Home latest ವಿವಾಹಿತ ಹೆಣ್ಣುಮಕ್ಕಳು ಪೋಷಕರ ಮರಣದ ನಂತರ ವಿಮೆ ಪಡೆಯಲು ಅರ್ಹರು- ಹೈಕೋರ್ಟ್‌

ವಿವಾಹಿತ ಹೆಣ್ಣುಮಕ್ಕಳು ಪೋಷಕರ ಮರಣದ ನಂತರ ವಿಮೆ ಪಡೆಯಲು ಅರ್ಹರು- ಹೈಕೋರ್ಟ್‌

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಪೋಷಕರ ಮರಣದ ನಂತರ ಮಹಿಳೆಯರು ಪರಿಹಾರಕ್ಕೆ ಅರ್ಹರೆ ಎಂಬುದಕ್ಕೆ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹಿತ ಹೆಣ್ಣುಮಕ್ಕಳು ವಿಮಾ ಕಂಪನಿಗಳಿಂದ ಪರಿಹಾರವನ್ನ ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಅಪಘಾತದಲ್ಲಿ ತಮ್ಮ ತಂದೆ-ತಾಯಿಯ ಮರಣದ ನಂತರ ಹೆಣ್ಣು ಮಕ್ಕಳಿಗೂ ವಿಮೆ ಪಡೆಯುವ ಅರ್ಹತೆ ಇದೆ. ‘ವಿವಾಹಿತ ಪುತ್ರರು ಅಥವಾ ವಿವಾಹಿತ ಹೆಣ್ಣುಮಕ್ಕಳು ಇಬ್ಬರೂ ಪೋಷಕರ ಮರಣದ ನಂತರ ಪರಿಹಾರವನ್ನ ಪಡೆಯಲು ಅರ್ಹರಾಗಿರುತ್ತಾರೆ” ಎಂದು ಹೈಕೋರ್ಟ್ ಹೇಳಿದೆ. ಪುತ್ರರಿಗೆ ಪರಿಹಾರದ ಹಕ್ಕನ್ನ ನೀಡುವಂತೆ ಸುಪ್ರೀಂಕೋರ್ಟ್‌ನ ಆದೇಶವನ್ನ ನ್ಯಾಯಾಲಯ ಉಲ್ಲೇಖಿಸಿದ್ದು, ಅದಕ್ಕೆ ತಾರತಮ್ಯ ಮಾಡುವಂತಿಲ್ಲ ಎಂದು ಸೂಚಿಸಿದೆ. ಹೈಕೋರ್ಟ್ʼನ ನ್ಯಾಯಾಧೀಶರನ್ನೊಳಗೊಂಡ ಈ ಪೀಠದಲ್ಲಿ ವಿಮಾ ಕಂಪನಿ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನ ಎಚ್.ಪಿ ಸಂದೇಶ್ ವಿಚಾರಣೆ ನಡೆಸಿದರು.

ಪ್ರಕರಣದ ವಿವರ :
ಇದೇ 2012ರ ಏಪ್ರಿಲ್ 12ರಂದು ಹುಬ್ಬಳ್ಳಿಯ ಯಮನೂರಿನ ಬಳಿ ಕಾರು ಅಪಘಾತಕ್ಕೀಡಾಗಿತ್ತು. ಇದರಲ್ಲಿ 57 ವರ್ಷದ ರೇಣುಕಾ ಸಾವನ್ನಪ್ಪಿದ್ದರು. ಪರಿಹಾರ ನೀಡುವಂತೆ ರೇಣುಕಾ ಅವರ ಪತಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಒತ್ತಾಯಿಸಿದ್ದರು.

ಮೋಟಾರು ಅಪಘಾತ ಕ್ಲೇಮ್ಸ್ ಟ್ರಿಬ್ಯೂನಲ್ ಕುಟುಂಬ ಸದಸ್ಯರಿಗೆ 5,91,600ರಷ್ಟು ವಾರ್ಷಿಕ ಬಡ್ಡಿಯೊಂದಿಗೆ 6ರಷ್ಟು ಪರಿಹಾರವನ್ನು ನೀಡಿತು. ಇದನ್ನು ವಿಮಾ ಕಂಪನಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು, ವಿವಾಹಿತ ಹೆಣ್ಣುಮಕ್ಕಳು ಪರಿಹಾರವನ್ನ ಪಡೆಯಲು ಸಾಧ್ಯವಿಲ್ಲ ಮತ್ತು ಅವರು ಅವಲಂಬಿತರಲ್ಲ ಎಂದು ತೀರ್ಪು ನೀಡಿತು. ಆದ್ದರಿಂದ ಅವಲಂಬನೆ ನಷ್ಟ ಎಂಬ ಶೀರ್ಷಿಕೆಯಡಿ ಪರಿಹಾರ ನೀಡಿದ್ದು ತಪ್ಪು. ಆಸ್ತಿ ನಷ್ಟ ಎಂಬ ತಲೆಬರಹದಡಿ ಮಾತ್ರ ಪರಿಹಾರ ನೀಡಬೇಕೆಂದು ವಿಮಾದಾರರಿಂದ ವಾದಿಸಲಾಗಿತ್ತು.

ಮೃತರ ವಯಸ್ಸು ಮತ್ತು ಅವರ ಆದಾಯದ ಬಗ್ಗೆ ಅನುಮಾನಗಳು ಸೇರಿದಂತೆ ವಿಮಾ ಕಂಪನಿಯ ಇತರ ವಾದಗಳನ್ನ ನ್ಯಾಯಾಲಯ ತಿರಸ್ಕರಿಸಿದೆ. ಸತ್ತವರು ಖರೀದಿಸಿದ ಹೊಲಿಗೆ ಯಂತ್ರದ ವಾರಂಟಿ ಕಾರ್ಡ್ ನ್ಯಾಯಾಧಿಕರಣಕ್ಕೆ ಅವರ ತಿಂಗಳಿಗೆ 4,500 ರೂಪಾಯಿಗಳ ಆದಾಯವನ್ನ ಲೆಕ್ಕಹಾಕಲು ಉಪಯುಕ್ತವಾಗಿದೆ. ಟ್ರಿಬ್ಯೂನಲ್‌ನಿಂದ ಹೆಚ್ಚಿನ ಪರಿಹಾರವನ್ನ ಪಾವತಿಸಲಾಗಿದೆ ಎಂಬ ವಿಮಾದಾರರ ವಾದವನ್ನ ಹೈಕೋರ್ಟ್ ತಿರಸ್ಕರಿಸಿತು ಮತ್ತು ಅದರ ಮನವಿಯನ್ನು ವಜಾಗೊಳಿಸಿತು.