Home Interesting ‘ಹರ್ ಘರ್ ತಿರಂಗಾ’ ಹಾಡು ಬಿಡುಗಡೆ; ದೇಶಭಕ್ತಿಯನ್ನು ಹೊಮ್ಮಿಸುವ ವೀಡಿಯೋ ಇಲ್ಲಿದೆ ನೋಡಿ

‘ಹರ್ ಘರ್ ತಿರಂಗಾ’ ಹಾಡು ಬಿಡುಗಡೆ; ದೇಶಭಕ್ತಿಯನ್ನು ಹೊಮ್ಮಿಸುವ ವೀಡಿಯೋ ಇಲ್ಲಿದೆ ನೋಡಿ

Hindu neighbor gifts plot of land

Hindu neighbour gifts land to Muslim journalist

ನವದೆಹಲಿ: ಭಾರತ ದೇಶ 75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ತೇಲಾಡುತ್ತಿದ್ದು, ದೇಶ ಭಕ್ತಿ ಉಕ್ಕಿ ಹರಿಯುತ್ತಿದೆ. ಅಮೃತ ಮಹೋತ್ಸವಕ್ಕೆ ಈಗಾಗಲೇ ದಿನ ಗಣನೆ ಶುರುವಾಗಿದ್ದು, ವಿಜೃಂಭಣೆಯ ಆಚರಣೆಗೆ ಎಲ್ಲೆಡೆ ಅದ್ದೂರಿ ತಯಾರಿ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಇದಾಗಲೇ ಹಲವರು ತಮ್ಮ ಸಾಮಾಜಿಕ ಜಾಲತಾಣದ ಡಿಪಿಗಳನ್ನು ತ್ರಿವರ್ಣ ಧ್ವಜದ ಚಿತ್ರ ಹಾಕಿಕೊಂಡಿದ್ದಾರೆ. ಇದರ ಮೂಲಕ ದೇಶದ ಮೇಲಿರುವ ಪ್ರೀತಿ, ಭಕ್ತಿಯನ್ನು ಸಾರಿ ತೋರಿಸಿದ್ದಾರೆ.

ಅದರ ಜೊತೆಗೆ ‘ಹರ್ ಘರ್ ತಿರಂಗಾ’ ವಾಕ್ಯ ಮೊಳಗುತ್ತಿದೆ. ಇದನ್ನು ಪಾಲಿಸುತ್ತಿರುವ ಭಾರತೀಯರು ಮನೆಗಳಲ್ಲಿ ತ್ರಿರಂಗ ಹಾರಿಸಿದ್ದಾರೆ. ಇದರ ನಡುವೆಯೇ ಇದೀಗ ಹರ್ ಘರ್ ತಿರಂಗಾ ಆಯಂಥಮ್​ ಸಾಂಗ್ ​ ಬಿಡುಗಡೆ ಆಗಿದ್ದು, ಬಹುತೇಕ ನಟರು, ಕ್ರಿಕೆಟ್​ ತಾರೆಯರು, ಕ್ರೀಡಾಪಟುಗಳು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದಲ್ಲಿಯೂ ಹಾಡು ಕೇಳಿಬಂದಿದ್ದು, ಕ್ರಿಕೆಟಿಗ ಕೆ.ಎಲ್​ರಾಹುಲ್​ ಇದನ್ನು ಹೇಳಿದ್ದಾರೆ. ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿನಲ್ಲಿ, ಭಾರತದ ಬಹುತೇಕ ಎಲ್ಲಾ ಭಾಷೆಗಳನ್ನು ಈ ಹಾಡಿನಲ್ಲಿ ನಾವು ಕೇಳಬಹುದಾಗಿದೆ. ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಕೆಎಲ್​ ರಾಹುಲ್​, ಅಮಿತಾಭ್​​ ಬಚ್ಚನ್, ಅಕ್ಷಯ್ ಕುಮಾರ್, ಪ್ರಭಾಸ್, ಅಜಯ್ ದೇವಗನ್, ಕೀರ್ತಿ ಸುರೇಶ್, ಅನುಷ್ಕಾ ಶರ್ಮಾ, ಪಿ.ವಿ ಸಿಂಧು ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋ Ministry Of culture ಪೇಜ್ ನಲ್ಲಿ ಬಿಡುಗಡೆಯಾಗಿದ್ದು, ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ದೇಶಭಕ್ತಿಯನ್ನು ಹೊಮ್ಮಿಸುವ ಈ ಹಾಡನ್ನೂ ನೀವೂ ಕೇಳಿ, ದೇಶದ ಗೌರವವನ್ನೂ ಹೆಚ್ಚಿಸಿಕೊಳ್ಳಿ.