಬಳಿ ಹಾಕಿ, ಹಣವನ್ನು ಲೂಟಿ ಮಾಡೋಕೆ ಅವಕಾಶ ಕೊಡುತ್ತಿದ್ದೇವೆ. ಕನ್ನಡ ತಾಯಿಯ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಕಮಲ್‌ ಹಾಸನ್‌ಗೆ ಕನಿಷ್ಠ ಗೌರವ ಇಲ್ಲ. ಅವರನ್ನು ನಾವು ತೀವ್ರವಾಗಿ ವಿರೋಧಿಸಬೇಕಾಗುತ್ತದೆ ಎಂದಿದ್ದಾರೆ.