Home Interesting ಲವ್ ಜಿಹಾದ್ ಎಸಗಿದ ವ್ಯಕ್ತಿಯ ಮೇಲೆ ‘ ಗೀರು ‘ ಅಸ್ತ್ರ ಪ್ರಯೋಗ, ಹಿಂದೂ ಹುಡುಗಿಯ...

ಲವ್ ಜಿಹಾದ್ ಎಸಗಿದ ವ್ಯಕ್ತಿಯ ಮೇಲೆ ‘ ಗೀರು ‘ ಅಸ್ತ್ರ ಪ್ರಯೋಗ, ಹಿಂದೂ ಹುಡುಗಿಯ ದ್ವೇಷಾಗ್ನಿಗೆ ಪೊಲೀಸರೇ ತತ್ತರ

Hindu neighbor gifts plot of land

Hindu neighbour gifts land to Muslim journalist

ಲಖನೌ: ಮದುವೆಯಾಗುವ ಭರವಸೆ ಕೊಟ್ಟು ಉಪಾಯದಿಂದ ದೈಹಿಕ ಸಂಪರ್ಕವನ್ನೂ ಸಾಧಿಸಿ, ಗೆದ್ದೆನೆಂಬ ಖುಷಿಯಲ್ಲಿ ಇದ್ದ ಮತ್ತು ಮದುವೆಗೆ ನಿರಾಕರಿಸಿದ ಜಿಹಾದಿ ಪ್ರಿಯತಮನನ್ನು ಹಿಂದೂ ಹುಡುಗಿಯೊಬ್ಬಳು ಪೀಸ್ ಪೀಸ್ ಮಾಡಿದ ಘಟನೆ ನಡೆದಿದೆ. ಲವ್ ಸೆಕ್ಸ್ ಜಿಹಾದ್ ಎಸಗಿದ ಪ್ರಿಯತಮನ ಮೇಲೆ ಆಕೆಯ ರೋಶಾಗ್ನಿಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಪ್ರೀತಿ ಶರ್ಮಾ ಮತ್ತು ಫಿರೋಜ್ ಅಲಿಯಾಸ್ ಚ್ಚಾನಿ ಇಬ್ಬರೂ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಜತೆಯಲ್ಲಿಯೇ ಅನೇಕ ವರ್ಷ ಇದ್ದರು. ಈ ವೇಳೆ ಅನೇಕ ಬಾರಿ ಈಕೆಯ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಫಿರೋಜ್. ಮದುವೆಯಾಗುವ ಭರವಸೆ ನೀಡಿ ಆತ ದೈಹಿಕ ಸಂಪರ್ಕ ಸಾಧಿಸಿದ್ದ. ಎಲ್ಲಾ ಲವ್ ಜಿಹಾದ್ ನಂತೆಯೇ ತನಗೆ ಬೇಕಾದಷ್ಟು ದಿನ ಸುಮಾರು ದಿನ ಆತ ಎಂಜಾಯ್ ಮಾಡಿದ್ದ. ನಂತರ ಧರ್ಮವನ್ನು ಸಡನ್ನಾಗಿ ಅಡ್ಡ ತಂದು ನಿಲ್ಲಿಸಿದ್ದಾನೆ.

ಕೊನೆಗೆ ಯುವತಿ, ಪದೇ ಪದೇ ಮದುವೆಯ ವಿಷಯ ಎತ್ತಿದ್ದಾಳೆ. ಆಗ ಆತ ಇದಕ್ಕೆ ಒಪ್ಪಲಿಲ್ಲ. ತಮ್ಮದು ಬೇರೆ ಬೇರೆ ಧರ್ಮ ಆಗಿರುವ ಕಾರಣ ಮದುವೆ ಸಾಧ್ಯವಿಲ್ಲ ಎಂದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ. ಎಷ್ಟೇ ಕೋರಿಕೊಂಡರೂ, ಕಡೆಗೆ ಬೇಡಿಕೊಂಡರೂ ಫಲಿತಾಂಶ ಶೂನ್ಯ. ಆತ ಮದುವೆಗೆ ಒಪ್ಪಲಿಲ್ಲ. ಪ್ರತಿ ಬಾರಿ ಕೂಡಾ ಆತ ಇನ್ನಷ್ಟು ಕಠೋರ ಆಗುತ್ತಿದ್ದ. ಅದಲ್ಲದೆ ಆತ ನೀನು ನಡತೆ ಗೆಟ್ಟವಳು ಎಂದು ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವತಿ ಒಂದು ನಿರ್ಧಾರಕ್ಕೆ ಬಂದಿದ್ದಾಳೆ.

