Home News Google Chrome: ಗೂಗಲ್ ಕ್ರೋಮ್ ಬಳಕೆದಾರರೇ ನಿಮಗೊಂದು ಎಚ್ಚರಿಕೆಯ ಸಂದೇಶ

Google Chrome: ಗೂಗಲ್ ಕ್ರೋಮ್ ಬಳಕೆದಾರರೇ ನಿಮಗೊಂದು ಎಚ್ಚರಿಕೆಯ ಸಂದೇಶ

Hindu neighbor gifts plot of land

Hindu neighbour gifts land to Muslim journalist

ಭಾರತ ಸರಕಾರ ಡೆಸ್ಕ್ ಟಾಪ್ ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ಬಳಸುತ್ತಿರುವವರಿಗೆ ಎಚ್ಚರಿಕೆಯೊಂದನ್ನು ನೀಡಿದೆ. ಏಕೆಂದರೆ ಗೂಗಲ್ ಕ್ರೋಮ್‌ನಲ್ಲಿ ಕೆಲ ನ್ಯೂನತೆಗಳು ಕಂಡುಬಂದಿರುವುದು ಗಮನಕ್ಕೆ ಬಂದಿರುವುದರಿಂದ, ಹಾಗಾಗಿ ಹ್ಯಾಕರುಗಳು ನಿಮ್ಮ ಸಿಸ್ಟಮ್ ಅನ್ನು ಸುಲಭವಾಗಿ ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದೆ.

ಇದೊಂದು ಬಹಳ ಮಹತ್ವದ ಮಾಹಿತಿಯಾಗಿದ್ದು, ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ಈ ಮಾಹಿತಿ ತಿಳಿಸಿದೆ. ವೆಬ್ ಬ್ರೌಸರ್‌ನಲ್ಲಿನ ದುರುದ್ದೇಶಪೂರಿತ ಕಾರ್ಯಾಚರಣೆಯನ್ನು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಪತ್ತೆ ಹಚ್ಚಿದೆ. ಈ ಕಾರಣದಿಂದ ಡೆಸ್ಕ್ ಟಾಪ್ ಕ್ರೋಮ್ ಬ್ರೌಸರ್ ಬಳಕೆದಾರರು ಎಚ್ಚರಿಕೆಯಿಂದ ಇರುವಂತೆ ಹೇಳಿದೆ.

ಡೆಸ್ಕ್ ಟಾಪ್ Google Chrome ನಲ್ಲಿ ಕಂಡು ಬಂದಿರುವ ನೂನ್ಯತೆಯಿಂದ ಸುರಕ್ಷತಾ ನಿರ್ಬಂಧವನ್ನು ಬೈಪಾಸ್ ಮಾಡಲು, ಅನಿಯಂತ್ರಿತ ಕೋಡ್ ಅನ್ನು
ಕಾರ್ಯಗತಗೊಳಿಸಲು ಸುಲಭವಾಗುತ್ತಿದೆ. ಹೀಗಾಗಿ ಹಳೆಯ ಗೂಗಲ್ ಕ್ರೋಮ್ ಅನ್ನು ಅಪ್
ಗ್ರೇಡ್ ಮಾಡುವಂತೆ CERT-IN ತಿಳಿಸಿದೆ.
ಈ ನ್ಯೂನತೆಗಳು ಡೆಸ್ಕ್‌ಟಾಪ್‌ನಲ್ಲಿನ ಹಳೆಯ
Google Chrome ನಲ್ಲಿ ಅಸ್ತಿತ್ವದಲ್ಲಿವೆ.

ಫೇಸ್‌ಸಿಎಸ್, ಸ್ವಿಫ್ಟ್‌ ಶೇಡರ್, ಆಂಗಲ್, ಬ್ಲಿಂಕ್, ಸೈನ್ ಇನ್ ಫ್ಲೋ ಮತ್ತು ಕ್ರೋಮ್ ಓಎಸ್ ಶೆಲ್‌ನ
ಉಚಿತ ಬಳಕೆಯಿಂದಾಗಿ ಕ್ರೋಮ್‌ನಲ್ಲಿ ಈ
ದೋಷಗಳು ಕಂಡುಬಂದಿವೆ ಎಂದು CERT-IN
ತಂಡವು ವರದಿ ಮಾಡಿದೆ.

ಈ ಎಲ್ಲಾ ನೂನ್ಯತೆಗಳನ್ನು ಹ್ಯಾಕರುಗಳು ಬಳಸಿಕೊಂಡು, ಬಳಕೆದಾರರನ್ನು ದುರುದ್ದೇಶಪೂರಿತ ವೆಬ್‌ಸೈಟ್‌ಗಳ ಬಗ್ಗೆ ನಿರ್ದೇಶನ ನೀಡಬಹುದು ಎಂದು ಸಂಸ್ಥೆ ಕಟು ಎಚ್ಚರಿಕೆ ನೀಡಿದೆ. ಅಲ್ಲದೆ ಕಂಪ್ಯೂಟರ್‌ನಲ್ಲಿ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡುವ ಮೂಲಕ ಹ್ಯಾಕರುಗಳು ಸಿಸ್ಟಮ್ ಅನ್ನು ನಿಯಂತ್ರಕ್ಕೆ ತೆಗೆದುಕೊಂಡು ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಬಹುದು. ಈ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಿನ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಬಹುದು ಎಂದು ಎಚ್ಚರಿಸಿದ್ದಾರೆ.

ಡೆಸ್ಕ್ ಟಾಪ್ ಗೂಗಲ್ ಕ್ರೋಮ್‌ನ 105.0.5195.125 ಗಿಂತ ಮುಂಚಿನ ಸಾಫ್ಟ್‌ವೇರ್ ಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಹಾಗಾಗಿ ಹಳೆಯ ಗೂಗಲ್ ಕ್ರೋಮ್ ಆವೃತ್ತಿಯನ್ನು ಅನ್‌ಇನ್‌ಸ್ಟಾಲ್ ಮಾಡಿ, ಹೊಸ ಆವೃತ್ತಿಯನ್ನು ಡೌನ್‌ಲೋಡ್ ಮಾಡುವಂತೆ CERTHIN ಹೇಳಿದೆ.