Home Interesting ಪತಿ ಜೊತೆ ಜಗಳವಾಡಿ ನೊಂದ ಮಹಿಳೆ ತನ್ನ ಆರು ಮಕ್ಕಳನ್ನು ಬಾವಿಗೆಸೆದು, ತಾನೂ ಆತ್ಮಹತ್ಯೆ!

ಪತಿ ಜೊತೆ ಜಗಳವಾಡಿ ನೊಂದ ಮಹಿಳೆ ತನ್ನ ಆರು ಮಕ್ಕಳನ್ನು ಬಾವಿಗೆಸೆದು, ತಾನೂ ಆತ್ಮಹತ್ಯೆ!

Hindu neighbor gifts plot of land

Hindu neighbour gifts land to Muslim journalist

ಪತಿ ಜೊತೆ ಜಗಳವಾಡಿಕೊಂಡ ಮಹಿಳೆ ಬೇಸರದಿಂದ ತನ್ನ ಆರು ಮಕ್ಕಳನ್ನು ಬಾವಿಗೆಸೆದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.

ಆತ್ಮಹತ್ಯೆಗೆ ಪ್ರಯತ್ನಿಸಿದ ಮಹಿಳೆ ಅಪಾಯದಿಂದ ಪಾರಾಗಿದ್ದು, ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ಪತಿ ಜೊತೆ ಮಹಿಳೆ ಜಗಳವಾಡಿದ್ದಾಳೆ. ಇದರಿಂದ ನೊಂದು ತನ್ನ ಐವರು ಪುತ್ರಿಯರು ಹಾಗೂ ಒಂದೂವರೆ ವರ್ಷದ ಮಗನನ್ನು ಬಾವಿಗೆ ಎಸೆದು, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಯಲ್ಲಿ ಮಕ್ಕಳು ಸಾವನ್ನಪ್ಪಿದ್ದು, ಮಹಿಳೆಯನ್ನು ರಕ್ಷಿಸಲಾಗಿದೆ.

ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಬಾವಿಯಲ್ಲಿದ್ದ ಎಲ್ಲಾ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.