Home Interesting 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಬಿಗ್ ಆಫರ್ ಘೋಷಿಸಿದ ಸರ್ಕಾರ!

10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಬಿಗ್ ಆಫರ್ ಘೋಷಿಸಿದ ಸರ್ಕಾರ!

Hindu neighbor gifts plot of land

Hindu neighbour gifts land to Muslim journalist

ಇಂದು ಒಬ್ಬರಿಗೆ ಒಂದೋ,ಎರಡೋ, ತಪ್ಪಿದರೆ ಮೂರು ಮೂರು ಮಕ್ಕಳಿರುವುದು ಕಾಮನ್. ಆದ್ರೆ, ಮಹಿಳೆಯರೇ ನಿಮಗೊಂದು ಉತ್ತಮ ಆಫರ್ ಇಲ್ಲಿದ್ದು, ನೀವೂ ಹತ್ತು ಮಕ್ಕಳನ್ನು ಹೆತ್ತು ಹೊತ್ತರೆ ನಿಮಿಗೆ ಸರ್ಕಾರ ನೀಡುತ್ತೆ ಹಣದ ಬಿಗ್ ಆಫರ್.

ಇಂತಹ ಒಂದು ಸ್ಪೆಷಲ್ ಆಫರ್ ಗೆ ಕಾರಣವಾಗಿದೆ ಇಲ್ಲಿನ ಜನಸಂಖ್ಯೆ. ಹೌದು. ದೇಶದ ಜನಸಂಖ್ಯಾ ಬಿಕ್ಕಟ್ಟನ್ನು ಹೋಗಲಾಡಿಸಲು 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಈ ಆಫರ್ ಘೋಷಿಸಲಾಗಿದೆ. ಇಂತಹ ಒಂದು ಮಹತ್ವದ ಆಫರ್ ಘೋಷಣೆಯಾಗಿದ್ದು ರಷ್ಯಾ ಸರ್ಕಾರದಲ್ಲಿ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್,​ ಹಣದ ಆಫರ್​ ಅನ್ನು ಘೋಷಣೆ ಮಾಡಿದ್ದಾರೆ. ಮಹಾಮರಿ ಕರೊನಾ ಹಾಗೂ ರಷ್ಯಾ-ಯೂಕ್ರೇನ್​ ಯುದ್ಧದಿಂದಾಗಿ ರಷ್ಯಾದಲ್ಲಿ ಸಾಕಷ್ಟು ಸಾವುಗಳು ಸಂಭವಿಸಿದ್ದು, ಜನಸಂಖ್ಯೆ ಬಿಕ್ಕಟ್ಟು ಉಂಟಾಗಿರುವುದರಿಂದ ರಷ್ಯಾ ಸರ್ಕಾರ ಈ ವಿನೂತನ ಯೋಜನೆಗೆ ಮುಂದಾಗಿದೆ. ಹತ್ತು ಮಕ್ಕಳಿಗೆ ಜನ್ಮ ನೀಡಿ, ಆ ಹತ್ತು ಮಕ್ಕಳನ್ನು ಜೀವಂತ ಇರಿಸಿದರೆ 13,500 ಪೌಂಡ್​ (12,93,163 ರೂಪಾಯಿ) ಹಣದ ಜೊತೆಗೆ ಅನೇಕ ಸೌಲಭ್ಯಗಳನ್ನು ರಷ್ಯಾ ಸರ್ಕಾರ ಘೋಷಣೆ ಮಾಡಿದೆ.

ಈ ವರ್ಷದ ಮಾರ್ಚ್​ನಿಂದ ರಷ್ಯಾದಲ್ಲಿ ಅತ್ಯಂತ ಪ್ರಮಾಣದಲ್ಲಿ ಪ್ರತಿನಿತ್ಯದ ಕರೊನಾ ವೈರಸ್ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಯುದ್ಧದಿಂದಾಗಿ ಯೂಕ್ರೇನ್​ನಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ರಷ್ಯಾ ಯೋಧರು ಮೃತಪಟ್ಟಿದ್ದಾರೆ. ಈ ಯೋಜನೆ ಬಗ್ಗೆ ರಷ್ಯಾದ ರಾಜಕಾರಣಿ ಮತ್ತು ಭದ್ರತಾ ತಜ್ಞ ಡಾ. ಜೆನ್ನಿ ಮ್ಯಾಥರ್ಸ್​ ಮಾತನಾಡಿದ್ದು, ರಷ್ಯಾ ಹೊರ ತಂದಿರುವ ಹೊಸ ಯೋಜನೆಯನ್ನು ಮದರ್​ ಹೀರೋಯಿನ್​ (ತಾಯಿಯೇ ನಾಯಕಿ) ಎಂದು ಕರೆಯಲಾಗುತ್ತದೆ. ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಮರಳಿ ಹಾದಿಗೆ ತರುವ ಉಪಕ್ರಮವಾಗಿ ಈ ಯೋಜನೆಯನ್ನು ಅಧ್ಯಕ್ಷ ಪುತಿನ್​ ಜಾರಿಗೆ ತಂದಿದ್ದಾರೆ ಎಂದು ಹೇಳಿದ್ದಾರೆ.

ಯಾರು ರಷ್ಯಾದಲ್ಲಿ ದೊಡ್ಡ ಕುಟುಂಬವನ್ನು ಹೊಂದುತ್ತಾರೋ ಅವರು ದೇಶ ಪ್ರೇಮಿಗಳು ಎಂದು ಪುತಿನ್​ ಕರೆದಿದ್ದಾರೆ. ಇದು ರಷ್ಯಾದ ಮಹಿಳೆಯರನ್ನು ಪ್ರೋತ್ಸಾಹಿಸಲು ಅಥವಾ ಅವರಿಗೆ ಹೆಚ್ಚು ಮಕ್ಕಳನ್ನು ಹೊಂದಲು ಮತ್ತು ನಿಜವಾಗಿಯೂ ದೊಡ್ಡ ಕುಟುಂಬಗಳನ್ನು ಹೊಂದಲು ಪ್ರೇರೇಪಿಸುವ ಪ್ರಯತ್ನವಾಗಿದೆ ಎಂದು ಮ್ಯಾಥರ್ಸ್​ ಅವರು ಹೇಳಿದ್ದಾರೆ.

ಆದರೆ, ರಷ್ಯಾದಲ್ಲಿ ಅನೇಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿರುವಾಗ 13,500 ಪೌಂಡ್‌ಗಳಿಗೆ 10 ಮಕ್ಕಳನ್ನು ಬೆಳೆಸುವುದು ಸುಲಭದ ಮಾತಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ, ಈ ಯೋಜನೆಯು ಒಂದು ಹತಾಶ ಪ್ರಯತ್ನ ಎಂದು ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.