ಆಕೆ ಇತರ ಲವ್ ಜಿಹಾದ್ ಗೆ ಬಲಿಯಾದ ಹುಡುಗೀರ ಹಾಗೆ ಅಳುತ್ತಾ ಕೂರಲಿಲ್ಲ. ಅಥವಾ, ಬದುಕು ಹಾದಿ ತಪ್ಪಿಸಿಕೊಂಡು ರಸ್ತೆ ಬದಿಯಲ್ಲಿ ಹೂ ಮಾರುತ್ತ, ಮೀನು ಮಾರುತ್ತಾ ಬದುಕು ತಳ್ಳಲಿಲ್ಲ. ಆಕೆ ಸೀದಾ ಎದ್ದು ಹೋಗಿ ಅಂಗಡಿಯಿಂದ ಒಳ್ಲೆಯ ಕ್ವಾಲಿಟಿ lಯ ಒಂದು ರೇಜರ್ ಕೊಳ್ಳುತ್ತಾಳೆ ಮತ್ತು 70 ಕೆಜಿ ತೂಕ ಹೊರಬಲ್ಲ ಒಂದು ಟ್ರಾಲಿ ಬ್ಯಾಗ್ ಖರೀದಿಸುತ್ತಾಳೆ. ಪ್ರಿಯಕರನನ್ನು ಒಳ್ಳೆಯ ಮಾತಾಡಿ ಗುಪ್ತ ಜಾಗಕ್ಕೆ ಕರೆಸಿಕೊಂಡು ಅಲ್ಲೂ ಒಂದು ಸಲ ಆತನನ್ನು ಬೇಡಿಕೊಳ್ಳುತ್ತಾಳೆ. ಸುಖ ಹೀರಿ ಚಪ್ಪರಿಸಿದ ಮನಸ್ಸು ಕರಗದೆ ಆಕೆಯನ್ನು ಧಿಕ್ಕರಿಸುತ್ತಾನೆ. ಆಗ ಅಡ್ಡಕ್ಕೆ ಬಿತ್ತು ಮೊದಲ ಗೀರು. ಆಮೇಲೆ ಎಲ್ಲಿ ಹೇಗೆ ಗೀಚಿ ಹಾಕಿದಳು ಎಂಬುದು ಆಕೆಗೂ ಬಹುಶಃ ನೆನಪಾಗಲಿಲ್ಲ. ಆ ರೀತಿ ಅಡ್ಡಾದಿಡ್ಡಿ ಕುಯ್ದು ಗುಪ್ಪೆ ಮಾಂಸ ಮಾಡಿ ಹಾಕಿದ್ದಾಳೆ ಪ್ರೀತಿ ಶರ್ಮಾ. ನಂತರ ತಾನು ಕೊಂಡ ಸೂಟ್ ಕೇಸ್ ನಲ್ಲಿ ಪ್ಯಾಕ್ ಮಾಡಿ ಅದರ ವಿಲೇವಾರಿಗೆ ಪ್ಲಾನ್ ಮಾಡಿದ್ದಾಳೆ.

ನಂತರ ಹೆಣವನ್ನು ಸಾಗಿಸಲು ಯತ್ನಿಸುತ್ತಿದ್ದಳು. ತಡರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆಯೊಬ್ಬರು ಕಪ್ಪು ಟ್ರಾಲಿ ಬ್ಯಾಗ್ ಹಿಡಿದುಕೊಂಡು ನಡೆದು ಬರುತ್ತಿರುವುದನ್ನು ಗಮನಿಸಿ ಸಂದೇಹಗೊಂಡಿದ್ದಾರೆ. ಪ್ರಶ್ನಿಸಿದಾಗ ಪ್ರೀತಿ ತಡವರಿಸಿದ್ದಾಳೆ. ನಂತರ ಕಾನ್ ಸ್ಟೇಬಲ್ ಸೂಟ್‌ಕೇಸ್ ತೆರೆದಾಗ ಶವ ಕಂಡಿದೆ. ಯುವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಇಷ್ಟು ವರ್ಷ ತನ್ನನ್ನು ಮದುವೆಯಾಗುವುದಾಗಿ ಬಳಸಿಕೊಂಡು ನಂತರ ನಡತೆಗೆಟ್ಟವಳು ಎಂದು ಹೇಳಿದ್ದರಿಂದ ಕೋಪಗೊಂಡು ಹೀಗೆ ಮಾಡಿದೆ ಎಂದಿದ್ದಾಳೆ. ಕಾನೂನನ್ನು ಸ್ವಂತ ಕೈಗೆ ತೆಗೆದುಕೊಂಡು ಲವ್ ಜಿಹಾದ್ ಗೆ ಶಿಕ್ಷೆ ವಿಧಿಸಿದ್ದಾಳೆ. ಅಂದಹಾಗೆ ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ.