Home News Shocking News | ಗರ್ಭಿಣಿ ಪತ್ನಿಗೆ ಹೆಚ್‍ಐವಿ (HIV) ಸೋಂಕಿತ ರಕ್ತದ ಇಂಜೆಕ್ಷನ್ ಕೊಡಿಸಿದ ಪತಿ

Shocking News | ಗರ್ಭಿಣಿ ಪತ್ನಿಗೆ ಹೆಚ್‍ಐವಿ (HIV) ಸೋಂಕಿತ ರಕ್ತದ ಇಂಜೆಕ್ಷನ್ ಕೊಡಿಸಿದ ಪತಿ

Hindu neighbor gifts plot of land

Hindu neighbour gifts land to Muslim journalist

ಅಮರಾವತಿ: ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಹೆಚ್‍ಐವಿ (HIV) ಸೋಂಕಿತ ರಕ್ತ ಇಂಜೆಕ್ಷನ್ ಕೊಡಿಸಿದ ಘಟನೆ ಆಘಾತಕಾರಿ ಘಟನೆ ಆಂಧ್ರ ಪ್ರದೇಶದಲ್ಲಿ (Andhra Pradesh) ನಡೆದಿದೆ. ಸ್ವಲ್ಪವೂ ಕರುಣೆ ತೋರದ ಇಂತಹಾ ಹೀನಾಯ ಕೃತ್ಯ ಕಂಡು ಇಡೀ ದೇಶವೇ ಬೆಚ್ಚಿ ಬಿದ್ದಿದೆ.

ಚರಣ್ ಎಂಬಾತ ಮದುವೆ ಆಗಿ ಕೆಲವರ್ಷಗಳ ಕಾಲ ತನ್ನ ಪತ್ನಿಯೊಂದಿಗೆ ಸಂತೋಷದಿಂದಲೇ ಇದ್ದ. ದಂಪತಿಗೆ ಒಬ್ಬಳು ಮಗಳು ಕೂಡಾ ಇದ್ದಾಳೆ. ಆದರೆ 2018 ರಲ್ಲಿ ಚರಣ್ ಸಂಸಾರದಲ್ಲಿ ಅಪಸ್ವರಗಳು ಕೇಳಿ ಬಂದಿದ್ದವು. ಆತ ವರದಕ್ಷಿಣೆಗಾಗಿ ಹಾಗೂ ಗಂಡು ಮಗುವನ್ನು ಹೆರುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ಆತನಿಗೆ ವಿಶಾಖಪಟ್ಟಣಂನ 21 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧ ಕೂಡಾ ಇತ್ತು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಹಿನ್ನೆಲೆಯಲ್ಲಿ ಆರೋಪಿ ಚರಣ್ ತನ್ನ ಪತ್ನಿ ಬಳಿ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾನೆ. ಸಹಜವಾಗಿ ಆಕೆ ನಿರಾಕರಿಸಿದ್ದಾರೆ.

ಹೇಗಾದರೂ ಪತ್ನಿಯಿಂದ ಡೈವೋರ್ಸ್ ಪಡೆದುಕೊಂಡು ಬಿಡುಗಡೆ ಹೊಂದಲು ಆತ ನಿರ್ಧರಿಸಿದ್ದ ಎನ್ನಲಾಗಿದೆ. ಅದಕ್ಕಾಗಿ ಆತ ಗರ್ಭಿಣಿ ಪತ್ನಿಯನ್ನು ಹೆಲ್ತ್ ಚೆಕಪ್‍ಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವೈದ್ಯರೊಬ್ಬರ ಸಹಾಯದಿಂದ ಹೆಚ್‍ಐವಿ ಸೋಂಕಿತ ರಕ್ತ ಇಂಜೆಕ್ಷನ್ ಕೊಡಿಸಿದ್ದಾನೆ ಎಂಬ ಅತ್ಯಂತ ಗಂಭೀರ ಆಪಾದನೆ ಆತನ ಮತ್ತು ವೈದ್ಯರ ಮೇಲೆ ಬಂದಿದೆ. ಉತ್ತಮ ಆರೋಗ್ಯಕ್ಕಾಗಿ ಈ ಇಂಜೆಕ್ಷನ್ ಕೊಡಿಸುತ್ತಿರುವುದಾಗಿ ಆತ ಹೇಳಿದ್ದಾನೆ.

ಅದಾದ ಸ್ವಲ್ಪ ಸಮಯದ ನಂತರ ಚರಣ್ ಪತ್ನಿಗೆ ಅನಾರೋಗ್ಯ ಕಾದಿದೆ. ಆಕೆ ಆಸ್ಪತ್ರೆಯಲ್ಲಿ ವಿವಿಧ ಚೆಕಪ್ ಮಾಡಿಕೊಳ್ಳುವ ಸಂದರ್ಭ ಆಕೆಗೆ ಹೆಚ್‍ಐವಿ ಸೋಂಕು ಬಾಧಿಸಿದ್ದು ತಿಳಿದು ಆಕೆ ಕಂಗಾಲಾಗಿ ಹೋಗಿದ್ದಳು. ಆಗ ಆಕೆ ಪತಿ ಚರಣ್‍ನನ್ನು ಪ್ರಶ್ನಿಸಿದಾಗ, ಬಹುಶಃ ಆಕೆಗೆ ಗರ್ಭಾವಸ್ಥೆಯಲ್ಲಿ ಹೆಚ್‍ಐವಿ ಸಂಪರ್ಕಿಸಿರಬಹುದು ಎಂದು ಚರಣ್ ತಿಳಿಸಿದ್ದಾನೆ. ಪತ್ನಿಗೆ ಇದರ ಬಗ್ಗೆ ಅನುಮಾನ ಉಂಟಾಗಿ ಪೊಲೀಸರ ಸಹಾಯಕ್ಕಾಗಿ ಆಕೆ ಧಾವಿಸಿದ್ದಾರೆ.

ಅಲ್ಲಿನ ತಾಡಪಲ್ಲಿ ಪೊಲೀಸರಿಗೆ ಪತಿ ಚರಣ್ ವಿರುದ್ಧ ದೂರು ದಾಖಲಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಚರಣ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈಗ ಪತ್ನಿಯ ಮೆಡಿಕಲ್ ಚೆಕಪ್ ನಡೆಯುತ್ತಿದ್ದು, ಆತನಿಗೂ ಹೆಚ್‍ಐವಿ (HIV) sonku ತಗಲಿದೆಯೇ ಎನ್ನುವುದು ಇನ್ನೂ ಸ್ಪಷ್ಟವಿಲ್ಲ.