Home latest ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಹತ್ಯೆ ಮಾಡಿದ ಪಾಪಿ ಗಂಡ!!

ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಹತ್ಯೆ ಮಾಡಿದ ಪಾಪಿ ಗಂಡ!!

Hindu neighbor gifts plot of land

Hindu neighbour gifts land to Muslim journalist

ಮಾನವನಾದವನು ಮನುಷ್ಯತ್ವವೇ ಇಲ್ಲದ ಕ್ರೂರ ಮೃಗವಾಗಿದ್ದಾನೆ. ಕರುಣೆ ಎಂಬ ಪದದ ಅರ್ಥವೇ ತಿಳಿಯದೇ, ಹೆಣ್ಣನ್ನು ತನಗೆ ಸಿಕ್ಕ ಆಟದ ಗೊಂಬೆ ಅಂದುಕೊಂಡು ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದಾನೆ. ಇದೀಗ ಇಂತಹುದೇ ಒಂದು ದುರ್ಘಟನೆ ನಡೆದಿದ್ದು, ಮಕ್ಕಳ ಮುಂದೆಯೇ ಪತ್ನಿಯನ್ನು ಕಡಾಯಿಯಲ್ಲಿ ಹಾಕಿ ಬೇಯಿಸಿ ಹತ್ಯೆ ಮಾಡಿರುವಂತಹ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆ ತನ್ನ ಹೆಂಡತಿಯನ್ನು ಕಡಾಯಿಯಲ್ಲಿ ಬೇಯಿಸಿ ಹತ್ಯೆ ಮಾಡಿರುವ ಕ್ರೂರ ಘಟನೆ ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿ ವರದಿಯಾಗಿದೆ. ಜಿಯೋ ನ್ಯೂಸ್ ಪ್ರಕಾರ, ಈ ಘಟನೆಯ ನಂತರ, ಪೊಲೀಸರು ಬುಧವಾರ ನಗರದ ಗುಲ್ಶನ್-ಎ-ಇಕ್ಬಾಲ್ ಪ್ರದೇಶದ ಖಾಸಗಿ ಶಾಲೆಯ ಅಡುಗೆಮನೆಯಲ್ಲಿ ಪ್ಯಾನ್‌ನಲ್ಲಿ ನರ್ಗೀಸ್ ಶವವನ್ನು ಪತ್ತೆ ಹಚ್ಚಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆಯ ಪತಿ ಶಾಲೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಸುಮಾರು ಎಂಟರಿಂದ ಒಂಬತ್ತು ತಿಂಗಳಿನಿಂದ ಮುಚ್ಚಲ್ಪಟ್ಟ ಶಾಲೆಯ ಸೇವಕರ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ತನಿಖೆ ಮತ್ತು ಮಕ್ಕಳ ಹೇಳಿಕೆಯನ್ನು ಪಡೆದಿರುವ ಪೊಲೀಸರು, ಬಾಣಲೆಯಲ್ಲಿ ಕುದಿಸುವ ಮೊದಲು ದಿಂಬಿನಿಂದ ಕತ್ತು ಹಿಸುಕಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಹಿಳೆಯ ಒಂದು ಕಾಲು ಕೂಡ ದೇಹದಿಂದ ಬೇರ್ಪಡಿಸಲಾಗಿದೆ ಎಂದು ಅವರು ಹೇಳಿದರು. ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಪತಿ ತನ್ನ ಪತ್ನಿಯನ್ನು ಅಕ್ರಮ ಸಂಬಂಧಕ್ಕೆ ಬಲವಂತಪಡಿಸಿದ್ದು, ಅದಕ್ಕೆ ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಊಹಿಸಲಾಗಿದೆ.

ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆತ, ತನ್ನ ಮೂವರು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ. ಈ ವೇಳೆ ಸಂತ್ರಸ್ತೆಯ 15 ವರ್ಷದ ಮಗಳು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಉಳಿದ ಮೂರು ಮಕ್ಕಳನ್ನು ಪಾಲನೆ ಮಾಡುವ ಜವಾಬ್ದಾರಿ ಪೊಲೀಸರ ಮೇಲಿದ್ದು, ಪ್ರಕರಣ ದಾಖಲಾಗಿಸಿ ಆರೋಪಿಗಳ ಬಂಧನಕ್ಕೆ ಗಾಳ ಬೀಸಲಾಗುತ್ತಿದೆ.